Advertisement

ಮಳೆ ಹಾನಿ ಪ್ರದೇಶಕ್ಕೆ ಬಸವಂತಪ್ಪ ಭೇಟಿ

03:59 PM Jun 03, 2020 | Naveen |

ದಾವಣಗೆರೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗೋಣಿವಾಡ ಕ್ಯಾಂಪ್‌, ಮತ್ತಿ, ಕತ್ತಲಗೆರೆ ಕಾರಿಗನೂರು, ಹಲವು ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಮತ್ತು ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಆನಗೋಡು ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮನೆಗಳು, ದೇವಸ್ಥಾನ, ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತ ಬಹಳ ಹಾನಿಗೀಡಾಗಿರುವ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಫಸಲುಗಳಿಗೆ ಬೆಲೆ ಸಿಗದೇ ಇರುವುದರಿಂದ ಕಷ್ಟದಲ್ಲಿ ಸಿಲುಕಿದ್ದಾರೆ. ಈಗ ಮಳೆಯಿಂದ ಹಾನಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ನೊಂದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಗೋಣಿವಾಡದ ಮುರುಗೇಂದ್ರಪ್ಪ, ಅಡಿಕೆ ತೋಟದ ಮಾಲಿಕ ಮಂಜುನಾಥ್‌, ಪರಶುರಾಮ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next