Advertisement

ಪುಷ್ಕರಣಿಯಲ್ಲಿ ಜಲಯೋಗ ಪ್ರದರ್ಶನ!

12:57 PM Jun 16, 2022 | Team Udayavani |

ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಐತಿಹಾಸಿಕ ಸುಂದರ ಪುಷ್ಕರಣಿ ಆವರಣದಲ್ಲಿಜೂ.21ರಂದು ನಡೆಯಲಿರುವ ಎಂಟನೇಅಂತಾರಾಷ್ಟ್ರೀಯ ಯೋಗ ದಿನವನ್ನುಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜಲ ಯೋಗಪ್ರದರ್ಶನ ಆಯೋಜಿಸಲಾಗಿದೆ.ಸ್ವಾತಂತ್ರÂ ಅಮೃತ ಮಹೋತ್ಸವದ ಅಂಗವಾಗಿ75 ಐತಿಹಾಸಿಕ ಸ್ಥಳಗಳಲ್ಲಿ ಈ ಬಾರಿಯಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ.

Advertisement

ವಿಶ್ವವಿಖ್ಯಾತ ಮೈಸೂರು, ಹಂಪಿ, ವಿಜಯಪುರಇತರೆ ಭಾಗದಲ್ಲಿ ಯೋಗ ದಿನ ಹಮ್ಮಿಕೊಳ್ಳಲಾಗಿದೆ.ಆದರೆ ಎಲ್ಲಿಯೂ ಪುಷ್ಕರಣಿ ಆವರಣದಲ್ಲಿನಡೆಯುತ್ತಿಲ್ಲ. ಸಂತೇಬೆನ್ನೂರಿನ ಪ್ರಸಿದ್ಧ ಪುಷ್ಕರಣಿಆವರಣದಲ್ಲಿ ನಡೆಸಲಾಗುತ್ತಿರುವ ಯೋಗ ದಿನವನ್ನುಸ್ಮರಣೀಯವಾಗಿಸುವ ಉದ್ದೇಶದಿಂದ ಜಲಯೋಗಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಯೋಗದಲ್ಲಿ ಜಲಯೋಗವೂ ಒಂದು.ದಾವಣಗೆರೆ ಇತರೆ ಭಾಗದಲ್ಲಿ ಜಲಯೋಗಅಷ್ಟೊಂದು ಪ್ರಚಲಿತದಲ್ಲಿ ಇಲ್ಲ. ಇತರೆ ಯೋಗದಂತೆದೇಹಾರೋಗ್ಯದ ಮೇಲೆ ಉತ್ತಮ ಪರಿಣಾಮಬೀರುವ ಜಲಯೋಗದ ಬಗ್ಗೆ ತಿಳಿಸುವ ಜತೆಗೆಯೋಗಾಸಕ್ತರನ್ನು ಹೆಚ್ಚಿನ ಪ್ರಮಾಣದಲ್ಲಿಜಲಯೋಗದತ್ತ ಸೆಳೆಯುವ ಹಿನ್ನೆಲೆಯಲ್ಲಿಆಯೋಜಕರು ಜಲಯೋಗ ಪ್ರದರ್ಶನಕ್ಕೆಮುಂದಾಗಿದ್ದಾರೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next