Advertisement
ಹಾಗಾಗಿ ಜಿಲ್ಲೆಯ ಜನರಬಹು ದಿನಗಳ ಬೇಡಿಕೆ ಈಡೇರಿಸುವ ಮೂಲಕಮುಂದಿನ ವಿಧಾನಸಭಾ ಚುನಾವಣೆಗೆ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಲೆಕ್ಕಾಚಾರದಹಿನ್ನೆಲೆಯಲ್ಲಿ ನೆರೆಯ ಹಾವೇರಿ ಜಿಲ್ಲೆಯಶಿಗ್ಗಾಂವಿ ಕ್ಷೇತ್ರ ಪ್ರತಿನಿಧಿಸುವ ಬಸವರಾಜಬೊಮ್ಮಾಯಿ ದಾವಣಗೆರೆಗೂ ಭರಪೂರ ಕೊಡುಗೆನೀಡಬಹುದು ಎಂಬ ಕಾತರ ಮನೆ ಮಾಡಿದೆ.”ಮೆಡಿಕಲ್ ಹಬ್’ ಖ್ಯಾತಿಯದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯಕಾಲೇಜು ಆಗಬೇಕು ಎಂಬ ಬಹು ದಶಕಗಳಬೇಡಿಕೆ ಕಳೆದ ಬಜೆಟ್‌ನಲ್ಲಿ ಈಡೇರಿತ್ತು.ಆದರೆ ಪೂರ್ಣ ಪ್ರಮಾಣದಲ್ಲಿ ಆಗದೆ ಖಾಸಗಿಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಆದ ಕಾರಣ ಎಲ್ಲರಿಗೂಬೇಸರ ಇದೆ. ಪಿಪಿಪಿ ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಪ್ರಾರಂಭಿಸಿದರೆಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲ.
Related Articles
Advertisement
ಬಜೆಟ್‌ನಲ್ಲಿ ಉಪ ಕೇಂದ್ರದ ಬಗ್ಗೆ ದಿಟ್ಟ ಹೆಜ್ಜೆ ಇಡುವಮೂಲಕ ಬಸವರಾಜ ಬೊಮ್ಮಾಯಿಯವರುಯಡಿಯೂರಪ್ಪ ಅವರ ಘೋಷಣೆಗೆ ಪೂರಕವಾಗಿಸ್ಪಂದಿಸುವ ಮೂಲಕ ವಿವಿಧ ಜಿಲ್ಲೆಯ ಜನರಿಗೆಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.ಜವಳಿ ಮಿಲ್‌ಗಳಿಂದ ಒಂದೊಮ್ಮೆ”ಮ್ಯಾಂಚೆಸ್ಟರ್’ ಖ್ಯಾತಿ ಹೊಂದಿದ್ದದಾವಣಗೆರೆಯಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರಸರ್ಕಾರದಲ್ಲಿ ಮಂಜೂರಾಗಿದ್ದ ಜವಳಿ ಪಾರ್ಕ್‌ಇನ್ನೂ ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಜವಳಿ ಪಾರ್ಕ್‌ಗೆಇನ್ನಷ್ಟು ಉತ್ತೇಜನ ನೀಡಿದಲ್ಲಿದಾವಣಗೆರೆಯ ಇತಿಹಾಸಒಂದಷ್ಟು ಮರುಕಳಿಸುವ,ಸಾವಿರಾರು ಜನರಿಗೆ ಉದ್ಯೋಗಭದ್ರತೆ ದೊರೆಯಲಿದೆ.ಪ್ರವಾಸೋದ್ಯಮ ಕ್ಷೇತ್ರದಲ್ಲಿಹಿಂದುಳಿದಿರುವ ಜಿಲ್ಲೆಯಲ್ಲಿಪ್ರವಾಸಿ ತಾಣಗಳ ಅಭಿವೃದ್ಧಿ ಕ್ರಮಕೈಗೊಂಡಲ್ಲಿ ಪ್ರವಾಸೋದ್ಯಮದಜೊತೆಗೆ ಜನರ ಆರ್ಥಿಕ ಸ್ಥಿತಿಯೂಉತ್ತಮವಾಗಲಿದೆ. ಕಳೆದಭಾನುವಾರ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸೋದ್ಯಮಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ಬಹು ನಿರೀಕ್ಷಿತದಾವಣಗೆರೆ-ಬೆಂಗಳೂರು ರೈಲ್ವೆ ಯೋಜನೆ,ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯ ತನ್ನ ಪಾಲುನೀಡಲಿ ಎಂಬ ಬೇಡಿಕೆಯೂ ಇದೆ.
ರಾ. ರವಿಬಾಬು