Advertisement
ಮಂಗಳವಾರ ಅಶೋಕ ಚಿತ್ರಮಂದಿರ ಮುಂದಿನ ರೈಲ್ವೆ ಗೇಟ್ನಿಂದ ಪದ್ಮಾಂಜಲಿ ಚಿತ್ರಮಂದಿರದವರೆಗೆ ರೈಲ್ವೆ ಹಳಿಯ ಮೇಲೆ ಸಂಚರಿಸಿ ಪ್ರತಿಯೊಂದು ಅಂಶದ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆ 20 ವರ್ಷದ್ದು. ಅಂದಿನಿಂದ ಸಮಸ್ಯೆ ಬಗೆಹರಿಸುವ ಮಾತು ಇವೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
Related Articles
Advertisement
ದಾವಣಗೆರೆಯಲ್ಲೇ ತಮ್ಮನ್ನೇನು 20-30 ವರ್ಷ ಉಳಿಸಿಕೊಳ್ಳುವುದಿಲ್ಲ. ಇರುವ ಕಾಲದಲ್ಲೇ ಒಳ್ಳೆಯ ಕೆಲಸ ಮಾಡಬೇಕು ಎಂಬ ಕನಸಿನೊಂದಿಗೇ ಬಂದಿದ್ದೇನೆ. ಅದಕ್ಕಾಗಿ ಉತ್ಸಾಹ, ಹುಮ್ಮಸ್ಸನಿಂದ ಕೆಲಸ ಮಾಡುತ್ತಿದ್ದೇನೆ. ಎಲ್ಲದಕ್ಕೂ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಸೋಮವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ 28 ನೌಕರರು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ನೀಡುವ ಉತ್ತರ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಹಶೀಲ್ದಾರ್ ಕಚೇರಿಯೊಂದೇ ಮಾತ್ರವಲ್ಲ. ದಾವಣಗೆರೆಯಲ್ಲಿರುವ ತನಕ ಇದೇ ರೀತಿ ದಿಢೀರ್ ಭೇಟಿ, ಪರಿಶೀಲನೆ ನಡೆಸಲಾಗುವುದು. ತಮ್ಮಂತೆಯೇ ಎಲ್ಲರೂ ಉತ್ಸಾಹ, ಹುಮ್ಮಸ್ಸಿನಿಂದ ಕೆಲಸ ಮಾಡುವರು ಎಂಬ ವಿಶ್ವಾಸ ಇದೆ. ಅಂತಹ ಹುಮ್ಮಸ್ಸು, ಉತ್ಸಾಹದ ನಾಯಕನಾಗಿ ತಮ್ಮ ಕೆಲಸ ಮಾಡುವುದಾಗಿ ಹೇಳಿದರು