Advertisement

ಕಸಾಪ ಚುನಾವಣೆಯಲ್ಲಿ ಗೆಲುವು ಖಚಿತ

05:01 PM Nov 09, 2021 | Team Udayavani |

ದಾವಣಗೆರೆ: “ಈ ಬಾರಿ ಪರಿಷತ್ತಿಗೆ ಮಹಿಳೆ’ ಎಂಬಅಲೆ ಎಲ್ಲೆಡೆ ಕಂಡು ಬರುತ್ತಿದೆ ಆದ್ದರಿಂದ ತಮ್ಮಗೆಲುವು ನಿಶ್ಚಿತ ಎಂದು ಕೇಂದ್ರೀಯ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ| ಸರಸ್ವತಿಚಿಮ್ಮಲಗಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 106 ವರ್ಷ ಇತಿಹಾಸ ಹೊಂದಿರುವಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈವರೆಗೆಮಹಿಳೆಯರು ಸ್ಪರ್ಧಿಸಿರಲಿಲ್ಲ. ತಾವು ಮೊದಲಬಾರಿಗೆ ಸ್ಪರ್ಧಿಸಿದ್ದು “ಈ ಬಾರಿ ಪರಿಷತ್ತಿಗೆ ಮಹಿಳೆ’ಎಂಬ ಅಲೆ ಇದೆ. ತಮ್ಮ ಗೆಲುವು ಮಹಿಳಾ ಕುಲದಗೆಲವಾಗಲಿದೆ ಎಂದರು.ನಾನು 36 ವರ್ಷಗಳ ಕಾಲ ಪ್ರಾಧ್ಯಾಪಕಿಯಾಗಿಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ.

ಸಾಹಿತಿಯಾಗಿ40ಕ್ಕೂ ಹೆಚ್ಚು ಕೃತಿ ಹೊರ ತಂದಿದ್ದೇನೆ. ಹಲವಾರುಕವನಗಳನ್ನು ಪಠ್ಯಗಳಲ್ಲಿ ಅಳವಡಿಸಲಾಗಿದೆ. ಅಲ್ಲದೆ”ಶ್ರೇಷ್ಠ ಕೃಷಿಕ’ ಪ್ರಶಸ್ತಿಯನ್ನೂ ಪಡೆದಿದ್ದೇನೆ. ಅಧ್ಯಕ್ಷಸ್ಥಾನ ನನಗೆ ಪದವಿ ಅಲ್ಲ, ಅದು ಕನ್ನಡಮ್ಮನ ಸೇವೆಯಅವಕಾಶ ಎಂದು ಭಾವಿಸಿದ್ದೇನೆ. ಹಾಗಾಗಿ ಎಲ್ಲರೂತಮಗೆ ಸಹಕಾರ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಹಿಳೆ ಏನೆಲ್ಲ ಮಾಡಬಹುದು ಎಂಬುದನ್ನುಅನೇಕರು ಸಾಧಿಸಿ ತೋರಿಸಿದ್ದಾರೆ. ಸಂಸ್ಕೃತಿಎಂದರೇನೇ ಮಹಿಳೆ. ಕನ್ನಡ ನಾಡಿನ ಸಂಸ್ಕೃತಿಉಳಿಸುವ ನಿಟ್ಟಿನಲ್ಲಿ ಮಹಿಳಾ ಪ್ರತಿನಿಧಿಯಾಗಿಸ್ಪರ್ಧೆಗೆ ಇಳಿದಿದ್ದೇನೆ. ಎಲ್ಲರೂ ತಮ್ಮನ್ನು ಗೆಲ್ಲಿಸುವಮೂಲಕ ಶತಮಾನದ ಇತಿಹಾಸ ಹೊಂದಿರುವಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಇತಿಹಾಸಕ್ಕೆ ಕಾರಣಕರ್ತರಾಗುತ್ತಾರೆ ಎಂದರು.

ನನ್ನದು ಹಿಡಿದಂತಹ ಕೆಲಸ ಮಾಡಿ ತೋರಿಸುವ ಮನೋಭಾವ. ಏನಾದರೂ ಮಾಡಿ ಸಾಧಿಸಿತೋರಿಸಬಲ್ಲೆ ಎಂಬ ವಿಶ್ವಾಸ ಇದೆ. 3.10 ಲಕ್ಷಮತದಾರರಲ್ಲಿ 60 ಸಾವಿರಕ್ಕೂ ಮಹಿಳಾ ಮತದಾರರುಇದ್ದಾರೆ. 21 ಸ್ಪರ್ಧಿಗಳಲ್ಲಿ ಏಕೈಕ ಮಹಿಳಾಅಭ್ಯರ್ಥಿಯಾಗಿರುವ ನನ್ನ ಗೆಲುವಿಗೆ ಸಹಕರಿಸಬೇಕುಎಂದು ಕೋರಿದರು.

Advertisement

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿ,ಮಹಿಳೆ ಆಡಳಿತ ನಿಭಾಯಿಸಬಲ್ಲಳೇ ಎಂಬ ಸಂಶಯಬೇಡವೇ ಬೇಡ. ಆಡಳಿತವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. ಮಹಿಳೆಯರು ಅನುದಾನತರಬಲ್ಲರೇ ಎಂಬ ಮಾತಿದೆ. ಅನುದಾನ ತರಲಿಕ್ಕೆಬೇರೆ ಯಾವುದೋ ಲೋಕಕ್ಕೆ ಹೋಗಬೇಕಾಗಿಲ್ಲ.ಸರ್ಕಾರದ ಬಳಿ ಹೋಗಿ ಅನುದಾನ ತರಬಲ್ಲರು.

ಜಾತಿ, ಮತ, ಪಂಥ ಎಲ್ಲವನ್ನೂ ಮೀರಿದ ಮನಸ್ಥಿತಿಹೊಂದಿರುವ ಡಾ| ಸರಸ್ವತಿ ಚಿಮ್ಮಲಗಿ ಅವರನ್ನುಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಸಾಹಿತಿ ಎಚ್‌.ಕೆ. ಸತ್ಯಭಾಮ ಮಂಜುನಾಥ್‌,ಡಾ| ಪಾರ್ವತಿ, ಡಾ| ಬಿ. ವಾಸುದೇವ್‌,ಅಬ್ದುಲ್‌ ಮಜೀದ್‌, ಅರುಣಾಕುಮಾರಿಬಿರಾದಾರ್‌, ಅನ್ನಪೂರ್ಣ ಪಾಟೀಲ್‌ ಇತರರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next