Advertisement

ಸರಳ ವಿವಾಹ ಸಮಾಜಕ್ಕೆ ಮಾದರಿ

07:53 PM Apr 22, 2022 | Team Udayavani |

ಹೊನ್ನಾಳಿ: ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆ ಆದರೆ ಕುಟುಂಬಕ್ಕೆಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ ಇಂಥ ಸರಳ ಮದುವೆಗಳು ಸಮಾಜಕ್ಕೆಮಾದರಿಯಾಗುತ್ತವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿದೇವರುಗಳ ಶರಭಿ ಗುಗ್ಗಳ, ಕೆಂಡದಾರ್ಚನೆ ಮತ್ತು ರಥೋತ್ಸವದ ಅಂಗವಾಗಿಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರುಮಾತನಾಡಿದರು. ಅದ್ಧೂರಿ ಮದುವೆಗಳಲ್ಲಿ ನೆಮ್ಮದಿ ಕಡಿಮೆ ಹಾಗೂ ಖರ್ಚು ಹೆಚ್ಚು.ಆಡಂಬರದ ಮದುವೆಗಳಲ್ಲಿ ನೆಮ್ಮದಿ ಹಾಗೂ ಸಂತೋಷವನ್ನು ಕಾಣಲಿಕ್ಕೆ ಸಾಧ್ಯವಿಲ್ಲ.ಕಂಡರೂ ಅದು ಕ್ಷಣಿಕ. ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆಕಟುಂಬಕ್ಕೆ ಆರ್ಥಿಕ ಹೊರೆ ಕಡಿಮೆಯಾಗುವುದಲ್ಲದೆ ದೇಶದ ಆರ್ಥಿಕಾಭಿವೃದ್ಧಿಗೆ ಸಹಾಯಮಾಡಿದಂತಾಗುತ್ತದೆ ಎಂದರು.

ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ, ಹೊಟ್ಯಾಪುರ ಉಜ್ಜಯನಿ ಶಾಖಾ ಹಿರೇಮಠದ ಶ್ರೀಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಜಿಪಂ ಮಾಜಿ ಸದಸ್ಯ ಜೀವೇಶಪ್ಪ, ತೋಟಪ್ಪ ಮಾತನಾಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ತಿಮ್ಮಮ್ಮ, ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರಪ್ಪ,ಹೊನ್ನಾಳಿ ಸಿಬಿಐ ಟಿ.ವಿ. ದೇವರಾಜ್‌, ನಿವೃತ್ತ ಉಪನ್ಯಾಸಕ ಗಂಜಿನಹಳ್ಳಿ ಬಸವರಾಜಪ್ಪ,ಕುಮಾರ್‌, ಸಮಿತಿಯ ಪದಾ ಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು,ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀ ವೀರಭದ್ರೇಶ್ವರ ಗಾನಕಲಾಸಂಘದ ಕಲಾವಿದರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next