Advertisement

ಪೀಠದ ಮೇಲೆ ಕುಳಿತವರು ಉರಿಯದಿರಲಿ

08:53 PM Jul 15, 2022 | Team Udayavani |

ದಾವಣಗೆರೆ: ಚಿತ್ರದುರ್ಗದ ಬೃಹನ್ಮಠ ಎಲ್ಲಪೀಠಗಳು ಅಗ್ನಿಪೀಠಗಳು. ಉರಿ ಪೀಠಗಳು. ಅದರಮೇಲೆ ಕುಳಿತುಕೊಳ್ಳುವುದು ಅಷ್ಟೊಂದು ಸುಲಭಅಲ್ಲ. ಆದರೂ, ಪೀಠದ ಮೇಲೆ ಕುಳಿತವರುಉರಿಯಬಾರದು ಎಂದು ಚಿತ್ರದುರ್ಗಮುರುಘಾಮಠದ ಡಾ| ಶ್ರೀ ಶಿವಮೂರ್ತಿಮುರುಘಾ ಶರಣರು ಮಾರ್ಮಿಕವಾಗಿ ಹೇಳಿದರು.

Advertisement

ಶಿವಯೋಗ ಆಶ್ರಮದಲ್ಲಿ ಶರಣ ಸಂಸ್ಕೃತಿಉತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ ನಡೆದಸಹಜ ಶಿವಯೋಗ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ವೇದನೆಮತ್ತು ಯಾತನೆಯ ಜೊತೆಜೊತೆಯಲ್ಲೇಜೀವನ ಸಾಗಿಸಬೇಕು. ವೇದನೆ ಇಲ್ಲದ ಕ್ಷೇತ್ರವೂಯಾವುದೂ ಇಲ್ಲ. ಸ್ವಾಮೀಜಿ, ರಾಜಕಾರಣಿ, ಸಾಹಿತಿಎಲ್ಲರಲ್ಲೂ ವೇದನೆ ಇದೆ.

ಸ್ವಾಮೀಜಿ ಅವರು ಸಹವೇದನೆಯಿಂದ ಹೊರತಾಗಿಲ್ಲ. ಬೇರೆಯವರುವೇದನೆ ಹೇಳಿಕೊಳ್ಳುವರು. ಆದರೆ, ಸ್ವಾಮೀಜಿಗಳುಹೇಳಿ ಕೊಳ್ಳದೆ ಅವರೇ ಅನುಭವಿಸುತ್ತಾರೆ ಎಂದುತಿಳಿಸಿದರು.ಎಲ್ಲರ ವೇದನೆಗೆ ಸಂವೇದನೆ ಮಾಡಬೇಕು.ಸಂವೇದನೆಯೇ ನಮ್ಮ ಜೀವನದ ಮುಖ್ಯಸಾರ. ವೇದನೆಗೆ ಸಂವೇದನೆಯ ಮೂಲಕ ಕೆಲಸಮಾಡುತ್ತಿದ್ದೇವೆ.

ನಮಗೆ ಶ್ರೀಮಂತ ಬದುಕಿಗಿಂತಲೂಸಂವೇದನೆಯ ಜೀವನ ನಡೆಸುವುದು ಬಹಳ ಇಷ್ಟದಕೆಲಸ ಎಂದು ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಕೆರಳಿಸುವ ಕಾರ್ಯಹೆಚ್ಚಾಗುತ್ತಿದ್ದು. ಇದು ನಿಂತು ಅರಳಿಸುವ ಕಾರ್ಯನಡೆಯಬೇಕು. ಸಹಜ ಶಿವಯೋಗದಿಂದಹೃದಯವನ್ನು ಅರಳಿಸಲು ಸಾಧ್ಯ. ಕೆರಳುವಿಕೆಯಿಂದಸಾಮಾಜಿಕ ಕ್ಷೋಭೆ, ಅಶಾಂತಿ ಉಂಟಾಗುತ್ತದೆ.ಮನುಷ್ಯನ ಜೀವನದಲ್ಲಿ, ಹೃದಯದಲ್ಲಿ ಬಸವಾದಿಶರಣರ ಒಳ್ಳೆಯ ತತ್ವಾದರ್ಶ ಅಳವಡಿಸಿಕೊಳ್ಳಬೇಕು.ಶಿವಯೋಗದ ಮೂಲಕ ಒಳಗಣ್ಣು ತೆರೆದುಕೊಳ್ಳುತ್ತದೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next