Advertisement

ಅಪ್ಪು ಅಭಿಮಾನಿಗಳ ಬಳಗದಿಂದ ಪುನೀತ್‌ ಪುತ್ಥಳಿ ಅನಾವರಣ

01:05 PM Dec 06, 2021 | Team Udayavani |

ದಾವಣಗೆರೆ: ಅಕಾಲಿಕವಾಗಿ ನಿಧನರಾದ ಕನ್ನಡದಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ರವರ ಸವಿನೆನಪು, ಅವರ ದಾನ, ಸೇವಾ ಕಾರ್ಯಗಳನ್ನುಸ್ಮರಿಸುವ ಉದ್ದೇಶದಿಂದ ಭಾನುವಾರ ನಗರದ ಚಿಕ್ಕಮ್ಮಣ್ಣಿ ದೇವರಾಜು ಅರಸು ಬಡಾವಣೆಯಲ್ಲಿ ಸಿದ್ಧರಾಮೇಶ್ವರ ಯುವಕ ಸಂಘ, ಸಿದ್ಧಿ ವಿನಾಯಕಯುವಕರ ಸಂಘ, ಮಾರಿಕಾಂಬ ಯುವಕ ಸಂಘದ ಸಹಯೋಗದಲ್ಲಿ ಅಪ್ಪು ಅಭಿಮಾನಿಗಳ ಬಳಗದಿಂದ ಎರಡೂವರೆ ಅಡಿ ಎತ್ತರದ ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಅನಾವರಣ ಮಾಡಲಾಯಿತು.

Advertisement

ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯಸಿದ್ಧರಾಮೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳುಪುನೀತ್‌ ಪುತ್ಥಳಿ ಅನಾವರಣಗೊಳಿಸುವಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು.

ಈಸಂದರ್ಭದಲ್ಲಿ ಮಾತನಾಡಿದ ಮೇಯರ್‌ ಎಸ್‌.ಟಿ.ವೀರೇಶ್‌, ಬದುಕಿದ್ದಾಗ ಪುನೀತ್‌ ರಾಜ್‌ಕುಮಾರ್‌ಮಾಡಿರುವಂತಹ ಮಾನವೀಯ ಕಾರ್ಯಗಳೇಅವರ ಹೆಸರನ್ನು ಅಜರಾಮರನನ್ನಾಗಿ ಮಾಡಿದೆ.ರಾಜ್ಯದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂಅವರನ್ನು ಸ್ಮರಿಸಲಾಗುತ್ತಿದೆ.

ಸೇವಾ ಕಾರ್ಯವೇಈ ರೀತಿ ನಮ್ಮನ್ನು ಉಳಿಸಲು ನೆರವಾಗುತ್ತವೆ.ಆದ್ದರಿಂದ ಬದುಕಿದ್ದಾಗ ಏನಾದರೂ ಸಮಾಜಸೇವೆಮಾಡೋಣ ಎಂದು ಮನವಿ ಮಾಡಿದರು.ಸಮನ್ವಯ ಸಮಿತಿಯ ಮುಪ್ಪಣ್ಣ ಮಾತನಾಡಿ,ಚಿತ್ರನಟ ಪುನೀತ್‌ ರಾಜ್‌ ಕುಮಾರ್‌ ಅವರ ಹೆಸರು ವಿಶ್ವದೆಲ್ಲೆಡೆ ಕೇಳಿಬರುತ್ತಿದೆ.

ವ್ಯಕ್ತಿ ಸತ್ತ ನಂತರವೂ ಅವರ ಸಮಾಧಿಯನ್ನು ನೋಡಲು ಇಂದಿಗೂಜನಸಾಗರವೇ ಹರಿದು ಬರುತ್ತಿದೆ ಎಂದರೆ ಅವರು ಮಾಡಿದ ಪುಣ್ಯದ ಕಾರ್ಯಗಳು ಎಷ್ಟಿವೆ ಎಂದು ನಾವೆಲ್ಲರೂ ಚಿಂತನೆ ಮಾಡಿಕೊಳ್ಳುವ ಮೂಲಕಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

Advertisement

ಪುನೀತ್‌ ರಾಜ್‌ಕುಮಾರ್‌ ನಮ್ಮ ಮಧ್ಯೆಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಅವರುಇದ್ದಿದ್ದರೆ ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆಕೊಂಡೊಯ್ಯುತ್ತಿದ್ದರು. ಆದರೆ ದೇವರು ಬೇಗನೆಅವರನ್ನು ಕರೆಸಿಕೊಂಡುಬಿಟ್ಟ ಎಂದು ವಿಷಾದ ವ್ಯಕ್ತಪಡಿಸಿದರು.

ಅಪ್ಪು ಅಭಿಮಾನಿಗಳ ಬಳಗದ ಎಚ್‌. ತಿಮ್ಮಣ್ಣ,ವೀರೇಶ್‌, ಶ್ರೀನಿವಾಸ್‌, ಎಚ್‌. ನಾಗರಾಜ್‌, ಎಚ್‌.ಎನ್‌. ರಾಜಪ್ಪ, ಮಾನಸ ತಿಪ್ಪೆಸ್ವಾಮಿ, ಎಲ್‌ಐಸಿಹನುಮಂತಪ್ಪ, ಎಸ್‌.ವಿ. ಈಶ್ವರ್‌, ಮುತ್ತುರಾಜ,ಲೋಕೇಶಪ್ಪ, ನಾಗರಾಜ್‌, ಕೆ.ಪಿ.ನಿರಂಜನ್‌, ಆನಂದ್‌ಇತರರು ಇದ್ದರು. ಮೇಯರ್‌ ಎಸ್‌.ಟಿ. ವೀರೇಶ್‌ಅವರು ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಂಡು ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಉದ್ಯಾನವನಕ್ಕೆ ಪುನೀತ್‌ರಾಜ್‌ಕುಮಾರ್‌ ಉದ್ಯಾನವನ ಎಂದು ನಾಮಕರಣಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next