Advertisement

ಮಾನೆ ಹೊಗಳಿದ ಸಚಿವ ಈಶ್ವರಪ್ಪ

04:30 PM Nov 03, 2021 | Team Udayavani |

ದಾವಣಗೆರೆ: ಹಾನಗಲ್ಲ ಕ್ಷೇತ್ರದಲ್ಲಿಅತ್ಯುತ್ತಮ ಕೆಲಸದಿಂದ ಶ್ರೀನಿವಾಸಮಾನೆ ಗೆದ್ದಿದ್ದಾರೆ. ಸಾಕಷ್ಟುಶ್ರಮ ಹಾಕಿ ಸಮಾಜಸೇವೆಮಾಡಿದ್ದಾರೆ ಎಂದುಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದಅವರು, ಶ್ರೀನಿವಾಸ ಮಾನೆಎರೆಡು ಮೂರು ವರ್ಷದಿಂದ ಕ್ಷೇತ್ರದಲ್ಲಿಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿಸೋಲು-ಗೆಲುವು ಸಾಮಾನ್ಯ.ಸಿದ್ದರಾಮಯ್ಯ, ಇಂದಿರಾ ಗಾಂಧಿಸೋತಿರಲಿಲ್ಲವೇ ಎಂದು ಪ್ರಶ್ನಿಸಿದರು.ಹಾನಗಲ್ಲದಲ್ಲಿ ನಾವು ಸೋತಿದ್ದರೂಸಿಂದಗಿಯಲ್ಲಿ ದಿಗ್ವಿಜಯ ಸಾಧಿಸಿದ್ದೇವೆ.

ಚುನಾವಣೆಯಲ್ಲೂ ಎಲ್ಲರೂ ಗೆಲ್ಲಲುಸಾಧ್ಯವಿಲ್ಲ. ಹಾನಗಲ್ಲ ಸೋಲಿನಬಗ್ಗೆ ಪರಾಮರ್ಶೆ ನಡೆಸುತ್ತೇವೆ.ಸೋಲನ್ನಾಗಲಿ, ಗೆಲುವನ್ನಾಗಲಿಯಾರೊಬ್ಬರ ಮೇಲೆಹಾಕುವುದಿಲ್ಲ. ಭವಿಷ್ಯದಚುನಾವಣೆಯಲ್ಲಿ ತಪ್ಪುಗಳನ್ನುತಿದ್ದಿಕೊಳ್ಳುತ್ತೇವೆ ಎಂದಈಶ್ವರಪ್ಪ, ಸಿಎಂ ಬೊಮ್ಮಾಯಿನೇತೃತ್ವದಲ್ಲೇ 2023ರಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನುಕೇಂದ್ರದ ನಾಯಕರೇ ಸ್ಪಷ್ಟಪಡಿಸಿದ್ದಾರೆಎಂದು ತಿಳಿಸಿದರು.

ಉಪಚುನಾವಣೆ ಫಲಿತಾಂಶಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ.ಹಾನಗಲ್ಲ ಫಲಿತಾಂಶವನ್ನು ಕಾಂಗ್ರೆಸ್‌ದಿಕ್ಸೂಚಿ ಎಂದು ಪರಿಗಣಿಸಿದರೆ ಸಿಂದಗಿಫಲಿತಾಂಶವನ್ನು ಹೇಗೆ ಪರಿಗಣಿಸಬೇಕು.ಆದ್ದರಿಂದ ಉಪಚುನಾವಣೆ ಫಲಿತಾಂಶಭವಿಷ್ಯದ ಚುನಾವಣೆ ದಿಕ್ಸೂಚಿ ಅಲ್ಲಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next