Advertisement

ಆರು ಜನ ಹುತಾತ್ಮರ ನೆನಪಿನ್ನೂ ಹಸಿರು

02:28 PM Aug 15, 2022 | Team Udayavani |

ದಾವಣಗೆರೆ: ದೇಶದ ಸ್ವಾತಂತ್ರ್ಯ ಹೋರಾಟದಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು 1942ರಲ್ಲಿ ಕರೆ ನೀಡಿದ್ದಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿದಾವಣಗೆರೆಯಲ್ಲಿ ನಡೆದ ಗೋಲಿಬಾರ್‌ನಲ್ಲಿವೀರ ಮರಣವನ್ನಪ್ಪಿದ ಆರು ಜನ ಹುತಾತ್ಮರನೆನಪು ಇನ್ನೂ ಹಚ್ಚ ಹಸಿರಾಗಿದೆ.

Advertisement

“ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ಎಂದು ಗಾಂಧೀಜಿಯವರು ಕರೆಗೆ ಓಗೊಟ್ಟದಾವಣಗೆರೆಯ ಸ್ವಾತಂತ್ರÂ ಹೋರಾಟಗಾರರುದಾವಣಗೆರೆ ರೈಲ್ವೆ ನಿಲ್ದಾಣದಮುಂಭಾಗದಲ್ಲಿರುವ ತಾಲೂಕು ಕಚೇರಿಮೇಲೆ ಧ್ವಜ ಹಾರಿಸಲು ಮುಂದಾಗಿದ್ದರು.

ಸ್ಥಳದಲ್ಲಿದ್ದ ಬ್ರಿಟಿಷ್‌ ಅಧಿಕಾರಿಗಳು,ಪೊಲೀಸರು ಧ್ವಜಾರೋಹಣಕ್ಕೆ ಅವಕಾಶನೀಡಲಿಲ್ಲ. ಹೋರಾಟ ಕ್ಷಣದಿಂದ ಕ್ಷಣಕ್ಕೆತೀವ್ರವಾಗತೊಡಗಿತು. ಹೋರಾಟಗಾರರನ್ನುತಡೆಯುವುದೇ ದುಸ್ತರವಾಗತೊಡಗಿತು.ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಹರಿಹರದಲ್ಲಿ ಬೀಡು ಬಿಟ್ಟಿದ್ದ ಆಂಗ್ಲರಪೊಲೀಸರ ತುಕಡಿ ದಾವಣಗೆರೆಗೆ ದೌಡಾಯಿಸಿಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next