Advertisement

“ಪರೀಕ್ಷಾ ಪೆ ಚರ್ಚಾ’ವೀಕ್ಷಿಸಿದ ವಿದ್ಯಾರ್ಥಿಗಳು

05:58 PM Apr 03, 2022 | Team Udayavani |

ದಾವಣಗೆರೆ: ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂಪೋಷಕರೊಂದಿಗೆ ಶುಕ್ರವಾರ ನಡೆಸಿದ “ಪರೀûಾಪೆ ಚರ್ಚಾ’ ಕಾರ್ಯಕ್ರಮವನ್ನು ದಾವಣಗೆರೆವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವೀಕ್ಷಿಸಿದರು.

Advertisement

ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂಬಿಎ, ಕನ್ನಡ,ಗಣಿತಶಾಸ್ತ್ರ, ಪತ್ರಿಕೋದ್ಯಮ, ಶಿಕ್ಷಣ ವಿಭಾಗದವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಪ್ರೊ|ಪಿ. ಲಕ್ಷ ¾ಣ್‌, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಬದುಕು,ಭವಿಷ್ಯವನ್ನು ನಿರ್ಧರಿಸುವ ಶೈಕ್ಷಣಿಕ ಸಾಧನೆಯಲ್ಲಿಅನುಸರಿಸಬೇಕಾದ ಮಾರ್ಗೋಪಾಯ ಮತ್ತುಅಭ್ಯಾಸದ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಅವರು ಅತ್ಯಂತ ಮಾರ್ಮಿಕವಾಗಿ, ಸರಳ ಶೈಲಿಯಲ್ಲಿವಿವರಿಸಿದ್ದಾರೆ. ಇದು ಎಲ್ಲ ವಿದ್ಯಾರ್ಥಿಗಳಿಗೆಪ್ರೇರಣೆಯಾಗಿದೆ ಎಂದರು.

ಪ್ರಧಾನಿ ಅವರ ಸಲಹೆಯಂತೆ ವಿದ್ಯಾರ್ಥಿಗಳಮೇಲೆ ಪಾಲಕರು ಹಾಗೂ ಶಿಕ್ಷಕರು ಅಂಕಗಳಿಕೆಗೆ ಒತ್ತಡ ಹೇರದೇ ಅವರ ಓದಿಗೆ ಅವಕಾಶ,ಸೌಲಭ್ಯಒದಗಿಸುವುದು ಮುಖ್ಯ.ಪರೀûಾ ಸಿದ್ಧತೆಗೆನೆರವಾಗಿ, ಓದಲು ಪೂರಕ ವಾತಾವರಣ ನಿರ್ಮಿಸಿದರೆಮಕ್ಕಳ ಶೈಕ್ಷಣಿಕ ಸಾಧನೆ ಸಹಕಾರಿ ಆಗಲಿದೆ ಎಂದರು.ಪ್ರಧಾನಿ ಮೋದಿ ಅವರ ಕಾರ್ಯಕ್ರಮದನೇರ ಪ್ರಸಾರ ವೀಕ್ಷಿಸಿದ ವಿದ್ಯಾರ್ಥಿಗಳು,ಇದೊಂದು ಮಹತ್ವಪೂರ್ಣ ಕಾರ್ಯಕ್ರಮ.ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆ, ಆತಂಕ,ಭಯಗಳನ್ನು ದೂರ ಮಾಡಿ ಏಕಾಗ್ರತೆಯಿಂದ ಓದುವಮಾದರಿಯನ್ನು ಪ್ರಧಾನಿ ಸರಳವಾಗಿ ತಿಳಿಸಿದರುಎಂದರು.

Advertisement

Udayavani is now on Telegram. Click here to join our channel and stay updated with the latest news.

Next