Advertisement

Davanagere; ಶವ ಹೊರ ತೆಗೆದ ವಿಚಾರಕ್ಕೆ ಗುಂಪುಗಳ ಮಾರಾಮಾರಿ: 28 ಜನರ ಬಂಧನ

10:10 PM Sep 03, 2023 | Team Udayavani |

ದಾವಣಗೆರೆ: ಅಂತ್ಯಸಂಸ್ಕಾರ ನೆರವೇರಿಸಿದ್ದ ಪಾರ್ಥಿವ ಶರೀರವನ್ನು ಹೊರ ತೆಗೆದ ಘಟನೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ 28 ಜನರನ್ನು ಮಾಯಕೊಂಡ ಪೊಲೀಸರು ಬಂಧಿಸಿದ್ದಾರೆ.

Advertisement

ಮಾಯಕೊಂಡ ಠಾಣಾ ವ್ಯಾಪ್ತಿಯ ನಲ್ಕುಂದ ಗ್ರಾಮದಲ್ಲಿ ಕಳೆದ ಆ.‌ 4 ರಂದು ಲಕ್ಷ್ಮೀದೇವಿ(60)ಎಂಬುವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ನಂತರ ಮೃತ ದೇಹವನ್ನು ಅವರ ಜಾಗದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈಚೆಗೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದ್ದು ಗ್ರಾಮದಲ್ಲಿ ಮಾತ್ರ ಮಳೆಯಾಗದ ಕಾರಣ ಗ್ರಾಮದ ಗ್ರಾಮಸ್ಥರು ಎಲ್ಲ ಸೇರಿಕೊಂಡು ಈ ಹಿಂದೆ ಮೃತಪಟ್ಟಿದ್ದ ಲಕ್ಷ್ಮೀದೇವಿಗೆ ತೊನ್ನು ಇದ್ದರೂ ಮಣ್ಣು ಮಾಡಿರುವ ಕಾರಣಕ್ಕೆ ಗ್ರಾಮದಲ್ಲಿ ಮಳೆಯಾಗುತ್ತಿಲ್ಲ. ಆದ್ದರಿಂದ ಲಕ್ಷ್ಮೀದೇವಿ ಶವವನ್ನು ಹೊರ ತೆಗೆದು ಸುಡಲು ತೀರ್ಮಾನಿಸಿ ಅದರಂತೆ ಶನಿವಾರ ಸಂಜೆ ಲಕ್ಷ್ಮೀದೇವಿಯ ಮೃತದೇಹವನ್ನು ಹೊರ ತೆಗೆದು ಅದೇ ಜಾಗದಲ್ಲಿ, ಸುಡುವ ಸಮಯದಲ್ಲಿ ನಲ್ಕುಂದ ಗ್ರಾಮದ ಸ್ವಾಮಿ ಮತ್ತು ನವೀನ್ ಕುಮಾರ್ ರವರ ನಡುವೆ ಮಾತಿನ ಜಗಳವಾಗಿದೆ. ಅದೇ ವಿಷಯವಾಗಿ ನಲ್ಕುಂದ ಗ್ರಾಮದ ದುರುಗಮ್ಮ ದೇವಸ್ಥಾನದ ಬಳಿ ಜಗಳ ನಡೆದಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಆರ್.‌ಬಸರಗಿ, ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರು ಭೇಟಿ ನೀಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ ಮಾಡಲಾಗಿದೆ. ಎರಡು ಪ್ರಕರಣ ದಾಖಲಾಗಿದ್ದು, 28 ಜನರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next