Advertisement
45 ಮಂದಿ ಸದಸ್ಯ ಬಲದ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ ಓರ್ವ ಹಾಗೂ ಐವರು ಪಕ್ಷೇತರ ಸದಸ್ಯರನ್ನು ಹೊಂದಿದೆ. ಐವರು ಪಕ್ಷೇತರರಲ್ಲಿ ನಾಲ್ವರು ಕಮಲದ ತೆಕ್ಕೆಗೆ ಜಾರಿರುವುದರಿಂದ ಬಿಜೆಪಿ ಬಲ ಈಗ 21ಕ್ಕೇರಿದೆ. ಇನ್ನು ಮತ್ತೋರ್ವ ಪಕ್ಷೇತರ ಅಭ್ಯರ್ಥಿ ತಮಗೆ ಬೆಂಬಲವೆಂದು ಉಭಯ ಪಕ್ಷಗಳು ಹೇಳಿಕೊಳ್ಳುತ್ತಿವೆ. ಆದರೆ, ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಜೆಡಿಎಸ್‌ನ ಓರ್ವ ಮಹಿಳಾ ಸದಸ್ಯೆ ಯಾರಿಗೆ ಒಲವು ತೋರಲಿದ್ದಾರೆಂಬುದು ಮಾತ್ರ ಒಂದಿಷ್ಟು ಕುತೂಹಲ ಮೂಡಿಸಿದೆ.
ಮಂದಿ ಬಿಜೆಪಿ ಹಾಗೂ ಐವರು ಕಾಂಗ್ರೆಸ್ ಎಂಎಲ್‌ಸಿಗಳಾಗಿದ್ದಾರೆ. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಲೆಹಾರ್ ಸಿಂಗ್ ಸಿರಾಯ್, ನಂಜುಂಡಿ ಕೆ.ಪಿ., ರವಿಕುಮಾರ್ ಎನ್., ಎಸ್.ರುದ್ರೇಗೌಡ, ತೇಜಸ್ವಿನಿ ಗೌಡ, ಡಿ.ಯು.ಮಲ್ಲಿಕಾರ್ಜುನ್, ಹನುಮಂತ ನಿರಾಣಿ ಹಾಗೂ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಮೋಹನ್‌ಕುಮಾರ್ ಕೊಂಡಜ್ಜಿ, ಕೆ.ಸಿ.ಕೊಂಡಯ್ಯ, ಎಚ್. ಎಂ.ರೇವಣ್ಣ ಹಾಗೂ ಜಿ.ರಘು ಆಚಾರ್ ಸೇರ್ಪಡೆಯಿಂದ ಪರಿಷ್ಕೃತ ಮತದಾರರ ಪಟ್ಟಿ ಹಿಗ್ಗಿದೆ. ಪರಿಷ್ಕೃತ ಮತದಾರರ ಪಟ್ಟಿಯಿಂದಾಗಿ ಈಗ ಕಾಂಗ್ರೆಸ್ 30 ಹಾಗೂ ಬಿಜೆಪಿ 31 ಮತಗಳನ್ನ ಹೊಂದಿದಂತಾಗಿದ್ದು, ಪಾಲಿಕೆಯ ಓರ್ವ ಜೆಡಿಎಸ್ ಸದಸ್ಯೆ ನಿರ್ಧಾರವೇ ಮೇಯರ್-ಉಪ ಮೇಯರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Related Articles
ಮಹಾನಗರ ಪಾಲಿಕೆ ಮೇಯರ್ -ಉಪ ಮೇಯರ್ ಚುನಾವಣೆ
ಘೋಷಣೆ ಬೆನ್ನಲ್ಲೇ ಅಧಿಕಾರಕ್ಕೇರಲು ಬಿಜೆಪಿ-ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಸಿದ್ಧಪಡಿಸಿಕೊಂಡಿರುವ ಮಧ್ಯೆಯೇ ರೆಸಾರ್ಟ್ ರಾಜಕೀಯ ಗರಿಕೆದರಿದೆ. ಬಿಜೆಪಿಯಿಂದ ಗೆದ್ದಿರುವ ಕೆಲವು ಸದಸ್ಯರಿಗೆ ಪ್ರವಾಸ ಭಾಗ್ಯ ಲಭ್ಯವಾಗಿದ್ದು, ಸದಸ್ಯರು ಮಡಿಕೇರಿಯ ರೆಸಾರ್ಟ್‌ವೊಂದರಲ್ಲಿ ಇದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
Advertisement
ಸದಸ್ಯರ ಪಕ್ಷಾಂತರ ತಡೆಗೆ ಬಿಜೆಪಿ ಈ ಕಾರ್ಯತಂತ್ರಕ್ಕೆ ಮುಂದಾಗಿದೆ. ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಸದಸ್ಯರನ್ನು ಹಿಡಿದಿಡಲು ಅವರನ್ನು ಕರೆದೊಯ್ದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದರೂ ಸದಸ್ಯರು ಶ್ರೀಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದಾರೆ ಎಂಬುದು ಆ ಪಕ್ಷದ ಮುಖಂಡರ ಹೇಳಿಕೆ.
ನಾಲ್ವರು ಪಕ್ಷೇತರರು ಬಿಜೆಪಿ ತೆಕ್ಕೆಗೆ ಜಾರಿದ್ದರೂ ಅವರು ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾಗದಿರುವುದರಿಂದ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಿಪ್ ಜಾರಿಗೆ ಅವಕಾಶ ಇದೆಯೇ ಎಂಬ ಗೊಂದಲವೂ ಸಹ ಈಗ ಕೇಳಿ ಬರುತ್ತಿದೆ. ಹಾಗಾಗಿ ಕಮಲದ ಪಡೆಯಲ್ಲಿದ್ದರೂ ಆ ಪಕ್ಷೇತರ ಸದಸ್ಯರು ಮನಸ್ಸು ಬದಲಾಯಿಸಿದಲ್ಲಿ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮೂಲದ ಪ್ರಕಾರ ಕಾಂಗ್ರೆಸ್‌ನ ಜಿಲ್ಲಾ ಹೈಕಮಾಂಡ್ ಎಂದೇ ಹೇಳಲಾಗುವ ಆ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಅಖಾಡಕ್ಕಿಳಿದರೆ ಏನು ಬೇಕಾದರೂ ಆಗಬಹುದು ಎಂಬ ಮಾತು ಆ ಪಕ್ಷದವರಿಂದಲೇ ಕೇಳಿ ಬರುತ್ತಿದೆ. ಆದರೆ, ಆ ವರಿಷ್ಠರು ಈವರೆಗೂ ಯಾವುದೇ ರಾಜಕೀಯ ತಂತ್ರಗಾರಿಕೆಗೆ ಮುಂದಾಗದಿರುವುದು ಬಿಜೆಪಿ ವಲಯದಲ್ಲಿ ಸದ್ಯ ಆತಂಕ ಕಾಣುತ್ತಿಲ್ಲ. ಮೇಯರ್-ಉಪ ಮೇಯರ್ ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿಯಿದ್ದು, ಕಾಂಗ್ರೆಸ್ ನಾಯಕರೇನಾದರೂ ಕೈ ಹಾಕಿದರೆ, ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯವ ಸಂಭವ ಇದೆ. ಇದಕ್ಕೆಲ್ಲಾ ಉತ್ತರ ಫೆ.19ರಂದು ಸಿಗಲಿದೆ.
ಯಾರ್ಯಾರ ಸೇರ್ಪಡೆ? ಮತದಾನ ಹಕ್ಕು ಪಡೆದವರಲ್ಲಿ ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಇತರೆಡೆಯ ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಪಟ್ಟಿಯಲ್ಲಿ ಸೇರ್ಪಡೆಯಾದ 13 ಮಂದಿಯಲ್ಲಿ 8 ಮಂದಿ ಬಿಜೆಪಿ ಹಾಗೂ ಐವರು ಕಾಂಗ್ರೆಸ್ ಎಂಎಲ್‌ಸಿಗಳಾಗಿದ್ದಾರೆ. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಲೆಹಾರ್‌ಸಿಂಗ್ ಸಿರಾಯ್, ನಂಜುಂಡಿ ಕೆ.ಪಿ., ರವಿಕುಮಾರ್ ಎನ್., ಎಸ್.ರುದ್ರೇಗೌಡ, ತೇಜಸ್ವಿನಿ ಗೌಡ, ಡಿ.ಯು.ಮಲ್ಲಿಕಾರ್ಜುನ್, ಹನುಮಂತ ನಿರಾಣಿ ಹಾಗೂ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಮೋಹನ್‌ಕುಮಾರ್ ಕೊಂಡಜ್ಜಿ, ಕೆ.ಸಿ.ಕೊಂಡಯ್ಯ, ಎಚ್.ಎಂ.ರೇವಣ್ಣ ಹಾಗೂ ಜಿ.ರಘು ಆಚಾರ್ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಈಗ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್‌ಗೆ ಆಯ್ಕೆಗೆ ಒಟ್ಟು 62 ಮಂದಿ ಮತದಾರರ ಪಟ್ಟಿಯಲ್ಲಿದ್ದಾರೆ.