ಹೊನ್ನಾಳಿ: ಸರ್ಕಾರವೇ ಜನರ ಮನೆ ಬಾಗಿಲಿಗೆಬಂದು ಜನರ ಕುಂದು ಕೊರತೆ ಆಲಿಸುವ ನಿಟ್ಟಿನಲ್ಲಿಅಕ್ಟೋಬರ್ 16 ರಂದು ಹೊನ್ನಾಳಿ ತಾಲೂಕಿನಕುಂದೂರು ಹಾಗೂ ನ್ಯಾಮತಿ ತಾಲೂಕಿನಸುರಹೊನ್ನೆ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಬೆಂಗಳೂರಿನ ಮುಖ್ಯಮಂತ್ರಿಗಳನಿವಾಸದಲ್ಲಿ ಬುಧವಾರ ಸಿಎಂ ಬಸವರಾಜಬೊಮ್ಮಾಯಿಯವರನ್ನು ಭೇಟಿ ಮಾಡಿ ಕಂದಾಯಸಚಿವ ಆರ್. ಅಶೋಕ್ ಅವರ ಗ್ರಾಮ ವಾಸ್ತವ್ಯಕ್ಕೆಆಗಮಿಸುವಂತೆ ಮನವಿ ಮಾಡಿದ ನಂತರ ಅವರು ಮಾತನಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿತಾಲೂಕಿನ ಕುಂದೂರು, ಸುರಹೊನ್ನೆ ಗ್ರಾಮಗಳಲ್ಲಿಅ. 16 ರಂದು ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಇದನ್ನೂ ಓದಿ:ಬಯಲಾಗಿದೆ ಬಿಜೆಪಿ ಕುತಂತ್ರ: ಸಲೀಂ ಅಹ್ಮದ್ ಆರೋಪ
ಗ್ರಾಮವಾಸ್ತವ್ಯಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ. ಜನರ ಕುಂದುಕೊರತೆಗಳನ್ನು ತಿಳಿದುಕೊಳ್ಳುವನಿಟ್ಟಿನಲ್ಲಿ ಸರ್ಕಾರವೇ ಜನರ ಮನೆಬಾಗಿಲಿಗೆ ಬರುತ್ತಿದೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇಪರಿಹಾರ ಕೊಡಿಸುವ ದೃಷ್ಟಿಯಿಂದ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.