Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕಬ್ಬು ಪೂರೈಕೆ ಮಾಡಿದಂತಹ ರೈತರಿಗೆಕಾರ್ಖಾನೆಗಳು 14 ದಿನದ ಒಳಗಾಗಿ ಹಣಪಾವತಿಸಬೇಕು. ವಿಳಂಬವಾದರೆ ಶೇ.15ರಷ್ಟುಬಡ್ಡಿ ಸೇರಿಸಿ ಕೊಡಬೇಕು ಎಂಬ ನಿಯಮ ಇದೆ.ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣ ಕಾಯ್ದೆ-1966ತಿದ್ದುಪಡಿ ತರುವ ಮೂಲಕ ಕಾರ್ಖಾನೆ ಯವರು60 ದಿನಗಳ ಕಾಲಾವಕಾಶ, ಮೂರು ಕಂತುಗಳಲ್ಲಿಹಣ ಪಾವತಿಗೆ ಅವಕಾಶ ಮಾಡಿಕೊಡಲು ಮುಂದಾಗಿರುವುದು ಅತ್ಯಂತ ಖಂಡನೀಯಎಂದು ದೂರಿದರು.
Related Articles
Advertisement
ಎಫ್‌ಆರ್‌ಪಿ ದರ ಪರಿಷ್ಕರಣೆಗೆ ಒತ್ತಾಯಿಸಿ ಅ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿಸಚಿವ ಬಿ.ಸಿ. ಪಾಟೀಲ್ ಇತರರು ಎಫ್‌ಆರ್‌ಪಿಪುನರ್ ಪರಿಶೀಲಿಸುವ ಭರವಸೆ ನೀಡಿ ಒಂದುತಿಂಗಳು ಕಳೆದರೂ ಯಾವುದೇ ಗಂಭೀರ ಕ್ರಮತೆಗೆದುಕೊಂಡಿಲ್ಲ. ಕೂಡಲೇ ಎಫ್‌ಆರ್‌ಪಿ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಲಾಗುವುದು.
ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಲಾಗುವುದು ಎಂದುತಿಳಿಸಿದರು.ಕಳೆದ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಬರಬೇಕಾದಬಾಕಿ 600 ಕೋಟಿ ಇತ್ತು. ಈಗ ಪೂರೈಕೆಮಾಡುತ್ತಿರುವ ಕಬ್ಬಿನ ಬಾಕಿ ಸೇರಿಸಿದರೆ 2500ಕೋಟಿ ಬರಬೇಕಾಗುತ್ತದೆ. ಬಾಕಿ ನೀಡುವುದು ವಿಳಂಬವಾಗುತ್ತಿದೆ.
ಕಳೆದ ಸಾಲಿನಲ್ಲಿ 3500 ಕೋಟಿಟನ್ ಕಬ್ಬಿತ್ತು. ಈ ವರ್ಷ 5 ಕೋಟಿ ಟನ್ ಬರುತ್ತಿದೆಎಂದು ತಿಳಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್,ಹತ್ತಳ್ಳಿ ದೇವರಾಜ್, ಸಂಚಾಲಕ ಎನ್.ಎಚ್.ದೇವಕುಮಾರ್, ಪೂಜಾರ್ ಅಂಜಿನಪ್ಪಸುದ್ದಿಗೋಷ್ಠಿಯಲ್ಲಿದ್ದರು.