Advertisement

22ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ

08:06 PM Apr 20, 2022 | Team Udayavani |

ದಾವಣಗೆರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಏ. 22ರಿಂದಮೇ 18ರವರೆಗೆ ಜಿಲ್ಲೆಯ 31ಪರೀûಾ ಕೇಂದ್ರಗಳಲ್ಲಿ ನಡೆಯಲಿದೆ.ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀûಾದಿನಗಳಂದು ಪರೀûಾ ಕೇಂದ್ರಗಳ ಸುತ್ತಮುತ್ತ 200 ಮೀಟರ್‌ಪರಿಧಿ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

Advertisement

ಆದೇಶದನ್ವಯ ಪರೀûಾ ದಿನಗಳಂದು ಪರೀûಾ ಕೇಂದ್ರಗಳಸುತ್ತಮುತ್ತ ಇರುವ ಜೆರಾಕ್ಸ್‌, ಸೈಬರ್‌ ಕೆಫೆ ಮತ್ತು ಕಂಪ್ಯೂಟರ್‌ಅಂಗಡಿಗಳನ್ನು ಪರೀûಾ ಅವಧಿಯಲ್ಲಿ ಮುಚ್ಚಬೇಕು. ಪರೀಕ್ಷೆಯಕರ್ತವ್ಯ ನಿರ್ವಹಿಸಲು ನೇಮಕಗೊಂಡ ಅಧಿಕಾರಿಗಳು ಮತ್ತುಸಿಬ್ಬಂದಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲ. ಪರೀûಾರ್ಥಿಗಳುಪರೀûಾ ಕೇಂದ್ರಗಳಿಗೆ ಬಿಡಲು ಬರುವ ಪೋಷಕರು ಯಾವುದೆಕಾರಣಕ್ಕೂ ಪರೀûಾ ಕೇಂದ್ರದ ಬಳಿ ಗುಂಪುಗೂಡುವುದು,ನಿಲ್ಲುವುದು ಮತ್ತು ವಾಹನಗಳ ಪಾರ್ಕಿಂಗ್‌ ಮಾಡುವುದನ್ನುಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಎಲ್ಲ ಪರೀûಾ ಕೇಂದ್ರಗಳಿಗೆಸೂಕ್ತ ಪೊಲೀಸ್‌ ರಕ್ಷಣೆ ಒದಗಿಸಲು ಮತ್ತು ಪರೀûಾ ಕೇಂದ್ರಗಳಸುತ್ತ ಮುತ್ತಲಿರುವ ಜೆರಾಕ್ಸ್‌, ಸೈಬರ್‌ ಕೆಫೆ ಮತ್ತು ಕಂಪ್ಯೂಟರ್‌ಅಂಗಡಿಗಳನ್ನು ಮುಚ್ಚಿಸಲು ಮತ್ತು ಇತರೆ ಕ್ರಮಗಳನ್ನುಜಿಲ್ಲಾ ಪೊಲೀಸ್‌ ಅಧೀಕ್ಷಕರು ಕ್ರಮ ಕೈಗೊಳ್ಳಬೇಕು ಎಂದುಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next