Advertisement

ಸಂತೆಬೆನ್ನೂರು ಪುಷ್ಕರಣಿ ಸ್ಪಚ್ಚತಾ ಕಾರ್ಯ

05:50 PM Jun 18, 2022 | Team Udayavani |

ದಾವಣಗೆರೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌, ಆಯುಷ್‌ ಒಳಗೊಂಡಂತೆಇತರೆ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಜೂ.21ರಂದುನಡೆಯಲಿರುವ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ತಾಣಸಂತೆಬೆನ್ನೂರು ಗ್ರಾಮದ ಐತಿಹಾಸಿಕ ಪುಷ್ಕರಣಿಯನ್ನು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ವತ್ಛಗೊಳಿಸಿದರು.

Advertisement

ಕ್ಷೇತ್ರದರ್ಶನ ಕಾರ್ಯಕ್ರಮದಡಿಶಿಕ್ಷಣ ಇಲಾಖೆಯ ಕಲಿಕಾ ಚೇತರಿಕಾ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕಪಬ್ಲಿಕ್‌ ಸ್ಕೂಲ್‌ ಶಾಲೆಯ ಕನ್ನಡ ಭಾಷಾ ಶಿಕ್ಷಕ ಸೈಯದ್‌ ಫೈಜುಲ್ಲಾ ನೇತೃತ್ವದಲ್ಲಿಐತಿಹಾಸಿಕ ಪುಷ್ಕರಣಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಪುಷ್ಕರಣಿಯ ಮೆಟ್ಟಿಲುಗಳಲ್ಲಿಬೆಳೆದಿದ್ದ ಹುಲ್ಲು ಕಿತ್ತು, ಕಸ ತೆಗೆದು ಸ್ವತ್ಛಗೊಳಿಸುವ ಮೂಲಕ ಅಂತಾರಾಷ್ಟ್ರೀಯಯೋಗ ದಿನಕ್ಕೆ ತಮ್ಮ ಕಾಣಿಕೆ ಸಲ್ಲಿಸಿದರು.

ಇತಿಹಾಸ, ಪ್ರಾಚ್ಯ ಕಟ್ಟಡಗಳ ಮಾಹಿತಿನೀಡಿ ವಾರದ ಕನ್ನಡ ಭಾಷ ಬಳಗ ಕಾರ್ಯಕ್ರಮ ಮಾಡಿದರು. ತೋಟಗಾರಿಕಾ ಶಿಕ್ಷಕರತ್ನಾಕರ ಅವರು ಅಲ್ಲಿನ ಗಿಡ ಮರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next