Advertisement

ಮೋಟಾರು ಕಾಯ್ದೆ ಉಲ್ಲಂಘನೆ: 25 ಸಾವಿರ ಕೇಸ್‌

05:55 PM Jul 06, 2022 | Team Udayavani |

ದಾವಣಗೆರೆ: ದಾವಣಗೆರೆಯ ಉತ್ತರ ಮತ್ತು ದಕ್ಷಿಣಸಂಚಾರಿ ಪೊಲೀಸರು ಕಳೆದ ಆರು ತಿಂಗಳಲ್ಲಿಮೋಟಾರು ಕಾಯ್ದೆ ಉಲ್ಲಂಘನೆಗೆ ಸಂಬಂಧಿ ಸಿದಂತೆ25,088 ಪ್ರಕರಣ ದಾಖಲಿಸಿಕೊಂಡು 1.3 ಕೋಟಿರೂ. ದಂಡ ವಸೂಲು ಮಾಡಿದ್ದಾರೆ ಎಂದು ಜಿಲ್ಲಾರಕ್ಷಣಾಧಿ ಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 1ರಿಂದ ಜೂ. 30 ರವರೆಗೆ ಈ ಪ್ರಕರಣದಾಖಲಿಸಿದ್ದಾರೆ.

Advertisement

ಸಂಚಾರಿಯೊಟ್ಟಿಗೆ ಇತರೆ ಠಾಣಾವ್ಯಾಪ್ತಿಯಲ್ಲಿ ಕೇಸ್‌ ದಾಖಲಿಸಿದ್ದಾರೆ. ತ್ರಿಬಲ್‌ ರೈಡಿಂಗ್‌ನ 83 ಪ್ರಕರಣ ದಾಖಲಿಸಿ 2,59,200 ರೂಪಾಯಿ,52 ಡಿಫೆಕ್ಟಿವ್‌ ಸೈಲೆನ್ಸರ್‌ ಪ್ರಕರಣಗಳಲ್ಲಿ 26 ಸಾವಿರದಂಡ ವಸೂಲಿ ಮಾಡಲಾಗಿದೆ. 68 ಪ್ರಕರಣಗಳಲ್ಲಿನ್ಯಾಯಾಲಯದಿಂದ ಚಾಲನಾ ಪರವಾನಗಿ ಪತ್ರಅಮಾನತು ಮಾಡಲಾಗಿದೆ. ಮಾರಣಾಂತಿಕ ರಸ್ತೆಅಪಘಾತಗಳಿಗೆ ಸಂಬಂಧಿಸಿದಂತೆ 8 ಚಾಲಕರಚಾಲನಾ ಪರವಾನಗಿ ಅಮಾನತು ಮಾಡಲಾಗಿದೆಎಂದರು.

ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆದಂಡ ವಸೂಲಿ ಮಾಡುವುದು ಸಾಮಾನ್ಯ. ಚಾಲನಾಪರವಾನಗಿ (ಡಿಎಲ್‌) ಅಮಾನತು ಮಾಡುವುದುವಿಶೇಷ. ಇನ್ನು ಮುಂದೆ ತ್ರಿಬಲ್‌ ರೈಡಿಂಗ್‌,ಕರ್ಕಶ ಹಾರ್ನ್ ಬಳಕೆ, ಅತಿಯಾದ ವೇಗ ಇತರೆನಿಯಮಗಳ ಉಲ್ಲಂಘನೆ ಪ್ರಕರಣಗಳ ಬಗ್ಗೆ ತೀವ್ರಗಮನ ಹರಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next