Advertisement

Davanagere: ಮಹಿಳೆಯರ ಕುರಿತು ಹೇಳಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ಶಾಮನೂರು ಪತ್ರ

08:10 PM Apr 02, 2024 | Team Udayavani |

ದಾವಣಗೆರೆ: ಮಹಿಳೆಯರ ಕುರಿತ ನನ್ನ ಹೇಳಿಕೆಯನ್ನು ನನಗೆ ಆಗದವರು ದ್ವೇಷದಿಂದ ತಿರುಚಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪ್ಟಷ್ಟನೆ ನೀಡಿದ್ದಾರೆ.

Advertisement

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಸ್ಪಷ್ಟನೆ ಕೋರಿ ಶಾಮನೂರು ಶಿವಶಂಕರಪ್ಪ ಅವರಿಗೆ ನೋಟಿಸ್ ನೀಡಿದ್ದರು.

ನೋಟಿಸ್ ಗೆ ಉತ್ತರಿಸಿರುವ ಶಾಮನೂರು ಶಿವಶಂಕರಪ್ಪ, ಮಹಿಳೆಯರು ಎಲ್ಲ  ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ನಮ್ಮ ಪಕ್ಷದ ದಿ.ಇಂದಿರಾ ಗಾಂಧಿಯವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಮಹಿಳೆಯರೇ ಸ್ಪರ್ಧಿಸಿದ್ದು, ನಿಮ್ಮ ಸಮಸ್ಯೆಯನ್ನು ದೆಹಲಿಯವರೆಗೆ ತಲುಪಿಸುವವರಿಗೆ ಮತ ನೀಡಿ ಎಂದು ಹೇಳಿದ್ದ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next