ದಾವಣಗೆರೆ: ಕಾರ್ಮಿಕರ ಐಕ್ಯತೆ, ಸೌಲಭ್ಯಕ್ಕಾಗಿಹುತಾತ್ಮರಾದವರ ಸ್ಮರಣೆಯೊಂದಿಗೆ ಹೊಸಗುರಿಯತ್ತಸಾಗೋಣ ಎಂದು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿಆವರಗೆರೆ ಚಂದ್ರು ಹೇಳಿದರು.ಶುಕ್ರವಾರ ಸಮೀಪದ ಆವರಗೆರೆಯಲ್ಲಿ ಶೇಖರಪ್ಪ ಸುರೇಶ್‌ರವರ 52ನೇ ಹುತಾತ್ಮರ ದಿನಾಚರಣೆ ಹಾಗೂ ಹಿರಿಯಕಾರ್ಮಿಕ ಮುಖಂಡ, ಮಾಜಿ ಶಾಸಕ ಪಂಪಾಪತಿಯವರ20 ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಅವರು,ಹಿರಿಯ ಕಾರ್ಮಿಕ ನಾಯಕರು, ಮುಂಡರು ಶೋಷಣೆರಹಿತ ಸಮಾಜದ ನಿರ್ಮಾಣಕ್ಕಾಗಿ ದುಡಿದಂತಹವರು.ಹುತಾತ್ಮ ಮುಖಂಡರ ಆದರ್ಶಗಳನ್ನು ಜೀವನದಲ್ಲಿ ಸದಾಅಳವಡಿಸಿಕೊಂಡು ಶೋಷಣೆ ರಹಿತ ಸಮಾಜಕ್ಕಾಗಿ ಹೋರಾಟಮುಂದುವರೆಸೋಣ ಎಂದು ತಿಳಿಸಿದರು.ಹಿರಿಯ ಕಾರ್ಮಿಕ ಮುಖಂಡ ಆನಂದ ರಾಜ್ ಅಧ್ಯಕ್ಷತೆವಹಿಸಿದ್ದರು.
ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರನಾಯರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆಎಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಜಬೀನಾಖಾನಂ, ಶೇಖರಪ್ಪ ನವರ ಪುತ್ರ, ನಿವೃತ್ತ ಉಪನ್ಯಾಸಕಬಸವರಾಜ್, ಪಂಪಾಪತಿಯವರ ಪುತ್ರ, ಉಪನ್ಯಾಸಕ ಡಾ|ಸುರೇಶ್ ಬಾಬು,ಎ ಚ್.ಕೆ. ಕೊಟ್ರಪ್ಪ ,ಆವರಗೆರೆ ವಾಸುಮಾತನಾಡಿದರು.ಕಾರ್ಮಿಕ ಮುಖಂಡರಾದ ಟಿ. ಎಸ್. ನಾಗರಾಜ್,ಮಹಮದ್ ರμàಕ್, ವಿ. ಲಕ್ಷ್ಮಣ ಸೇರಿದಂತೆ ಇತರರುಇದ್ದರು. ಆರಂಭದಲ್ಲಿ ಇಪಾr ಗೆಳೆಯರು ಜಾಗೃತಿ ಗೀತೆಗಳನ್ನುಹಾಡಿದರು. ಕೆ. ಬಾನಪ್ಪ ಸ್ವಾಗತಿಸಿದರು ಎ.ತಿಪ್ಪೇಶ್‌ವಂದಿಸಿದರು.