Advertisement

ನಮ್ಮದು ಸ್ಪದನಶೀಲ ಸರ್ಕಾರ

11:11 AM Oct 17, 2021 | Team Udayavani |

ದಾವಣಗೆರೆ: ಕರ್ನಾಟಕದಲ್ಲಿ ಸ್ಪಂದನಶೀಲಸರ್ಕಾರ ಇದೆ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಶನಿವಾರ ನ್ಯಾಮತಿ ತಾಲೂಕಿನ ಕುಂದೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳನಡೆ ಹಳ್ಳಿಗಳ ಕಡೆ-ಗ್ರಾಮವಾಸ್ತವ್ಯ ಕಾರ್ಯಕ್ರಮ ಹಾಗೂವಿವಿಧ ಸೌಲಭ್ಯಗಳ ವಿತರಣೆ, ಯೋಜನೆಗಳ ಉದ್ಘಾಟನೆ,ಶಂಕುಸ್ಥಾಪನೆ ನೆರವೇರಿಸಿಮಾತನಾಡಿದ ಅವರು, ಅಧಿಕಾರ ಹೆಪ್ಪುಗಟ್ಟಿವಿಧಾನಸಭೆಯಲ್ಲಿ ಕುಳಿತುಕೊಳ್ಳದೆ ಜೇನುತುಪ್ಪವಾಗಿ ಗ್ರಾಮೀಣ ಪ್ರದೇಶಕ್ಕೆಹರಿಯುವಂತಾಗಬೇಕು ಎನ್ನುವ ಕಲ್ಪನೆ ನಮ್ಮ ಸರ್ಕಾರದ್ದು. ಈಗ ಕಾಲ ಬದಲಾಗಿದೆ, ಜನರು ಸಹ ಸಾಕಷ್ಟುಜಾಗೃತರಾಗಿದ್ದಾರೆ. ಸ್ಪಂದನಶೀಲ ಸರ್ಕಾರ ಕರ್ನಾಟಕದಲ್ಲಿದೆ.

ನಾವುಕೊಡುತ್ತಿರುವ ಸ್ವತ್ಛ, ದಕ್ಷ, ಜನಪರಆಡಳಿತದ ಲಾಭವನ್ನ ನಾಡಿನ ಜನರುಪಡೆಯಬೇಕು. ಗ್ರಾಮೀಣ ಭಾಗದಜನರಿಗೆ ಸಂಪರ್ಕ ಇರುವ ಎಲ್ಲಸಂಸ್ಥೆಗಳು ಸಮಪರ್ಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜನಪರಸರ್ಕಾರ ಆಗುತ್ತದೆ ಎಂಬ ತತ್ವದಹಿನ್ನೆಲೆಯಲ್ಲಿ ಸರ್ಕಾರವವನ್ನುಜನರ ಮನೆಯ ಬಾಗಿಲಿಗೆತಲುಪಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳುಮಾತ್ರವಲ್ಲ, ಇಡೀ ಸರ್ಕಾರವೇ ಗ್ರಾಮಗಳಕಡೆ ನಡೆದಿದೆ. ಅಭಿವೃದ್ಧಿ ಜನರ ಸುತ್ತಲೂಆಗಬೇಕು. ಜನರ ಬಳಿಯೇ ಅಭಿವೃದ್ಧಿ,ಜನರಿಗೆ ಸ್ಥಿರವಾದ ಬದುಕು ಸಿಗುವಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next