Advertisement

ಖಾಸಗಿ ಬಸ್‌ ನಿಲ್ದಾಣ ಉದ್ಘಾಟನೆ ಶೀಘ್ರ

01:10 PM Mar 04, 2022 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವಖಾಸಗಿ ಬಸ್‌ ನಿಲ್ದಾಣವನ್ನು ಏಪ್ರಿಲ್‌ನಲ್ಲಿಉದ್ಘಾಟಿಸಲಾಗುವುದು ಎಂದು ಸಂಸದ ಡಾ|ಜಿ.ಎಂ. ಸಿದ್ದೇಶ್ವರ ತಿಳಿಸಿದರು.

Advertisement

ಗುರುವಾರ ಖಾಸಗಿ ಬಸ್‌ ನಿಲ್ದಾಣ ಮತ್ತುಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿನ ಎಸ್‌ಟಿಪಿಐ ಕಾಮಗಾರಿ ಪರಿಶೀಲನೆ ನಡೆಸಿದ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಬಸ್‌ ನಿಲ್ದಾಣ ಕಾಮಗಾರಿಯನ್ನು 2019ರಲ್ಲಿಪ್ರಾರಂಭಿಸಲಾಗಿತ್ತು. ಹಲವಾರು ಕಾರಣದಿಂದಕಾಮಗಾರಿ ವಿಳಂಬವಾಗಿದೆ ಎಂದು ಗುತ್ತಿಗೆದಾರರುಸಬೂಬು ಹೇಳುತ್ತಿದ್ದಾರೆ.

ಏನೇ ಆದರೂ ಏಪ್ರಿಲ್‌ಒಳಗೆ ಕಾಮಗಾರಿ ಮುಗಿಸಲೇಬೇಕು ಎಂದುಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಏಪ್ರಿಲ್‌ನಲ್ಲಿ ಖಾಸಗಿಬಸ್‌ ನಿಲ್ದಾಣ ಉದ್ಘಾಟನೆ ನೆರವೇರಿಸಿಯೇ ಸಿದ್ಧಎಂದರು.ಖಾಸಗಿ ಬಸ್‌ ನಿಲ್ದಾಣದ ನೆಲಮಹಡಿಯಲ್ಲಿಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು.

ಪ್ರಯಾಣಿಕರು ವಿಶ್ರಾಂತಿ ಪಡೆಯಲು ಅಗತ್ಯವಾದವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲಾಗುತ್ತದೆ.ವಿಶ್ರಾಂತಿ ಕೊಠಡಿ ಹಾಗೂ ಕ್ಯಾಂಟೀನ್‌ನಲ್ಲಿಶೌಚಾಲಯ ವ್ಯವಸ್ಥೆ ಮಾಡುವಂತೆ ಗುತ್ತಿಗೆದಾರರಿಗೆಸೂಚಿಸಲಾಗಿದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next