Advertisement
ಮಹಾನಗರ ಪಾಲಿಕೆಯ 30ನೇ ವಾರ್ಡ್ ವ್ಯಾಪ್ತಿಯ ಆಂಜನೇಯ ಮಿಲ್ ಬಡಾವಣೆಯ ಜನರು ಭದ್ರಾ ನಾಲೆಯ ಏರಿ ಮೇಲೆ, ಅಕ್ಕಪಕ್ಕ ಜಾಗದಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕಿದೆ. ಆಂಜನೇಯ ಮಿಲ್ ಬಡಾವಣೆಗೆ ಹೊಂದಿಕೊಂಡಿರುವ ಖಾಸಗಿಯವರ ಜಾಗ ಸ್ಮಶಾನವಾಗಿ ಬಳಕೆ ಆಗುತ್ತಿದೆ. ಒಂದೊಮ್ಮೆ ಜಾಗದ ಮೂಲ ಮಾಲೀಕರು ಆಕ್ಷೇಪಣೆ ವ್ಯಕ್ತಪಡಿಸಿದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಆಂಜನೇಯ ಮಿಲ್ ಬಡಾವಣೆ ಜನರ ಅಲೆದಾಟ ತಪ್ಪಿದ್ದಲ್ಲ!.
Related Articles
Advertisement
ಸಾರ್ವಜನಿಕ ಹಿಂದೂ ರುದ್ರಭೂಮಿಗೆ ತೆರಳುವ ರಸ್ತೆಯ ಸ್ಥಿತಿಗತಿ ದೇವರಿಗೆ ಪ್ರೀತಿ. ಈ ರಸ್ತೆಯಲ್ಲಿ ಸ್ವತ್ಛ ವಾತಾವರಣ ನಿರ್ಮಾಣ ಪ್ರಯತ್ನ ಪ್ರಾರಂಭವಾಗಿತ್ತಾದರೂ ಸ್ವತ್ಛ ವಾತಾವರಣಕ್ಕೆ ಕಾಲ ಕೂಡಿ ಬರಲೇ ಇಲ್ಲ. ದಾವಣಗೆರೆ ಹೊರ ವಲಯದ ಶ್ರೀರಾಮನಗರದಲ್ಲಿ 10 ಎಕರೆ ಜಾಗದಲ್ಲಿ ಸರ್ವ ಧರ್ಮಿಯರ ಸ್ಮಶಾನ ಇದೆ. ಕಾಂಪೌಂಡ್, ನೀರಿನ ಸೌಲಭ್ಯ ಇದೆ. ಸ್ಮಶಾನದಲ್ಲೇ ಕಸ ಸುಡುವುದು ಮತ್ತು ಬಿಡಾಡಿ ದನಗಳ ಹಾವಳಿ ವಿಪರೀತ. ಕಾವಲುಗಾರರ ಕೊರತೆ ಇದೆ. ಶಾಮನೂರು ಪಕ್ಕದ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಸ್ಮಶಾನಕ್ಕೆ ನುಗ್ಗಿ ಬರುತ್ತಿದ್ದ ಚರಂಡಿ ನೀರು ನಿಲ್ಲಿಸಿರುವ ಕಾರಣಕ್ಕೆ ಜನರು ದುವಾರ್ಸನೆಯಿಂದ ಪರಿತಪಿಸುವುದು ತಪ್ಪಿದೆ.
ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರ ದಾವಣಗೆರೆಯ ಸ್ಮಶಾನಗಳಲ್ಲಿ ಹಲವಾರು ಸಮಸ್ಯೆ ಇವೆ. ಸಂಬಂಧಿತರು ಸ್ಮಶಾನ- ಸಂಕಟ ತಪ್ಪಿಸುವ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಸ್ಮಶಾನಕ್ಕಾದರೂ ಸೌಲಭ್ಯ ಕೊಡಿಸತ್ತ ಮೇಲೆ ಮಣ್ಣು ಮಾಡೋಕೂ ಜನರು ಕಷ್ಟಪಡಬೇಕಾಗುತ್ತದೆ ಎಂದರೆ ಅದಕ್ಕಿಂತಲೂ ವಿಷಾದದ ಸಂಗತಿ ಇನ್ನೊಂದಿಲ್ಲ. ಮನೆಯಲ್ಲಿ ಯಾರಾದರೂ ಸತ್ತರೆ ಮುಂದೆ ಹೇಗೆ…? ಎಂದು ಮನೆಯ ಮಂದಿ ಯೋಚನೆ ಮಾಡುವುದು ಸಾಮಾನ್ಯ. ಆದರೆ, ಯಾರಾದರೂ ಸತ್ತರೆ ಮಣ್ಣು ಮಾಡುವುದೇ ದೊಡ್ಡ ಸಮಸ್ಯೆ ಎನ್ನುವಂತಹ ಸ್ಥಿತಿ ಇದೆ. ಸಂಬಂಧಪಟ್ಟವರು ಕೊನೆಯ ಪಕ್ಷ ಸ್ಮಶಾನದಲ್ಲಾದರೂ ಕೆಲವಾರು ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ವಿದ್ಯುತ್ ಚಿತಾಗಾರ ಪ್ರಾರಂಭಿಸುವತ್ತಲೂ ಗಮನ ಹರಿಸಬೇಕು ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು ಒತ್ತಾಯಿಸುತ್ತಾರೆ. 9 ಸ್ಮಶಾನಗಳಿವೆ
ದಾವಣಗೆರೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಸೇರಿದಂತಹ ಒಟ್ಟು 9 ಸ್ಮಶಾನಗಳಿವೆ. ಎರಡು ಕಡೆ ಮಾತ್ರ ಕಾವಲುಗಾರರ ವ್ಯವಸ್ಥೆ ಇದೆ. ಮಹಾನಗರ ಪಾಲಿಕೆಯಿಂದ ಸ್ಮಶಾನದಲ್ಲಿ ಗುಂಡಿಗೆ ಇಂತಿಷ್ಟು ದರ ನಿಗದಿ ಪಡಿಸಲಾಗಿದೆ. ಆದರೂ, ಕೆಲವು ಕಡೆ ಜಾಸ್ತಿ ಹಣ ಪೀಕುವುದು ಸಾಮಾನ್ಯ. ಇನ್ನು ತುರ್ತು, ಹಬ್ಬದ ಸಂದರ್ಭಗಳಲ್ಲಿ ಮನಸೋ ಇಚ್ಛೆ… ಕೇಳಲಾಗುತ್ತದೆ. ಅನಿವಾರ್ಯತೆ ಕಾರಣಕ್ಕೆ ಮರು…ಮಾತನಾಡದೆ ಕೇಳಿದಷ್ಟು ಕೊಡುವುದು ನಡೆಯುತ್ತದೆ. ರಾ. ರವಿಬಾಬು