ದಾವಣಗೆರೆ: ಗಣರಾಜ್ಯೋತ್ಸವಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಅವರಿಗೆ ಅಪಮಾನ ಮಾಡಿರುವ ಚನ್ನಗಿರಿತಾಲೂಕು ಅಜ್ಜಿಹಳ್ಳಿ ಗ್ರಾಮ ಪಂಚಾಯತ್‌ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಮಾಡಬೇಕು ಎಂದು ಕರ್ನಾಟಕ ದಲಿತಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪಸ್ಥಾಪಿತ) ಜಿಲ್ಲಾ ಸಂಚಾಲಕ ಕುಂದುವಾಡಮಂಜುನಾಥ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಗಣರಾಜ್ಯೋತ್ಸವದಸಂದರ್ಭದಲ್ಲಿ ಅಂಬೇಡ್ಕರ್ ಅವರಭಾವಚಿತ್ರ ಇಡದೆ ಅಪಮಾನ ಮಾಡಿರುವಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಪಂಚಾಯತ್ ಸಿಇಒ ಅವರಿಗೆ ಮನವಿಸಲ್ಲಿಸಲಾಗುವುದು. ಒಂದು ವಾರದಲ್ಲಿಅಮಾನತುಗೊಳಿಸದೇ ಇದ್ದಲ್ಲಿ ಜಿಲ್ಲಾಪಂಚಾಯತ್ ಕಚೇರಿಗೆ ಮುತ್ತಿಗೆಹಾಕಲಾಗುವುದು ಎಂದು ಎಚ್ಚರಿಸಿದರು.
ಗಣರಾಜ್ಯೋತ್ಸವದಂದು ಮಹಾತ್ಮಗಾಂಧೀಜಿ ಮತ್ತು ಅಂಬೇಡ್ಕರ್‌ರವರಭಾವಚಿತ್ರವನ್ನು ಧ್ವಜದ ಕಂಬದ ಬಳಿ ಇಡದೆಕಚೇರಿ ಒಳಗಿಟ್ಟು ಪೂಜೆ ಮಾಡಲಾಗಿದೆ.ಧ್ವಜದ ಕಂಬದ ಬಳಿ ಭಾವಚಿತ್ರಗಳನ್ನಿಟ್ಟುಪೂಜೆ ಮಾಡಲು ಸರ್ಕಾರದ ಆದೇಶವೇಇರುವುದಿಲ್ಲ ಎಂದು ಉತ್ತರಿಸುವ ಮೂಲಕಪಿಡಿಒ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆಎಂದು ದೂರಿದರು.ಅಂಬೇಡ್ಕರ್‌ರವರ ಭಾವಚಿತ್ರಇಡದೆ ಅಪಮಾನ ಮಾಡಿರುವ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕುಎಂದು ಒತ್ತಾಯಿಸಿ ಚನ್ನಗಿರಿ ತಾಲೂಕುಪಂಚಾಯತ್ ಕಾರ್ಯ ನಿರ್ವಹಕಾಧಿಕಾರಿಗೆಮನವಿ ಸಲ್ಲಿಸಲಾಗಿತ್ತು.
ಅವರು ನೀಡಿದ್ದನೋಟಿಸ್‌ಗೆ ಗ್ರಾಮ ಪಂಚಾಯತ್ ಕಚೇರಿಎನ್.ಎಚ್-13 ಪಕ್ಕದಲ್ಲೇ ಇರುವುದರಿಂದಬಸ್, ವಾಹನಗಳ ಸಂಚಾರದಿಂದ ಗಾಳಿ,ದೂಳು ಆಗುವದ ಜೊತೆಗೆ ಬಿಸಿಲು ಇರುವಕಾರಣಕ್ಕೆ ಕಚೇರಿ ಒಳಗೆ ಇಬ್ಬರ ಫೋಟೋಇಟ್ಟು ಪೂಜೆ ಮಾಡಲಾಗಿದೆ ಎಂದು ಪಿಡಿಒಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ಕಚೇರಿಒಳಗಡೆ ಅಂಬೇಡ್ಕರ್ ಅವರ ಭಾವಚಿತ್ರವನ್ನೇಇಟ್ಟಿಲ್ಲ ಎಂದರು.ಸಮಿತಿಯ ಚಿತ್ರಲಿಂಗಪ್ಪ ಗಾಂಧಿನಗರ,ರಮೇಶ್ ಚಿಕ್ಕೂಲಿಕೆರೆ, ಹಾಲೇಶ್,ನಿಂಗರಾಜ್, ಮಹಾಂತೇಶ್, ಉಮಾಪತಿ,ಅಂಜಿನಪ್ಪ ಬನ್ನಿಹಟ್ಟಿ, ರಮೇಶ್ ಜಮ್ಮಾಪುರಸುದ್ದಿಗೋಷ್ಠಿಯಲ್ಲಿದ್ದರು.