Advertisement

ರೈತರ ಹತ್ಯೆಗೈದವರಿಗೆ ಅತ್ಯುಗ್ರ ಶಿಕ್ಷೆಯಾಗಲಿ

03:09 PM Oct 06, 2021 | Team Udayavani |

ದಾವಣಗೆರೆ: ಉತ್ತರ ಪ್ರದೇಶದಲಿಖೀಂಪುರ ಖೇರಿಯಲ್ಲಿಬೆಂಗಾವಲು ವಾಹನ ಹರಿಸಿ ರೈತರಹತ್ಯೆ ಮಾಡಿದವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕು. ಮೃತರಕುಟುಂಬಗಳವರಿಗೆ ಸರ್ಕಾರಿ ಹುದ್ದೆ,1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಯುವಜನ ಫೆಡರೇಷನ್‌(ಎಐವೈಎಫ್‌) ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಿದರು.

Advertisement

ಸಂಘಟನೆ ರಾಜ್ಯ ಉಪಾಧ್ಯಕ್ಷಆವರಗೆರೆ ವಾಸು ಮಾತನಾಡಿ,ಉತ್ತರಪ್ರದೇಶದ ಲಿಖೀಂಪುರಖೇರಿಯಲ್ಲಿ ಪ್ರತಿಭಟನಾ ನಿರತರೈತರ ಮೇಲೆ ಕೇಂದ್ರ ಸಚಿವರಬೆಂಗಾವಲು ವಾಹನ ಹರಿಸಿಮೂವರು ರೈತರ ಕಗ್ಗೊಲೆಮಾಡಲಾಗಿದೆ. ನಂತರ ಭುಗಿಲೆದ್ದಹಿಂಸಾಚಾರದಲ್ಲಿ‌ ವಾಹನಗಳಿಗೆಬೆಂಕಿ ಹಚ್ಚಿದ್ದಾರೆ.

ಘಟನೆಯಲ್ಲಿಮೂವರು ರೈತರು ಮೃತಪಟ್ಟಿದ್ದು8ಕ್ಕೂ ಅಧಿ ಕ ಮಂದಿ ಗಂಭೀರವಾಗಿಗಾಯಗೊಂಡಿದ್ದಾರೆ. ಘಟನೆಗೆಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧಕಠಿಣ ಕ್ರಮ ಜರುಗಿಸಬೇಕು ಎಂದುಒತ್ತಾಯಿಸಿದರು.ಸಂಯುಕ್ತ ಕಿಸಾನ್‌ ಮೋರ್ಚಾದನಾಯಕರಿಗೆ ಕೇಂದ್ರ ಗೃಹವ್ಯವಹಾರಗಳ ರಾಜ್ಯ ಸಚಿವ ಅಜಯ್‌ಮಿಶ್ರ ಬಹಿರಂಗ ಬೆದರಿಕೆ ಹಾಕಿದ್ದಾರೆಎಂದು ಆರೋಪಿಸಿ ಪ್ರತಿಭಟನೆನಡೆಸುತ್ತಿದ್ದ ರೈತರ ಮೇಲೆ ಸಚಿವರಪುತ್ರ ಬೆಂಗಾವಲು ವಾಹನ ಹರಿಸಿದಪರಿಣಾಮ ಮೂವರು ರೈತರುಸಾವನ್ನಪ್ಪಿದ್ದಾರೆ. ಪ್ರತಿಭಟನೆಯನೇತೃತ್ವ ವಹಿಸಿದ್ದ ತೇಜೆಂದರ್‌ಸಿಂಗ್‌ ಮತ್ತಿತರರು ಗಂಭೀರವಾಗಿಗಾಯಗೊಂಡಿದ್ದಾರೆ.

ರೈತರ ಮೇಲೆಪೈಶಾಚಿಕ ದಾಳಿ ನಡೆಸಲಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.ಘಟನೆಯಲ್ಲಿ ಮೃತಪಟ್ಟಿರುವಮೂವರು ರೈತರ ಕುಟುಂಬಗಳಿಗೆ1 ಕೋಟಿ ರೂಪಾಯಿ ಪರಿಹಾರ,ಕುಟುಂಬ ವರ್ಗದವರಿಗೆ ಸರ್ಕಾರಿನೌಕರಿ ಮತ್ತು ಗಾಯಗೊಂಡವರಿಗೆ 50ಲಕ್ಷ ಪರಿಹಾರ ಘೋಷಣೆ ಮಾಡಬೇಕುಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು,ಎ. ತಿಪ್ಪೇಶ್‌, ನಿಟ್ಟುವಳ್ಳಿ ಜೀವನ್‌,ಗುರುಮೂರ್ತಿ, ಕೆ. ಬಾನಪ್ಪ,ಫಜಲಲ್ಲು, ಗದಿಗೇಶ್‌ ಪಾಳೇದ್‌,ಇರ್ಫಾನ್‌, ಎಚ್‌.ಎಂ. ಮಂಜುನಾಥ,ಮಂಜುನಾಥ ದೊಡ್ಡಮನೆ,ಮಂಜುನಾಥ ಹರಳಯ್ಯನಗರ,ರುದ್ರೇಶ್‌ ಮಳಲಕೆರೆ, ಪರಶುರಾಮ,ವಿನಯ್‌, ಹರೀಶ್‌, ಆಂಜಿನಪ್ಪಮಳಲಕೆರೆ, ಮಂಜುನಾಥ ಮಳಲಕೆರೆಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next