ದಾವಣಗೆರೆ: 2021-22ನೇ ಸಾಲಿನಎಸ್ಸೆಸ್ಸೆಲ್ಸಿಯ ಪ್ರಥಮ ಭಾಷೆ ಕನ್ನಡದಲ್ಲಿ125ಕ್ಕೆ 125 ಪರಿಪೂರ್ಣ ಅಂಕ ಪಡೆದವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕನ್ನಡಕೌಸ್ತುಭ ರಾಜ್ಯ ಪ್ರಶಸ್ತಿ, 125ಕ್ಕೆ 120ರಿಂದ124ರವರೆಗೆ ಅಂಕ ಪಡೆದ ಮಕ್ಕಳಿಗೆ ಜಿಲ್ಲಾಮಟ್ಟದ ಕನ್ನಡ ಕುವರ-ಕುವರಿ ಪ್ರಶಸ್ತಿ,625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದವರಿಗೆಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನಸಮಾರಂಭ ಆ. 27 ಮತ್ತು 28 ರಂದುಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿನಡೆಯಲಿದೆ ಎಂದು ಕಲಾಕುಂಚಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಎರಡು ದಿನನಡೆಯುವ ಸಮಾರಂಭದಲ್ಲಿ ಒಟ್ಟು 1174ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುವುದು.ಇವರಲ್ಲಿ 237 ವಿದ್ಯಾರ್ಥಿಗಳು ರಾಜ್ಯಪ್ರಶಸ್ತಿ ಪಡೆಯುತ್ತಿದ್ದಾರೆ. ಇದೇ ಮೊದಲಬಾರಿಗೆ ಕೇರಳದ 22 ವಿದ್ಯಾರ್ಥಿಗಳುಭಾಗವಹಿಸುತ್ತಿದ್ದಾರೆ ಎಂದರು.ಶನಿವಾರ ಬೆಳಗ್ಗೆ 10 ಗಂಟೆಗೆಮೊದಲನೇ ದಿನದ ಸಮಾರಂಭವನ್ನುಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷಟಿ.ಎಸ್. ನಾಗಾಭರಣ ಉದ್ಘಾಟಿಸುವರು.
ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷವೈ.ಕೆ. ಮುದ್ದುಕೃಷ್ಣ ಅಧ್ಯಕ್ಷತೆ ವಹಿಸುವರು.ಹಿರಿಯ ಗಾಯಕ ನಗರ ಶ್ರೀನಿವಾಸ್‌ಉಡುಪ, ಮೋತಿ ಪರಮೇಶ್ವರ, ಸಿದ್ಧಗಂಗಾವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜಭಾಗವಹಿಸುವರು. ಜಿಲ್ಲಾ ಮಟ್ಟದಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನಮಾಡಲಾಗುವುದು. ಭಾನುವಾರ ಬೆಳಗ್ಗೆ10ಕ್ಕೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನುಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷನಾಡೋಜ ಡಾ| ಮಹೇಶ್ ಜೋಶಿಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿಅಧ್ಯಕ್ಷ ಡಾ| ಜಿ.ಎಲ್. ಹೆಗಡೆ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ,ಸಿದ್ಧಗಂಗಾ ಪದವಿಪೂರ್ವ ಕಾಲೇಜಿನನಿರ್ದೇಶಕ ಡಾ| ಡಿ.ಎಸ್. ಜಯಂತ್‌ಭಾಗವಹಿಸುವರು. ಈ ಬಾರಿ “ಸರಸ್ವತಿಸಿರಿ’ ರಾಜ್ಯ ಪ್ರಶಸ್ತಿಯನ್ನು ಕೇರಳ ರಾಜ್ಯದಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯಹಿರಿಯ ಯಕ್ಷಗಾನ ವಿದ್ವಾಂಸೆಜಯಲಕ್ಷ್ಮೀ ಕಾರಂತ್ ಅವರಿಗೆ ಪ್ರದಾನಮಾಡಲಾಗುವುದು ಎಂದು ಹೇಳಿದರು.
ಮಕ್ಕಳನ್ನು ಮಂಗಳವಾದ್ಯದೊಂದಿಗೆಮೆರವಣಿಗೆಯಲ್ಲಿ ಕರೆತರಲಾಗುವುದು.ಪ್ರತಿ ವಿದ್ಯಾರ್ಥಿಗೆ ಕನ್ನಡದ ತಿಲಕವಿಟ್ಟು,ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ,ಕಿರೀಟವಿಟ್ಟು ಪುಷ್ಪವೃಷ್ಟಿಯೊಂದಿಗೆಪದಕ, ಸ್ಮರಣಿಕೆ, ಅವರದ್ದೇಭಾವಚಿತ್ರವಿರುವ ಸನ್ಮಾನ ಪತ್ರದೊಂದಿಗೆಸನ್ಮಾನಿಸಲಾಗುವುದು ಎಂದು ತಿಳಿಸಿದರು.ಕೆ.ಎಚ್. ಮಂಜುನಾಥ್, ವಸಂತಿಮಂಜುನಾಥ್, ಜಿ.ಬಿ. ಲೋಕೇಶ್,ಕುಸುಮಾ ಲೋಕೇಶ್, ಶಾಂತಪ್ಪ ಪೂಜಾರಿ,ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿಗಣೇಶ್ ಶೆಣೈ, ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.