ದಾವಣಗೆರೆ: ಶಿಕ್ಷಣ ಎಂಬುದು ಕೇವಲವೃತ್ತಿಯಲ್ಲ, ಹಲವು ಕ್ಷೇತ್ರಗಳಲ್ಲಿಅತ್ಯದ್ಭುತ ಸೃಷ್ಟಿಸಿರುವ ಒಂದುಸ್ಫೂರ್ತಿದಾಯಕ ಚಿಲುಮೆ ಎಂದುಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಬಿ.ಸಿ. ನಾಗೇಶ್ ಬಣ್ಣಿಸಿದರು.ನಗರದ ಶ್ರೀ ಸೋಮೇಶ್ವರವಿದ್ಯಾಲಯದಲ್ಲಿ ನಡೆದ 2022ನೇಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದಸ್ಥಳೀಯ ಪ್ರತಿಭೆ ಅವಿನಾಶ್ ವಿ.ರಾವ್ ಅಭಿನಂದನಾ ಸಮಾರಂಭದಲ್ಲಿಅವರು ಮಾತನಾಡಿದರು.
ವಿದ್ಯಾರ್ಥಿಸಮೂಹ ಸಮುದ್ರವನ್ನೇ ದಾಟಿದಜಾಂಬವಂತನನ್ನು ಜೀವನದಲ್ಲಿ ಪ್ರೇರಣೆಮತ್ತು ಸ್ಫೂರ್ತಿದಾಯಕವನ್ನಾಗಿಇಟ್ಟುಕೊಂಡು ಮುನ್ನಡೆಯಬೇಕುಎಂದರು.ಅವಿನಾಶ್ ವಿ. ರಾವ್ ಮಾತನಾಡಿ,ಸತತ ಪರಿಶ್ರಮ, ಸಾಧನೆಯ ಮೂಲಕಜೀವನದ ಗುರಿ ಸಾಧಿಸ ಬೇಕುಎಂದು ತಿಳಿಸಿದರು.
ಮಾಯಕೊಂಡಶಾಸಕ ಪ್ರೊ| ಎನ್. ಲಿಂಗಣ್ಣ,ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಸರ್.ಎಂ.ವಿ. ಕಾಲೇಜುಕಾರ್ಯದರ್ಶಿ ಶ್ರೀಧರ್, ಸೋಮೇಶ್ವರಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಕೆ.ಎಂ. ಸುರೇಶ್, ಪ್ರಾಚಾರ್ಯೆಪ್ರಭಾವತಿ, ನಿರ್ದೇಶಕ ಪತ್ರೇಶ್,ಆಡಳಿತಾಧಿಕಾರಿ ಹರೀಶ್‌ಬಾಬುಇದ್ದರು. ಈ ಬಾರಿಯ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ ಶಾಲೆಗೆ ಮೊದಲಿಗರಾಗಿಅಂಕ ಪಡೆದ ವಿದ್ಯಾರ್ಥಿಗಳನ್ನುಅಭಿನಂದಿಸಲಾಯಿತು.