Advertisement
ನಗರದ ಎಂ.ಕೆ. ಹಟ್ಟಿ ಬಸವೇಶ್ವರವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದಅಖೀಲ ಕರ್ನಾಟಕ ಗಾನಯೋಗಿಸಂಗೀತ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
Related Articles
Advertisement
ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಂಗೀತ ಸಮ್ಮೇಳನಗಳನ್ನುಮಾಡುವುದಕ್ಕೆ ಸರ್ಕಾರ ಅನುದಾನನೀಡಬೇಕು ಎಂದು ಒತ್ತಾಯಿಸಲು ನಮ್ಮಲ್ಲಿಸಂಘಟನೆಯ ಕೊರತೆಯಿದೆ. ನಾವುಕೇವಲ ಸಮಾರಂಭದಲ್ಲಿ ಹಾಡಿ ಬಂದುಬಿಡುತ್ತೇವೆ. ಸಂಘಟನೆಯ ಗೋಜಿಗೆಹೋಗದಿರುವುದು ಹಿನ್ನಡೆಗೆ ಕಾರಣ.
ಸರ್ಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿಸಂಗೀತ ಶಿಕ್ಷಕರು ಸೇರಿದಂತೆ ರಂಗಶಿಕ್ಷಕರು, ಚಿತ್ರಕಲಾ ಶಿಕ್ಷಕರನ್ನು ನೇಮಕಾತಿಮಾಡಿಕೊಳ್ಳಬೇಕು. ಲಲಿತ ಕಲೆ, ಸಂಗೀತಪರಂಪರೆಯನ್ನು ಪ್ರೋತ್ಸಾಹಿಸಬೇಕೆಂದುಒತ್ತಾಯಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ,ಸಂಗೀತ ಕಲೆ ಒತ್ತಡದಿಂದ ಬದುಕುವಮನುಷ್ಯನಿಗೆ ಮಾನಸಿಕ ನೆಮ್ಮದಿ ಮತ್ತುಆರೋಗ್ಯ ನೀಡುತ್ತದೆ.
ಆ ನಿಟ್ಟಿನಲ್ಲಿಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಯುವಂತೆಪ್ರೋತ್ಸಾಹಿಸಬೇಕು. ಕಸಾಪ, ಶಸಾಪ ಮತ್ತುಗಾನಯೋಗಿ ಸಂಗೀತ ಪರಿಷತ್ ಮೂರುಸಂಘಟನೆಗಳು ಒಟ್ಟಾಗಿ ನಾಡು, ನುಡಿಗಾಗಿಬರುವ ದಿನಗಳಲ್ಲಿ ಅರ್ಥಪೂರ್ಣಕಾರ್ಯಕ್ರಮ ಆಯೋಜಿಸೋಣ ಎಂದುಸಲಹೆ ನೀಡಿದರು.
ಅಖೀಲ ಭಾರತ ವೀರಶೆ„ವ ಮಹಾಸಭಾದಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಸಂಗೀತಪರಿಷತ್ತಿನ ಜಿಲ್ಲಾಧ್ಯಕ್ಷ ತೋಟಪ್ಪ ಉತ್ತಂಗಿಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ವಿ. ಗುರುಮೂರ್ತಿ, ಯೋಗಾಚಾರ್ಯಎಲ್.ಎಸ್. ಚಿನ್ಮಯಾನಂದ, ಜಾನಪದಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನದೇವರಮನೆ, ಬಸವೇಶ್ವರ ವಿದ್ಯಾಸಂಸ್ಥೆಯಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಗೌರವಸಲಹೆಗಾರ ಕಾಲ್ಕೆರೆ ಚಂದ್ರಪ್ಪ, ಕಲಾವಿದಹರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಡಿ.ಒ. ಮುರಾರ್ಜಿ ಮತ್ತಿತರರಿದ್ದರು.