ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದುದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅಬ್ಬರದ ಮಳೆಗೆ ಈವರೆಗೆ ಒಟ್ಟು 384 ಸರ್ಕಾರಿ ಕಟ್ಟಡಗಳು ಹಾನಿಗೆ ಒಳಗಾಗಿವೆ.ಕಳೆದ ಕೆಲವೇ ದಿನಗಳ ಹಿಂದೆ ಜಿಲ್ಲೆಯಲ್ಲಿಮಳೆಯ ಸುಳಿವೇ ಇರಲಿಲ್ಲ. ಕೆಲ ದಿನಗಳಿಂದಸುರಿಯುತ್ತಿರುವ ಮಳೆಗೆ ಕಟ್ಟಡಗಳು, ಕೆರೆ, ರಸ್ತೆಗಳುಎಲ್ಲವೂ ಹಾನಿಗೀಡಾಗಿವೆ.
ಜಿಲ್ಲೆಯ ಎಲ್ಲ ತಾಲೂಕುಕೇಂದ್ರಗಳಲ್ಲಿರುವ ಮಿನಿ ವಿಧಾನಸೌಧಗಳಲ್ಲಿಬಹುತೇಕ ಸರ್ಕಾರಿ ಇಲಾಖಾಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.ಸಮಾಜಕಲ್ಯಾಣ, ಹಿಂದುಳಿದವರ್ಗಗಳ ಇಲಾಖೆಗಳಡಿಯಲ್ಲಿನಡೆಯುವ ಹಾಸ್ಟೆಲ್‌ಗಳಪೈಕಿ ಬಹುತೇಕ ಸ್ವಂತ ಕಟ್ಟಡಹೊಂದಿವೆ. ಹಾಗಾಗಿ ಮಳೆಯಿಂದತೊಂದರೆಗೀಡಾದ ಪ್ರಕರಣ ಅಷ್ಟಾಗಿಕಂಡುಬಂದಿಲ್ಲ.
ಭಾರೀ ಮಳೆಯಿಂದಾಗಿ ದಾವಣಗೆರೆತಾಲೂಕಿನಲ್ಲಿ 95, ಹರಿಹರದಲ್ಲಿ 40,ಹೊನ್ನಾಳಿಯಲ್ಲಿ 89, ಚನ್ನಗಿರಿಯಲ್ಲಿ72 ಹಾಗೂ ಜಗಳೂರಿನಲ್ಲಿ50 ಸೇರಿದಂತೆ 346 ಶಾಲೆ,ಹರಿಹರದಲ್ಲಿ 5, ಜಗಳೂರಿನಲ್ಲಿಮೂರು ಪ್ರಾಥಮಿಕ ಆರೋಗ್ಯ ಕೇಂದ್ರ,ದಾವಣಗೆರೆಯಲ್ಲಿ 7, ಚನ್ನಗಿರಿಯಲ್ಲಿ 4,ಜಗಳೂರಿನಲ್ಲಿ 19 ಇತರೆ ಸರ್ಕಾರಿ ಕಟ್ಟಡಗಳುಹಾನಿಗೊಳಗಾಗಿವೆ. ಒಟ್ಟಾರೆ 384 ಸರ್ಕಾರಿಕಟ್ಟಡಗಳು ಹಾನಿಗೊಳಗಾಗಿವೆ.
ರಾ. ರವಿಬಾಬು