ದಾವಣಗೆರೆ: ಸಾಮಾಜಿಕ ಜಾಲತಾಣದಿಂದವಂಚನೆಗೊಳಗಾಗುವ ಮಧ್ಯಮ ವರ್ಗದಕುಟುಂಬವೊಂದರ ಹೋರಾಟದ ಕಥಾ ಹಂದರಹೊಂದಿರುವ “100′ ಚಲನಚಿತ್ರ ನ.19ರಂದುರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದುಚಿತ್ರದ ನಿರ್ದೇಶಕ, ನಾಯಕ ನಟ ರಮೇಶ ಅರವಿಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,”100′ ಪೊಲೀಸ್ ಸಹಾಯವಾಣಿ ನಂಬರ್.ಚಿತ್ರದ ನಾಯಕ ಪೊಲೀಸ್ ಅಧಿಕಾರಿ. ಆತನಕುಟುಂಬ ಸಾಮಾಜಿಕ ಜಾಲತಾಣದ ವಂಚಕರವಂಚನೆಗೆ ಒಳಗಾಗುವುದು, ಅದರಿಂದ ಹೊರಬರುವ ಬಗೆ ಹೇಗೆ ಎಂಬುದರ ಮೇಲೆ ಚಿತ್ರಕಥೆ ಸಾಗುತ್ತದೆ. 100 ಪಕ್ಕಾ ಫ್ಯಾಮಿಲಿ ಥ್ರಿಲ್ಲರ್‌ಚಿತ್ರ. ಎರಡು ಗಂಟೆಗಳ ಚಿತ್ರ ಕ್ಷಣದಿಂದ ಕ್ಷಣಕ್ಕೆಕುತೂಹಲ ಮೂಡಿಸುತ್ತದೆ. ಬಹಳ ಚೆನ್ನಾಗಿಸಿದ್ಧವಾಗಿದೆ.
ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿಚಿತ್ರ ನೋಡುವ ಮೂಲಕ ಯಶಸ್ಸಿಗೆಸಹಕರಿಸಬೇಕು ಎಂದು ಮನವಿ ಮಾಡಿದರು.ಚಿತ್ರದ ನಾಯಕ ವಿಷ್ಣು ಮತ್ತು ಸೈಬರ್‌ಕ್ರಿಮಿನಲ್ ಜತೆಗೆ ಸಾಗುವ ಕಥೆಯೇ 100. ಈಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರೆದಭಾಗದಂತಿದೆ. ತೆಲುಗಿನಲ್ಲಿ 100 ಸೈಬರ್‌ಹೆಸರಿನಲ್ಲಿ ಚಿತ್ರ ಸಿದ್ಧವಾಗಿದೆ. ಕನ್ನಡದಲ್ಲಿಬಿಡುಗಡೆಯಾದ ನಂತರ ತೆಲುಗು ಚಿತ್ರ ಬಿಡುಗಡೆಮಾಡಲಾಗುವುದು.
ವಿಶ್ವಾಸ್, ಗೌರವ್ ಎಂಬಹೊಸಬರನ್ನು ಪರಿಚಯಿಸಲಾಗಿದೆ. ಅತ್ಯುತ್ತಮತಂತ್ರಜ್ಞರ ತಂಡ, ಪ್ರತಿಭಾವಂತರ ಗುಂಪುಚಿತ್ರಕ್ಕಾಗಿ ಕೆಲಸ ಮಾಡಿದೆ. ರಚಿತಾ ಅವರೊಂದಿಗೆತೆಲುಗಿನ ಪೂರ್ಣ ನಾಯಕಿ ನಟಿಯಾಗಿಅಭಿನಯಿಸಿದ್ದಾರೆ. ಚಿತ್ರದ ಟೈಟಲ್ 100ಗೂಇಬ್ಬರು ನಾಯಕಿಯರಿಗೂ ಸಂಬಂಧವೇ ಇಲ್ಲ.ಆದರೂ ಚಿತ್ರ ನೋಡಿದಾಗ ಪ್ರತಿಯೊಂದುಪಾತ್ರವೂ ಚಿತ್ರದ ಟೈಟಲ್‌ಗೆ ಹೊಂದಿಕೊಂಡೇಸಾಗುತ್ತದೆ. ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರದಕಥೆಗೆ ಪೂರಕವಾಗಿ ಬಂಡವಾಳ ಒದಗಿಸಿದ್ದಾರೆಎಂದರು.
ಮೊಬೈಲ್, ಇನ್‌ಸ್ಟಾಗ್ರಾಂ ಮನೆಯನ್ನೇಹೊಕ್ಕಿವೆ. ಒಂದೇ ಮನೆಯಲ್ಲಿ ಪ್ರತಿಯೊಬ್ಬರೂಕೈಯಲ್ಲಿರುವ ಮೊಬೈಲ್ ನೋಡುವುದರಲ್ಲೇಮುಳುಗಿ ಹೋಗಿರುವುದು ಸಾಮಾನ್ಯಎನ್ನುವಂತಾಗಿದೆ. ಸಾಮಾಜಿಕ ಜಾಲತಾಣಗಳುಮಧ್ಯಮ ವರ್ಗದ ಕುಟುಂಬದ ಮೇಲೆಏನೆಲ್ಲ ಪರಿಣಾಮ ಉಂಟು ಮಾಡಬಲ್ಲದು.ಗೊತ್ತೋ, ಗೊತ್ತಿಲ್ಲದೆಯೋ ಆ ಕುಟುಂಬಸಾಮಾಜಿಕ ಜಾಲತಾಣದಿಂದ ಹೇಗೆ ವಂಚನೆಗೆಒಳಗಾಗಬಹುದು ಎಂಬುದನ್ನು 100 ಚಿತ್ರದಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆಎಂದರು.ನನ್ನ ಗೆಳೆಯನ ಜೀವನದಲ್ಲಿ ನಡೆದಘಟನೆಯನ್ನು ಕಥೆ ಮಾಡಲಾಗಿದೆ.
ಇನ್ನುಳಿದಕಥೆಯನ್ನು ನಾನೇ ಸಿದ್ಧಪಡಿಸಿದ್ದೇನೆ. ಚಿತ್ರನೋಡಿದರೆ ನಮ್ಮ ಜೀವನದಲ್ಲೂ ಇದೇರೀತಿ ಇದೆಯೆಲ್ಲ ಎಂಬ ಭಾವನೆ ಬರುತ್ತದೆ.ಯಾವುದೇ ಚಿತ್ರ ನಮ್ಮ ಬದುಕಿಗೆ ಹತ್ತಿರವಾದಕಥೆ ಹೊಂದಿದ್ದಲ್ಲಿ ಚಿತ್ರ ಗೆದ್ದೇ ಗೆಲ್ಲುತ್ತದೆ. ತಮ್ಮರಾಮ ಶ್ಯಾಮ ಭಾಮ, ಅಮೆರಿಕ ಅಮೆರಿಕಇದೇ ಸೂತ್ರದ ಮೂಲಕ ಪ್ರೇಕ್ಷಕರ ಮನಗೆದ್ದವು. ಜೀವನದ ಅನುಭವವೂ ಚಿತ್ರಕಥೆಯಲ್ಲಿಮೇಳೈಸುವಂತಾಗಬೇಕು ಎಂದರು.
ನಿರ್ಮಾಪಕ ಎಂ. ರಮೇಶ್ ರೆಡ್ಡಿಮಾತನಾಡಿ, “100′ ತಮ್ಮ ಮೂರನೇ ಚಿತ್ರ.ರಮೇಶ ಅರವಿಂದ ಒಳ್ಳೆಯ ಕಥೆಯನ್ನು ಬಹಳಸುಂದರವಾಗಿ ಮಾಡಿದ್ದಾರೆ. ಪ್ರತಿಯೊಬ್ಬರೂಚಿತ್ರ ನೋಡುವ ಮೂಲಕ ಆಶೀರ್ವದಿಸಬೇಕುಎಂದು ಕೋರಿದರು.