Advertisement

ಕನ್ನಡ ಭಾಷೆ ಸವೃದ್ಧವಾಗಿಸಲು ಶ್ರಮಿಸಿ: ಮಂಜುನಾಥ್‌

12:58 PM Dec 06, 2021 | Team Udayavani |

ದಾವಣಗೆರೆ: ಕನ್ನಡ ಭಾಷೆಯನ್ನು ಹೆಚ್ಚೆಚ್ಚುಬಳಸುವ ಮೂಲಕ ಸಮೃದ್ಧವಾಗಿಬೆಳೆಸಬೇಕು ಎಂದು ರಾಜ್ಯೊತ್ಸವ ಪ್ರಶಸ್ತಿಪುರಸ್ಕೃತ, ಹಿರಿಯ ವ್ಯಂಗ್ಯಚಿತ್ರಕಾರ ಎಚ್‌.ಬಿ. ಮಂಜುನಾಥ್‌ ಕರೆ ನೀಡಿದರು.
ಮಹಾನಗರ ಪಾಲಿಕೆಯಆಂಜನೇಯ ಬಡಾವಣೆಯ ಬಸವೇಶ್ವರಉದ್ಯಾನದ ಯೋಗ ಮಂದಿರದಲ್ಲಿಸವಿಗಾನ ಸಂಗೀತ ವಿದ್ಯಾಲಯದವತಿಯಿಂದ ಹಮ್ಮಿಕೊಂಡಿದ್ದ 66ನೇಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಅವರು ಮಾತನಾಡಿದರು.

Advertisement

ಯಾವುದೇಭಾಷೆ ಬಳಸಿದಷ್ಟೂ ಬೆಳೆಯುತ್ತದೆ ಹಾಗೂಉಳಿಯುತ್ತದೆ. ಅದೇ ಮಾದರಿಯಲ್ಲಿಕನ್ನಡ ವನ್ನು ಇನ್ನಷ್ಟು ಬೆಳೆಸಬೇಕು. ನಮ್ಮಭಾಷೆಯಲ್ಲಿ ಅನ್ಯ ಭಾಷೆಗಳ ಕಲಬೆರಕೆಆಗದಂತೆ ಆದಷ್ಟು ಜಾಗ್ರತೆ ವಹಿಸಬೇಕುಎಂದರು.ಕನ್ನಡ ಸಮೃದ್ಧ, ಸುಂದರವಾದ ಭಾಷೆ.ಈ ಭಾಷೆಯಲ್ಲಿ ಪದಗಳ ಕೊರತೆಯೇ ಇಲ್ಲ.

ಆದರೆ ನಾವು ಅನವಶ್ಯಕವಾಗಿಅನ್ಯ ಭಾಷಾ ಪದಗಳನ್ನು ಕಲಬೆರಕೆಮಾಡುತ್ತಿರುವುದರಿಂದ ಕನ್ನಡಭಾಷಾ ಪದಗಳು ನಾಶವಾಗುತ್ತಿವೆ.ಅನಿವಾರ್ಯವಾದಾಗ ಅನ್ಯ ಭಾಷಾಪದಗಳ ಬಳಕೆಗೆ ಅಡ್ಡಿ ಇಲ್ಲ. ಆದರೆಅನವಶ್ಯಕವಾಗಿ ನಾವು ಅನ್ಯಭಾಷಾಪದಗಳನ್ನು ಕನ್ನಡ ಭಾಷೆಯೊಂದಿಗೆಕಲಬೆರಕೆ ಮಾಡಿ ಮಾತನಾಡುತ್ತಿದ್ದೇವೆ.

ಈ ಮೂಲಕ ನಮ್ಮ ಭಾಷೆಯ ಅವನತಿಗೆನಾವೇ ಕಾರಣರಾಗುತ್ತಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದುತಿಳಿಸಿದರು.ಬಹುತೇಕ ಮನೆ, ಮಠ,ಕಲ್ಯಾಣಮಂಟಪ, ಉಪಾಹಾರ ಗೃಹ,ವಿದ್ಯಾರ್ಥಿನಿಲಯಗಳಲ್ಲಿ ಅನ್ನ ಎಂದುಹೇಳದೆ ರೈಸ್‌ ಎನ್ನುತ್ತೇವೆ.

ಎಲ್ಲಿಯವರೆಗೆನಾವು ಅನ್ನವನ್ನು ಅನ್ನ ಎನ್ನದೆ ರೈಸ್‌ಎಂದು ಹೇಳುತ್ತೇವೆಯೋ ಅಲ್ಲಿಯವರೆಗೆನಮ್ಮ ಭಾಷೆಯನ್ನು ಉಳಿಸಿಕೊಳ್ಳಲುಸಾಧ್ಯವಿಲ್ಲ. ಪ್ರತಿನಿತ್ಯ ನಮ್ಮ ಆಡುಭಾಷೆಕನ್ನಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿಅನ್ಯ ಭಾಷಾ ಪದಗಳು ಅದರಲ್ಲೂಮುಖ್ಯವಾಗಿ ಆಂಗ್ಲ ಭಾಷಾ ಪದಗಳುಅನವಶ್ಯಕವಾಗಿ ಬಳಕೆಯಾಗುತ್ತಿವೆ.ಸಾಧ್ಯವಾದಷ್ಟೂ ನಮ್ಮ ಮಾತೃಭಾಷಾಪದಗಳನ್ನೇ ಬಳಸುವ ಪ್ರಯತ್ನಮಾಡಬೇಕಿದೆ. ಹಾಗಾದಲ್ಲಿ ಮಾತ್ರ ನಮ್ಮಭಾಷೆ ಉಳಿಯಲು, ಬೆಳೆಯಲು ಸಾಧ್ಯಎಂದು ಅಭಿಪ್ರಾಯಪಟ್ಟರು.

Advertisement

ಸ್ವಾತಂತ್ರ್ಯನಂತರವೂ ನಮ್ಮ ಕನ್ನಡದನೆಲವು ಮುಂಬೈ, ಮದ್ರಾಸ್‌, ಹೈದರಾಬಾದ್‌ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು.ಎಲ್ಲ ಪ್ರಾಂತ್ಯಗಳನ್ನು ಒಂದಾಗಿಸಿ 1956ರ ನ.1 ರಂದು ಏಕೀಕೃತ ವಿಶಾಲ ಮೈಸೂರು ರಾಜ್ಯ ಉದಯವಾಯಿತು. 1973 ರ ನ. 1 ರಂದುಕರ್ನಾಟಕ ಎಂದು ನಾಮಕರಣವಾಯಿತು ಎಂದರು.

ರೇಣುಕಾ ಅಧ್ಯಕ್ಷತೆ ವಹಿಸಿದ್ದರು.ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪಇತರರು ಇದ್ದರು. ಸವಿಗಾನ ಸಂಗೀತವಿದ್ಯಾಲಯದ ಸಂಗೀತ ಶಿಕ್ಷಕ ಮಲ್ಲಿಕಾರ್ಜುನಶಾನುಭಾಗ್‌ ನಿರ್ದೇಶನದಲ್ಲಿ ಪಿ. ಎನ್‌.ರವಿಚಂದ್ರ, ಗುರುನಾಥ ಅಣೆÌàಕರ್‌, ಜಿ.ಮಾಧವಾಚಾರ್ಯ, ಶಶಿಧರ್‌, ರವಿಶಂಕರ್‌,ವಿನೋದ, ವಿಮಲಾ, ಪೂರ್ವಿಕ, ಅನಿರುದ್ಧಮೊದಲಾದವರು ಕನ್ನಡ ಗೀತೆಗಳನ್ನುಸುಶ್ರಾವ್ಯವಾಗಿ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next