ದಾವಣಗೆರೆ: ಶ್ರೀಗುರು ರೇಣುಕರ ಯುಗಮಾನೋತ್ಸವ,ಬಸವ ಜಯಂತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನುಮೇ 15ರಂದು ನಗರದ ರೋಟರಿ ಬಾಲ ಭವನದಲ್ಲಿಆಯೋಜಿಸಲಾಗಿದೆ ಎಂದು ವಿಶ್ವ ವೀರಶೈವ ಲಿಂಗಾಯತಏಕೀಕರಣ ಪರಿಷತ್ ಅಧ್ಯಕ್ಷ ಡಾ| ರೇವಣ್ಣ ಬಳ್ಳಾರಿತಿಳಿಸಿದರು.ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.
ವಿಶ್ವ ವೀರಶೈವ ಲಿಂಗಾಯತಏಕೀಕರಣ ಪರಿಷತ್, ವಿಶ್ವ ಕಲ್ಯಾಣ ಪರಿಸರ ಗ್ರಾಹಕಸಾಂಸ್ಕೃತಿಕ ಘಟಕ ವತಿಯಿಂದ ಕಾರ್ಯಕ್ರಮಸಂಘಟಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಶ್ರೀಗುರುರೇಣುಕರ ಯುಗಮಾನೋತ್ಸವ, ಬಸವ ಜಯಂತಿ,ಡಾ| ಅಂಬೇಡ್ಕರ್ ಜಯಂತಿ, ಕಾಯಯೋಗಿ ಬಸವಶ್ರೀ,ಅಕ್ಕಮಹಾದೇವಿ, ಶರಣದಂಪತಿ, ಆಧುನಿಕ ಸಮಾಜಕೃಷಿರತ್ನ, ಸಾಹಿತ್ಯ ಸಿರಿರತ್ನ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದವಾಚನ ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣೆಸಮಾರಂಭ ಆಯೋಜಿಸಲಾಗಿದೆ ಎಂದರು.
ಧೂಡಾ ಅಧ್ಯಕ್ಷ ಕೆ.ಎಂ.ಸುರೇಶ್ ಕಾರ್ಯಕ್ರಮಉದ್ಘಾಟಿಸುವರು. ಚನ್ನಗಿರಿ ಕೇದಾರ ಹಿರೇಮಠದಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ಪಾಲಿಕೆಮೇಯರ್ ಜಯಮ್ಮ, ಮೈಸೂರಿನ ರಾಮಕುಮಾರ್,ಶ್ರೀಧರ್ ಪಾಟೀಲ್, ಇಂದುಧರ್ ನಿಶಾನಿಮs…ಭಾಗವಹಿಸುವರು. ಬಸವರಾಜ್ ಹನುಮಲಿ, ಬಕೇಶ್‌ನಾಗನೂರು, ಡಾ| ಎಸ್.ಎಚ್. ವಿನಯ್ ಕುಮಾರ್‌ಉಪನ್ಯಾಸ ನೀಡುವರು.
ಸಾಹಿತ್ಯ ಸಿರಿರತ್ನ ಪ್ರಶಸ್ತಿಯನ್ನು ಯು.ಎನ್.ಸಂಗನಾಳಮಠ, ಶರಣ ದಂಪತಿ ಪ್ರಶಸ್ತಿಯನ್ನುಬಿ.ಮಹಂತೇಶ್ ಕುಟುಂಬಕ್ಕೆ, ಆಧುನಿಕ ಸಮಾಜ ಕೃಷಿರತ್ನಪ್ರಶಸ್ತಿಯನ್ನು ಟಿ.ಆರ್. ಪಂಕಜಾ, ಅಕ್ಕಮಹಾದೇವಿಪ್ರಶಸ್ತಿಯನ್ನು ಮರವಂತೆಯ ಶಯದೇವಿಸುತೆ,
ಶಶಿರೇಖಾ, ಗಿರಿಜಮ್ಮ ರಾಮಚಂದ್ರಪ್ಪ ಅವರಿಗೆನೀಡಲಾಗುವುದು. ಕಾಯಕಯೋಗಿ ಪ್ರಶಸ್ತಿಯನ್ನು18 ಜನರಿಗೆ ನೀಡಲಾಗುತ್ತಿದ್ದು ಮುಖ್ಯವಾಗಿ ಸಿ.ಪಿ.ಹಿರೇಮಠ, ಎ.ಫಕೃದ್ದಿನ್, ಬಕ್ಕೇಶ್ ನಾಗನೂರು,ಓಂಕಾರಯ್ಯ ತವನಿಧಿ, ಹನುಮಂತಪ್ಪ ಕ್ಷೀರಸಾಗರಸೇರಿದಂತೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆನೀಡಲಾಗುವುದು.
ಇದೇ ವೇಳೆ ವಚನಕಾರರ ಕುರಿತುರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ ಎಂದರು.ಪ್ರಮುಖರಾದ ಎನ್.ಜೆ. ಶಿವಕುಮಾರ್, ಎಸ್.ಎಸ್. ವಿನಯ್ ಕುಮಾರ್, ಇಂದುಧರ್ ನಿಶಾನಿಮಠ,ಎಚ್.ವಿ. ಪ್ರಭುಲಿಂಗಪ್ಪ, ಟಿ.ಆರ್. ಪಂಕಜಾ ಇತರರುಸುದ್ದಿಗೋಷ್ಠಿಯಲ್ಲಿದ್ದರು.