Advertisement

ಹುಚ್ಚು-ಮಾನಸಿಕ ಆರೋಗ್ಯ ಬೇರೆ ಬೇರೆ

05:31 PM Oct 15, 2021 | Team Udayavani |

ದಾವಣಗೆರೆ: ಮಾನಸಿಕ ಆರೋಗ್ಯ ಎಂಬುದು ಕೇವಲಮನಸ್ಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ದೈಹಿಕವಾಗಿಯೂಪರಿಣಾಮ ಬೀರುವಂತಹದ್ದು ಎಂದು ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯವಿಭಾಗದ ಹಿರಿಯ ಪ್ರಾಧ್ಯಾಪಕ ಡಾ| ಕೆ. ನಾಗರಾಜರಾವ್‌ತಿಳಿಸಿದರು.

Advertisement

ಸೋಮವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಸ್ವರೂಪದಬಗ್ಗೆ ಬಹಳಷ್ಟು ಜನರಲ್ಲಿ ಗೊಂದಲವಿದೆ. ಮಾನಸಿಕ ರೋಗಮತ್ತು ಮಾನಸಿಕವಾಗಿ ಆರೋಗ್ಯ ಎಂದರೆ ಒಂದೇ ಎಂದುತಿಳಿದುಕೊಂಡಿದ್ದಾರೆ.

ದೈನಂದಿನ ಚಟುವಟಿಕೆಗಳಿಗೆ ಅಡಚಣೆಉಂಟು ಮಾಡುವ ಮಾನಸಿಕ ಅಸಮತೋಲನವನ್ನುಮಾನಸಿಕ ರೋಗ ಎಂದು ಕರೆಯುತ್ತೇವೆ. ಮಾನಸಿಕರೋಗಗಳು ತನ್ನಲ್ಲಿರುವ ಮನಃ ಶಕ್ತಿಯನ್ನು ಹೆಚ್ಚಿನ ಸ್ಥಿತಿಗೆಕೊಂಡಯ್ಯುವ ಪ್ರಕ್ರಿಯೆಯನ್ನು ಮಾನಸಿಕ ಆರೋಗ್ಯಎನ್ನುತ್ತೇವೆ ಎಂದರು.

ಹುಚ್ಚು ಅಲ್ಲದ ಮಾನಸಿಕ ರೋಗಗಳು ಹುಚ್ಚುಮಾನಸಿಕ ರೋಗಗಳಿಗಿಂತ ಹೆಚ್ಚಿರುತ್ತವೆ. ಬಹಳಷ್ಟು ಜನರುಮಾನಸಿಕ ರೋಗಕ್ಕೂ, ಮಾನಸಿಕ ಆರೋಗ್ಯಕ್ಕೂ ಇರುವವ್ಯತ್ಯಾಸದ ಬಗ್ಗೆ ತಿಳಿದಿಲ್ಲ. ಶೇ. 100 ರಲ್ಲಿ 90 ರಷ್ಟು ಜನರಿಗೆಹುಚ್ಚು ಇರುವುದಿಲ್ಲ. ಆದರೆ ಮಾನಸಿಕ ರೋಗಗಳಿವೆ.

ಮನೋರೋಗಗಳು ಕೇವಲ ಮಾನಸಿಕ ಲಕ್ಷಣಗಳನ್ನುಮಾತ್ರ ಹೊಂದಿರುವುದಿಲ್ಲ ದೈಹಿಕ ಲಕ್ಷಣಗಳನ್ನುಹೊಂದಿರುವ ಲಕ್ಷಣಗಳನ್ನು ಹೊಂದಿವೆ. ನಿದ್ರಾಹೀನತೆ ,ತಲೆನೋವು, ಮೈ-ಕೈ ನೋವು ಈ ರೀತಿಯ ದೈಹಿಕ ಲಕ್ಷಣಗಳನ್ನು ಒಳಗೊಂಡಿರುತ್ತವೆ.

Advertisement

ಲಕ್ಷಣಗಳು ಬಹಳಷ್ಟು ದಿನಗಳಿಂದ ಕಾಡುತ್ತಿದ್ದರೆ ಮಾನಸಿಕ ರೋಗಕ್ಕೆ ಪರಿವರ್ತಿತಆಗುತ್ತವೆ ಎಂದು ತಿಳಿಸಿದರು. ಪ್ರಸ್ತುತ ದಿನಮಾನಗಳಲ್ಲಿ ಜನರಲ್ಲಿ ಮಾನಸಿಕರೋಗಗಳು ಬಹಳಷ್ಟು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.ಕೋವಿಡ್‌ ನಂತಹ ಸೋಂಕಿಗೆ ಒಳಪಟ್ಟವರು ಬಹಳಷ್ಟುಮಂದಿ ಮಾನಸಿಕ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಕೂಡಪ್ರಯತ್ನಿಸಿದ್ದಾರೆ.

ಮನಸಿಕ ಅಸ್ವಸ್ಥರು ವೈದ್ಯರ ಬಳಿ ಬರಲುಹಿಂಜರಿಯುತ್ತಾರೆ. ವೈದ್ಯರ ಬಳಿ ಬಂದು ಮುಕ್ತವಾಗಿ ತಮ್ಮಸಮಸ್ಯೆ ಹೇಳಿಕೊಂಡರೆ ಅವರು ಮುಕ್ತಸಮಾಲೋಚನೆಮಾಡುವುದರ ಮೂಲಕ ಮಾನಸಿಕ ರೋಗಕ್ಕೆ ಸೂಕ್ತ ಚಿಕಿತ್ಸೆನೀಡಿ ಕಾಯಿಲೆ ಗುಣಪಡಿಸಸಬಹುದು. ಕುಟುಂಬದವರಸಹಕಾರವು ಅತ್ಯಗತ್ಯವಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next