Advertisement

15ರಂದು “ಪದ್ಮಾವತಿ’ಚಿತ್ರ ರಾಜ್ಯಾದ್ಯಂತ ತೆರೆಗೆ

06:02 PM Jul 06, 2022 | Team Udayavani |

ದಾವಣಗೆರೆ: ವಿವಾಹಪೂರ್ವಜನಿಸಿದಂತಹ ಮಗುವನ್ನು ಸಮಾಜನೋಡುವ ದೃಷ್ಟಿ, ಹೆಣ್ಣು ಅನುಭವಿಸುವ ಯಾತನೆ ಮುಂತಾದ ಸಾಮಾಜಿಕಸಂದೇಶ ಸಾರುವ “ಪದ್ಮಾವತಿ’ಚಲನಚಿತ್ರ ಜು. 15ರಂದು ರಾಜ್ಯದ150- 200 ಚಿತ್ರಮಂದಿರಗಳಲ್ಲಿ ತೆರೆಗೆಬರಲಿದೆ ಎಂದು ಚಿತ್ರದ ನಿರ್ದೇಶಕಮಿಥುನ್‌ ಚಂದ್ರಶೇಖರ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೆಲವರುಮಾಡುವಂತಹ ತಪ್ಪಿನಿಂದ ಕೆಲ ಮಕ್ಕಳುವಿವಾಹಪೂರ್ವವೇ ಜನಿಸುತ್ತವೆ.ಅದರಲ್ಲಿ ಮಕ್ಕಳದ್ದು ಕಿಂಚಿತ್ತೂತಪ್ಪಿರುವುದಿಲ್ಲ. ಆದರೆ ಸಮಾಜ ಅಂತಹಮಗುವನ್ನು ಸ್ವೀಕರಿಸುವುದೇ ಇಲ್ಲ.ಇಂತಹ ನೈಜತೆಯ ಕಥೆ ಆಧಾರದಲ್ಲಿ”ಪದ್ಮಾವತಿ’ ನಿರ್ಮಾಣ ಮಾಡಲಾಗಿದೆಎಂದರು.

“ಪದ್ಮಾವತಿ’ ಚಿತ್ರದ ನಾಯಕಿ ಮುಗೆœ.ಬಾಲ್ಯದಲ್ಲಿ ಪ್ರೀತಿ ಮಾಡಿದ್ದರಿಂದ ಅದರಪರಿಣಾಮ ಎದುರಿಸಬೇಕಾಗುತ್ತದೆ.ಪ್ರಬುದ್ಧತೆಗೆ ಬಂದಾಗ ತನ್ನ ಮಗುವನ್ನುಹುಡುಕುತ್ತಾ ಸಾಗುವ ಕಥೆ ಆಧರಿಸಿ”ಪದ್ಮಾವತಿ’ ಚಿತ್ರವನ್ನು ಮಾಡಲಾಗಿದೆ.

ಕನ್ನಡಿಗರು ನಮ್ಮ ಹೊಸ ತಂಡದ ವಿಭಿನ್ನಪ್ರಯತ್ನದ ಕಥೆಯ ಚಿತ್ರ ನೋಡುವಮೂಲಕ ಆಶೀರ್ವದಿಸಬೇಕುಮತ್ತು ಗೆಲ್ಲಿಸಬೇಕು ಎಂದು ಮನವಿಮಾಡಿದರು.ಚಿತ್ರದ ನಾಯಕ ನಟ ವಿಕ್ರಮ್‌ಆರ್ಯ ಮಾತನಾಡಿ, “ತಲೆ ಬಾಚೊRಳ್ಳಿಪೌಡರ್‌ ಹಾಕ್ಕೊಳಿ’ ಎಂಬ ಹಾಸ್ಯಪ್ರಧಾನ ಚಿತ್ರದ ನಂತರ ನಾಲ್ಕುವರ್ಷದ ಅಂತರದಲ್ಲಿ ಒಂದುಗಂಭೀರವಾದ, ಮಹಿಳಾ ಪ್ರಧಾನಕಥಾ ಹಂದಿರದ “ಪದ್ಮಾವತಿ’ ಚಿತ್ರದಲ್ಲಿಅಭಿನಯಿಸಿದ್ದೇನೆ.

ಸಾಮಾಜಿಕಸಂದೇಶದ ಚಿತ್ರ ನಿರ್ಮಿಸಲಾಗಿದೆ.51 ದಿನಗಳ ಕಾಲ ಸಕಲೇಶಪುರ,ಬೆಂಗಳೂರು ಮುಂತಾದೆಡೆ ಚಿತ್ರೀಕರಣಮಾಡಲಾಗಿದೆ. ಶರಣ್‌ಕುಮಾರ್‌ಗಜೇಂದ್ರ ಅದ್ಭುತ ಎನ್ನುವಂತೆ ಎಂಟುಹಾಡುಗಳನ್ನು ನೀಡಿದ್ದಾರೆ ಎಂದುತಿಳಿಸಿದರು.ಚಿತ್ರದ ನಾಯಕಿ ಮೇಘನಾಮಾತನಾಡಿ, “ಪದ್ಮಾವತಿ’ ನನ್ನಅಭಿನಯದ ನಾಲ್ಕನೇ ಚಿತ್ರ. ತುಂಬಾಸವಾಲಿನಿಂದ ಕೂಡಿರುವ ಪಾತ್ರವನ್ನುಚೆನ್ನಾಗಿ ನಿರ್ವಹಿಸಿದ್ದೇನೆ. ಇನ್ನೂಚೆನ್ನಾಗಿ ನಟಿಸಬಹುದಿತ್ತು ಅನ್ನಿಸುತ್ತದೆಎಂದರು.

Advertisement

ಸಾಹಿತಿ ಶರಣ್‌ಕುಮಾರ್‌ ಗಜೇಂದ್ರಮಾತನಾಡಿ, “ಪದ್ಮಾವತಿ’ ಚಿತ್ರದಲ್ಲಿಎಲ್ಲ ಹಾಡು ಬರೆಯುವ ಅವಕಾಶದೊರೆತಿದೆ. ಚಿತ್ರದ ಹಾಡುಗಳನ್ನುಕೇಳಿದ ಪ್ರೇಮ್‌ ಅವರು “ಏಕ್‌ ಲವ್‌ಯಾ’ ಚಿತ್ರದಲ್ಲಿ ಅನಿತಾ..ಅನಿತಾ..ಹಾಡು ಬರೆಯುವ ಅವಕಾಶನೀಡಿದರು ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next