Advertisement

ಸಂತೆಬೆನ್ನೂರಲ್ಲಿ ಜಿಲ್ಲಾ ಮಟ್ಟದ ಯೋಗ ದಿನಾಚರಣೆ

03:43 PM Jun 08, 2022 | Team Udayavani |

ದಾವಣಗೆರೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸಂತೇ ಬೆನ್ನೂರಿನಪುಷ್ಕರಣಿಯ ಆವರಣದಲ್ಲಿ ಆಯೋಜಿ ಸಲಾಗಿದ್ದು ಜಿಲ್ಲೆಯಎಲ್ಲ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿಯಶಸ್ವಿಗೊಳಿಸಬೇಕು ಎಂದು ಡಿಸಿ ಮಹಾಂತೇಶ ಬೀಳಗಿಹೇಳಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನಡೆದ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಆಯೋಜನೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಆಯುಷ್‌ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿಜೂ. 21ರಂದು ಹರಿಹರ ಪಟ್ಟಣದ ಹರಿಹರೇಶ್ವರದೇವಸ್ಥಾನದ ಆವರಣ ಹಾಗೂ ಹೊನ್ನಾಳಿಯ ಹಿರೇಕಲ್ಮಠದಆವರಣದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನುಆಯೋಜಿಸಲಾಗುವುದು ಎಂದರು.ಈ ಬಾರಿಯ ಘೋಷಣೆ “ ಮಾನವೀಯತೆಗಾಗಿಯೋಗ “ ಧ್ಯೇಯವಾಕ್ಯದೊಂದಿಗೆ ಯೋಗ ದಿನಆಚರಿಸಲಾಗುತ್ತಿದೆ.

ಜಿಲ್ಲೆಯ ಸ್ವಯಂಸೇವಕರು,ಶಾಲಾ-ಕಾಲೇಜು ವಿದ್ಯಾರ್ಥಿಗಳು ಒಳಗೊಂಡಂತೆ ಜಿಲ್ಲೆಯಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದಅಧಿಕಾರಿ, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿಭಾಗವಹಿಸಿ ಯಶಸ್ವಿಗೆ ಸಹಕರಿಸಬೇಕು. ಜಿಲ್ಲಾ ಯೋಗಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್‌ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ನಮ್ಮ ಒಕ್ಕೂಟದ ವತಿಯಿಂದಎಲ್ಲ ರೀತಿಯ ಸಹಕಾರ ನೀಡಲಾಗುವುದು ಹಾಗೂಶನಿವಾರ ವಾಕಾಥಾನ್‌ ಆಯೋಜಿಸಲಾಗಿದ್ದು ಎಲ್ಲರೂಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಪಂ ಸಿಇಒ ಡಾ| ಎ.ಚನ್ನಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಮಗೊಂಡಬಸರಗಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಂಕರಗೌಡ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಶಪ್ಪ,ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪಾಲಾಕ್ಷಿ,ಡಾ| ಸಿದ್ದೇಶ್ವರ ಸೇರಿದಂತೆ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next