Advertisement

ಕಾಯ್ದೆ ತಿದ್ದುಪಡಿ ವಿರೋಧಿಸಿ 14 ರಂದು ಪ್ರತಿಭಟನೆ

07:37 PM Nov 09, 2021 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರದ ಮೂರುಕರಾಳ ಕೃಷಿ ಕಾಯ್ದೆ ಜಾರಿ, ರಾಜ್ಯಸರ್ಕಾರದ ಎಪಿಎಂಸಿ, ವಿದ್ಯುತ್‌ ಕಾಯ್ದೆತಿದ್ದುಪಡಿ ವಿರೋಧಿಸಿ ನ. 14 ರಂದುಸರ್ಕಾರಗಳ ವಿರುದ್ಧ ಹೋರಾಟದಸಮರ ಸಾರಲಾಗುವುದು ಎಂದುಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿಬೆಂಗಳೂರಿನ ಸಮಾಜವಾದಿಅಧ್ಯಯನ ಕೇಂದ್ರ, ಅಪ್ನಾ ಭಾರತ್‌ಮೋರ್ಚಾ ಮತ್ತು ಪ್ರಗತಿಪರ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದಜನಪರ ಹೋರಾಟ, ಚಳವಳಿಗಳುಮತ್ತು ಚುನಾವಣಾ ರಾಜಕಾರಣ ಕುರಿತುಆಯೋಜಿಸಿದ್ದ ಚಿಂತನ-ಮಂಥನಗೋಷ್ಠಿಯಲ್ಲಿ ಅವರು ಮಾತನಾಡಿದರು.

Advertisement

ದೇಶದ ಜನರಿಗೆ ಶಾಪವಾಗಿರುವ ಬಿಜೆಪಿಸರ್ಕಾರವನ್ನು ಕಿತ್ತೂಗೆಯಲು ಶಪಥಮಾಡಬೇಕು ಎಂದು ಕರೆ ನೀಡಿದರು.ಕೇಂದ್ರ ಸರ್ಕಾರ ಜಾರಿಗೆತಂದಿರುವ ಮೂರು ರೈತ ವಿರೋಧಿಕಾಯ್ದೆಗಳನ್ನು ವಿರೋಧಿಸಿ ರೈತರುದೆಹಲಿಯಲ್ಲಿ ಸುದೀರ್ಘ‌ ಹೋರಾಟನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರಜಾರಿಗೆ ತಂದಿರುವ ಎಪಿಎಂಸಿತಿದ್ದುಪಡಿ ಕಾಯ್ದೆ, ಭೂಸುಧಾರಣಾಕಾಯ್ದೆ ತಿದ್ದುಪಡಿ ವಿರೋಧಿಸಿ ನ. 14ರಂದು ಸರ್ಕಾರಗಳ ವಿರುದ್ಧ ವಿರುದ್ಧಪ್ರಜಾಪ್ರಭುತ್ವದ ಮೌಲ್ಯಗಳನ್ನುಆಯುಧಗಳನ್ನಾಗಿಸಿಕೊಂಡು ಸಮರಸಾರಲಾಗುವುದು ಎಂದರು. ಪ್ರಸ್ತುತವಾತಾವರಣದಲ್ಲಿ ಸರ್ಕಾರದ ನೀತಿ,ನಿಯಮ, ಬೆಲೆ ಏರಿಕೆ ಮುಂತಾದವಿಷಯಗಳ ಸಂಬಂಧ ಜನರಲ್ಲಿಸರ್ಕಾರಗಳ ಬಗ್ಗೆ ವಿಶ್ವಾಸವೇಇಲ್ಲದಂತಾಗಿದೆ. ಕೆಲವಾರುರಾಜಕಾರಣಿಗಳೂ ಭ್ರಷ್ಟರು, ದುಷ್ಟರುಎಂಬ ಭಾವನೆ ಇದೆ. ನಾವೆಲ್ಲರೂಸೇರಿಕೊಂಡು ಹೋರಾಟದಭೂಮಿಕೆಯನ್ನು ಹದ ಮಾಡಬೇಕಾಗಿದೆ.ಎಲ್ಲವೂ ಗಂಡಾಂತರದಲ್ಲಿದ್ದು, ಜನಪರಹೋರಾಟಕ್ಕೆ ಪಣ ತೊಡಬೇಕುಎಂದು ಮನವಿ ಮಾಡಿದರು. ನಿವೃತ್ತಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪಮಾತನಾಡಿ, ಭ್ರಷ್ಟಾಚಾರವನ್ನೇಮೌಲ್ಯವೆಂದು ಬಿಂಬಿಸುತ್ತಿರುವಕಾಲಘಟ್ಟದಲ್ಲಿ ನಾವಿದ್ದೇವೆ.

ಪ್ರಭುತ್ವಬಹುಮತದ ದೌರ್ಜನ್ಯವನ್ನುಹೇರುತ್ತಿದೆ. ಬಹುಮತವನ್ನೇ ಆಯುಧವನ್ನಾಗಿಸಿಕೊಂಡು ದೇಶದ ಜನರ ಮೇಲೆಝಳಪಿಸುತ್ತಿದ್ದಾರೆ. ಚಳವಳಿಗಾರರಿಗೆದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆಎಂದು ತೀವ್ರ ಅಸಮಾಧಾನವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌ ಅವರನ್ನುಹಿಂದುತ್ವದ ಮುಖವಾಣಿಯನ್ನಾಗಿಬಿಂಬಿಸಲಾಗುತ್ತಿದೆ. ಎಲ್ಲ ಜನಪರಶಕ್ತಿಗಳು ಒಂದಾಗಿ ಹೋರಾಟಮಾಡಿದರೆ, ಜನವಿರೋಧಿ ಸರ್ಕಾರಕಿತ್ತೂಗೆಯುವುದು ದೊಡ್ಡ ವಿಷಯ ಆಗಲಾರದು ಎಂದು ಅಭಿಪ್ರಾಯಪಟ್ಟರು.

ಪ್ರಗತಿಪರ ಹೋರಾಟಗಾರತೇಜಸ್ವಿ ಪಟೇಲ್‌ ಮಾತನಾಡಿ,ಪ್ರಸ್ತುತ ಸರ್ಕಾರಗಳ ಜನವಿರೋಧಿನೀತಿಗಳನ್ನು ವ್ಯಾಪಕವಾಗಿ ಚರ್ಚೆಮಾಡುತ್ತಿದ್ದರೂ ಸಹ ಸರ್ಕಾರಗಳಮೇಲೆ ಯಾವುದೇ ಪರಿಣಾಮಬೀರುತ್ತಿಲ್ಲ. ಕಾರಣ ಏನಂದರೆಹೋರಾಟದ ನಾಯಕತ್ವ ಆಯಾವರ್ಗದ ಹೋರಾಟದ ವಕೀಲಿಕೆಯಾಗಿಮಾರ್ಪಟ್ಟಿದೆ. ಸರ್ಕಾರದ ಮೇಲೆಪರಿಣಾಮ ಬೀರಬೇಕಾದರೆ ಎಲ್ಲರಲ್ಲೂಸಮಷ್ಟಿ ಭಾವ ಬರಬೇಕು ಎಂದು ಆಶಿಸಿದರು.

ಹರಿಯಾಣದ ಮಾಜಿಸಂಸದ ಹಾಗೂ ಅಪ್ನಾ ಭಾರತ್‌ಮೋರ್ಚಾದ ರಾಷ್ಟ್ರೀಯ ಸಂಚಾಲಕಅಶೋಕ್‌ ತನ್ವರ್‌ ಚಿಂತನ-ಮಂಥನಕಾರ್ಯಕ್ರಮ ಉದ್ಘಾಟಿಸಿದರು.ಲೇಖಕಿ ಬಿ.ಟಿ. ಲಲಿತಾ ನಾಯ್ಕ,ನವದೆಹಲಿಯ ಜಾಮೀಯಾ ಮಿಲಿಯವಿಶ್ವವಿದ್ಯಾಲಯದ ಪ್ರಾಧ್ಯಾಪಕಡಿ.ಕೆ. ಗಿರಿ, ಸಮಾಜ ಪರಿವರ್ತನಾವೇದಿಕೆಯ ಬಿ. ಗೋಪಾಲ್‌,ಹುಚ್ಚವ್ವನಹಳ್ಳಿ ಮಂಜುನಾಥ್‌,ಬಲ್ಲೂರು ರವಿಕುಮಾರ್‌, ಅಂಜಿನಪ್ಪಪೂಜಾರ್‌, ರಾಘು ದೊಡ್ಡಮನಿ,ಐರಣಿ ಚಂದ್ರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next