Advertisement
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯೋಜನೆಯಡಿ ಕೃಷಿ ಉತ್ಪನ್ನಗಳಿಗೆ ಬೆಲೆನಿಗದಿ ಮಾಡುತ್ತದೆ. ಆದರೆ, ಕನಿಷ್ಠ ಬೆಂಬಲಬೆಲೆ ಯೋಜನೆಗೆ ಕಾನೂನಿನ ಮಾನ್ಯತೆಇಲ್ಲದೇ ಇರುವುದರಿಂದ ಕನಿಷ್ಠ ಬೆಂಬಲ ಬೆಲೆಯೋಜನೆಗೆ ಬೆಲೆಯೇ ಇಲ್ಲದಂತಾಗುತ್ತದೆ.ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದಧಾರಣೆಗಿಂತ ಲೂ ಕಡಿಮೆ ದರಕ್ಕೆ ಬೆಳೆಗಳಖರೀದಿಮಾಡಲಾಗುತ್ತಿದೆ.
ಕನಿಷ್ಠ ಬೆಂಬಲಬೆಲೆ ಯೋಜನೆಗೆ ಕಾಯ್ದೆ ರೂಪ ನೀಡಿದರೆನಿಗದಿತ ದರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಮಾಡಲಿಕ್ಕೆ ಬರುವುದೇ ಇಲ್ಲ. ಒಂದೊಮ್ಮೆಕಡಿಮೆ ಬೆಲೆಗೆ ಖರೀದಿ ಮಾಡಿದವರಿಗೆ ಲೈಸೆನ್ಸ್‌ರದ್ಧು, 1 ವರ್ಷ ಜೈಲು, ದಂಡದಂತಹ ಉಗ್ರಕ್ರಮ ತೆಗೆದುಕೊಳ್ಳುವ ಅವಕಾಶ ಮಾಡಿಕೊಟ್ಟಲ್ಲಿ ಎಲ್ಲ ರೈತರಿಗೆ ಅನುಕೂಲ ಆಗುತ್ತದೆ.
Related Articles
Advertisement
ಇಲ್ಲದೇ ಹೋದಲ್ಲಿದಾವಣಗೆರೆಯಲ್ಲಿ ಬೆಲೆ ಜಾಸ್ತಿ ಇದ್ದರೆ ಬಿಹಾರಮುಂತಾದ ಕಡೆಯಿಂದ ಮೆಕ್ಕೆಜೋಳವನ್ನಕಡಿಮೆ ದರಕ್ಕೆ ಖರೀದಿಸಿ ತಂದು, ಇಲ್ಲಿ ಮಾರಾಟಮಾಡಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯೋಜನೆಗೆ ಕಾಯ್ದೆ ರೂಪ ನೀಡುವುದು ಎಲ್ಲಕಡೆಯಿಂದ ಉತ್ತಮ ಎಂದು ತಿಳಿಸಿದರು.