Advertisement

ದಲಿತ-ಹಿಂದುಳಿದವರ ಕೈಯಲ್ಲಿದೆ ದೇಶದ ಆಡಳಿತ

05:23 PM Nov 04, 2021 | Team Udayavani |

ಚಿತ್ರದುರ್ಗ: ಮುಂದಿನ ಬಜೆಟ್‌ನಲ್ಲಿ ದಲಿತ ಹಾಗೂಹಿಂದುಳಿದ ಸಮುದಾಯಗಳಿಗೆ ಹೆಚ್ಚು ಆದ್ಯತೆನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿಬುಧವಾರ ನಡೆದ ಹಿಂದುಳಿದ ವರ್ಗಗಳಮೋರ್ಚಾ ಜಿಲ್ಲಾ ವಿಶೇಷ ಕಾರ್ಯಕಾರಿಣಿಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಪಕ್ಷಹಿಂದುಳಿದವರು, ದಲಿತರನ್ನು ಕೇವಲ ಮತ ಬ್ಯಾಂಕ್‌ಆಗಿ ಬಳಸಿಕೊಂಡು ಚುನಾವಣೆ ಮುಗಿಯುತ್ತಲೇಮರೆತಿದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರದಲ್ಲಿದಲಿತರು, ಹಿಂದುಳಿದವರಿಗೆ ಇಡೀ ದೇಶದಲ್ಲಿಆದ್ಯತೆ ನೀಡಲಾಗುತ್ತಿದೆ ಎಂದರು.

ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ31 ಸಾವಿರ ಮತಗಳ ಅಂತರದಿಂದ ಗೆದ್ದಿದೆ. ಇಷ್ಟುದೊಡ್ಡ ಪ್ರಮಾಣದ ಮತಗಳ ಅಂತರವಿದ್ದರೂ,ಕಾಂಗ್ರೆಸ್‌ ನಾವು ಎರಡನೇ ಸ್ಥಾನಕ್ಕೆ ಬಂದಿದ್ದೇವೆಅದೇ ಸಾಧನೆ ಎಂದು ಹೇಳುತ್ತಿರುವುದುಹಾಸ್ಯಾಸ್ಪದವಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಬಿಜೆಪಿ7 ಸಾವಿರ ಮತಗಳ ಅಂತರದಿಂದ ಸೋತಿದ್ದರೂ,ಅಲ್ಲಿನ ನಮ್ಮ ಸಂಘಟನೆ, ಶಕ್ತಿ ಇದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.

ಇಡೀ ದೇಶದಲ್ಲಿ ಹಿಂದುಳಿದ ಹಾಗೂ ದಲಿತಸಮುದಾಯಗಳು ಬಿಜೆಪಿ ಜತೆಗೆ ಬಂದಿವೆ. ಈವರ್ಗಗಳಿಗೆ ಮೋಸ ಮಾಡಿದ ಕಾರಣಕ್ಕೆ ಕಾಂಗ್ರೆಸ್‌ನಾಶವಾಗುತ್ತಿದೆ. ದೇಶದ ಇತಿಹಾಸದಲ್ಲೇ ಮೊದಲಬಾರಿಗೆ ಕೇಂದ್ರದ ಸಂಪುಟದಲ್ಲಿ 27 ಸಚಿವ ಸ್ಥಾನಹಿಂದುಳಿದವರಿಗೆ, 20 ದಲಿತರಿಗೆ ನೀಡಲಾಗಿದೆ.ದೇಶದ ಆಡಳಿತ ದಲಿತ-ಹಿಂದುಳಿದವರಕೈಯಲ್ಲಿದೆ ಎಂದರು.

ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಪ್ರತಿಮಂಡಲದಿಂದ 8 ಜನ ಹಿಂದುಳಿದ ವರ್ಗದಮೋರ್ಚಾ ಕಾರ್ಯಕರ್ತರನ್ನು ಸೇರಿಸಿಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು.

Advertisement

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷನೆ.ಲ.ನರೇಂದ್ರಬಾಬು ಮಾತನಾಡಿ, ಹಲವುವರ್ಷಗಳಿಂದ ಕೇಂದ್ರದಲ್ಲಿ ಹಿಂದುಳಿದ ವರ್ಗಗಳಆಯೋಗ ಇದ್ದರೂ, ಅದಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆತಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರುಮಾನ್ಯತೆ ನೀಡಿದ್ದಾರೆ. ಇದರೊಟ್ಟಿಗೆ ಶೈಕ್ಷಣಿಕವಾಗಿಶೇ.27ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ ಎಂದುತಿಳಿಸಿದರು. ರಾಜ್ಯದಲ್ಲಿ ಹಿಂದುಳಿದ ವರ್ಗಗಳಪಟ್ಟಿಯಲ್ಲಿ 800ಕ್ಕೂ ಹೆಚ್ಚು ಉಪ ಪಂಗಡಗಳಿವೆ.ಅನೇಕ ಸಣ್ಣ ಜಾತಿಗಳಿಗೆ ಇನ್ನೂ ಕೂಡಾಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನವೂ ಸಿಕ್ಕಿಲ್ಲ.ಸಾಮಾಜಿಕವಾಗಿ ಎಲ್ಲ ಸ್ಥಾನಮಾನಗಳು ಸಿಕ್ಕಿದಾಗಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದರು.

ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷಸಿದ್ದೇಶ್‌ ಯಾದವ್‌ ಮಾತನಾಡಿದರು. ಬಿಜೆಪಿಜಿಲ್ಲಾಧ್ಯಕ್ಷ ಎ.ಮುರುಳಿ, ಒಬಿಸಿ ಮೋರ್ಚಾಪದಾಧಿಕಾರಿಗಳಾದ ಸುರೇಶ್‌ಬಾಬು, ಹೇಮಂತ್‌ಕುಮಾರ್‌, ಕೃಷ್ಣ, ಪ್ರವೀಣ್‌, ನವೀನ್‌, ಶಂಕ್ರಪ್ಪಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next