Advertisement

ಲಾರಿಯಲ್ಲಿ ಯುಪಿಗೆ ಹೊರಟವರಿಗೆ‌ ತಡೆ

12:30 PM May 16, 2020 | Naveen |

ದಾವಣಗೆರೆ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ (ಕಾಶಿ) ಮತ್ತು ಪ್ರತಾಪಘಡಕ್ಕೆ ತೆರಳುತ್ತಿದ್ದ 70ಕ್ಕೂ ಹೆಚ್ಚು ಜನರನ್ನು ಶುಕ್ರವಾರ ನಗರದಲ್ಲಿ ಪೊಲೀಸರು ತಡೆ ಹಿಡಿದ ಘಟನೆ ನಡೆದಿದೆ.

Advertisement

ದಾವಣಗೆರೆ ನಗರದ ರಸ್ತೆ ಬದಿಗಳಲ್ಲಿ ಪಾನಿಪುರಿ, ಟೀ ಮಾರಾಟ ಮಾಡುತ್ತಿದ್ದವರು ಲಾಕ್‌ಡೌನ್‌ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಹೇಗಾದರೂ ಮಾಡಿ ತಮ್ಮ ಸ್ವಂತ ಊರುಗಳಿಗೆ ತೆರಳಬೇಕೆಂದು ಪ್ರಯತ್ನಿಸಿದ್ದಾರೆ. ಆ ನಿಟ್ಟಿನಲ್ಲಿ ಶಿವಪ್ಪಯ್ಯ ವೃತ್ತದ ಬಯಲು ಜಾಗದಲ್ಲಿ ಲಾರಿಯೊಂದರಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಕೆಟಿಜೆ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರ ವಿಚಾರಣೆ ನಡೆಸಿದರು.

ದಾವಣಗೆರೆಯಲ್ಲಿ ಹಲವಾರು ದಿನಗಳಿಂದ ಪಾನಿಪುರಿ, ಟೀ ಮಾರಾಟ ಇತರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಲಾಕ್‌ ಡೌನ್‌ ಆದ ಮೇಲೆ ವ್ಯಾಪಾರ ನಡೆಸಲು ಆಗುತ್ತಲೇ ಇಲ್ಲ. ಎಷ್ಟು ದಿನಗಳ ಕಾಲ ಕೆಲಸ ಇಲ್ಲದೆ ಮನೆಯಲ್ಲಿ ಇರಲಿಕ್ಕಾಗುತ್ತದೆ. ಬೇರೆ ರಾಜ್ಯದಲ್ಲಿ ದುಡಿಮೆ ಇಲ್ಲದೆ ಜೀವನ ನಡೆಸುವುದು ಆಗುವುದೇ ಇಲ್ಲ. ಹಾಗಾಗಿ ಏನಾದರೂ ಮಾಡಿ ನಮ್ಮ ಊರಿಗೆ ಹೋಗಬೇಕು ಅಂದುಕೊಂಡಿದ್ದೇವೆ. ಏನೇ ಆದರೂ ಊರಿಗೆ ಹೋಗಿಯೇ ಹೋಗುತ್ತೇವೆ ಎಂದು ತಮ್ಮ ಊರಿಗೆ ತೆರಳು ಅಣಿಯಾಗಿದ್ದ ಅನೇಕರು ತಿಳಿಸಿದರು.

ಎಂಸಿಸಿ ಎ, ಬಿ ಬ್ಲಾಕ್‌ನಲ್ಲಿ ತಿಂಗಳಿಗೆ 6,500 ರೂಪಾಯಿ ಬಾಡಿಗೆಯಂತೆ ಇದ್ದೇವೆ. ನಮ್ಮ ಮನೆಯ ಮಾಲಿಕರು ಮನೆ ಖಾಲಿ ಮಾಡುವಂತೆ ಹೇಳಿಲ್ಲ. ಮನೆ ಬಿಡುವಂತೆಯೂ ಒತ್ತಾಯ ಮಾಡುತ್ತಿಲ್ಲ. ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ನಿಮ್ಮ ಕೈಯಲ್ಲಿ ದುಡ್ಡು ಇದ್ದರೆ ಬಾಡಿಗೆ ಕೊಡಿ, ಇಲ್ಲ ಅಂದರೆ ಮುಂದೆ ಕೊಡಿ ಎಂದು ಹೇಳುತ್ತಾರೆ. ದುಡಿಮೆಯೇ ಇಲ್ಲ ಎಂದ ಮೇಲೆ 2-3 ತಿಂಗಳ ಬಾಡಿಗೆ ನೀಡಲು ಆಗುವುದೇ ಇಲ್ಲ. ಹಾಗಾಗಿ ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಅಳಲು ವ್ಯಕ್ತಪಡಿಸಿದರು.

ಕಾಶಿ (ಪ್ರಯಾಗ್‌ರಾಜ್‌), ಪ್ರತಾಪ್‌ಘಡ್‌ ಗೆ ಹೋಗಬೇಕು ಎಂದು ಸೇವಾ ಸಿಂಧು ಯೋಜನೆಯಡಿ ಅಪ್ಲಿಕೇಷನ್‌ ಹಾಕಿದ್ದೇವೆ. ಮೂರು ದಿನಗಳಿಂದ ಜಿಲ್ಲಾಧಿಕಾರಿ ಆμàಸ್‌ಗೆ ನಡೆದುಕೊಂಡು ಹೋಗುವುದು, ರಾತ್ರಿ ತನಕ ಕಾಯುವುದು, ಪುನಃ ಬರುವುದೇ ಆಗುತ್ತಿದೆ. ಜಿಲ್ಲಾಡಳಿತ ನಮಗೆ ಅನುಮತಿಯನ್ನೇ ನೀಡುತ್ತಿಲ್ಲ. ನಮಗೆ ಅನುಮತಿ ಕೊಟ್ಟರೆ ನಮ್ಮ ಊರುಗಳಿಗೆ ಹೋಗಿ ಹೇಗೋ ಜೀವನ ಮಾಡುತ್ತೇವೆ. ನಮಗೇನು ಬೇಡ. ಊರಿಗೆ ಹೋಗಲಿಕ್ಕೆ ಅವಕಾಶ ಕೊಟ್ಟರೆ ಸಾಕು ಎಂದು ಗೋಗರೆದರು.

Advertisement

ನಮ್ಮ ಊರುಗಳಿಗೆ ಹೋದರೂ ನಮ್ಮ ಮನೆಗೆ ಹೋಗಲಿಕ್ಕೆ ಆಗುವುದಿಲ್ಲ. 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕು ಎಂಬುದು ಗೊತ್ತಿದೆ. ಅಲ್ಲಿ ಕಷ್ಟವಾದರೂ ಪರವಾಗಿಲ್ಲ. ನಾವು ಹೋಗಲಿಕ್ಕೆ ಅವಕಾಶ ಕೊಟ್ಟರೆ ಸಾಕು. ನನ್ನ ಮಗ ಬಹಳ ದಿನ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ದುಡ್ಡೇ ಇಲ್ಲ. ಹಂಗಾಗಿ ಹಾಸ್ಪಿಟಲ್‌ ಗೆ ಅಡ್ಮಿಟ್‌ ಮಾಡಲಿಕ್ಕೂ ಆಗುತ್ತಿಲ್ಲ ಎಂದು ಅಜಯ್‌ ಕುಮಾರ್‌ ಎಂಬಾತ ಅಳಲು ತೋಡಿಕೊಂಡರು. ಹೆಂಗೋ ಊರಿಗೆ ಹೋಗುತ್ತೇವೆ ಅಂತ ಮನೆ ಖಾಲಿ ಮಾಡಿಕೊಂಡು ಸಾಮಾನು ಎಲ್ಲಾ ತೆಗೆದುಕೊಂಡು ಬಂದಿದ್ದೇವೆ. ಆ ಕಡೆ ಊರಿಗೆ ಹೋಗುವಂತೆ ಇಲ್ಲ. ಈ ಕಡೆ ನಾವು ಬಾಡಿಗೆ ಇದ್ದ ಮನೆಗೂ ಹೋಗುವಂತಿಲ್ಲ.
ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿ ಅಂತಾ ಇರೋದು ಎಂದು ಪ್ರಶ್ನಿಸಿದರು.

70 ಜನ ಇದ್ದರು
ತಮ್ಮ ಊರುಗಳಿಗೆ ಹೋಗಬೇಕು ಎಂದು ನಿರ್ಧರಿಸಿದವರು ಪ್ರತಿ ದಿನ ಮಾರುಕಟ್ಟೆಗೆ ಹೋಗಿ ತಮ್ಮ ರಾಜ್ಯಕ್ಕೆ ಹೋಗುವ ಲಾರಿ ಇತರೆ ವಾಹನ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಉತ್ತರ ಪ್ರದೇಶಕ್ಕೆ ವಾಪಾಸ್ಸಾಗುವ ಲಾರಿ ಸಿಕ್ಕಿದೆ. ಚಾಲಕನೊಂದಿಗೆ ಮಾತುಕತೆ ಮುಗಿಸಿಕೊಂಡು ಊರಿಗೆ ತೆರಳಲು ಸಜ್ಜಾಗಿ ಶಿವಪ್ಪಯ್ಯ ವೃತ್ತದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಲಾರಿ ಹತ್ತಲು ಬಂದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.  70ಕ್ಕೂ ಹೆಚ್ಚು ಜನರು ಹೊರಟ್ಟಿದ್ದರು

Advertisement

Udayavani is now on Telegram. Click here to join our channel and stay updated with the latest news.

Next