ದಾವಣಗೆರೆ: ಕೂಡಲ ಸಂಗಮದಮಾದರಿಯಲ್ಲಿ ಶಿವಶರಣ ಮಾದಾರಚನ್ನಯ್ಯನವರ ಜನ್ಮಸ್ಥಳ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಅಭಿವೃದ್ಧಿಗೆ ರಾಜ್ಯ ಸರ್ಕಾರಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಕರ್ನಾಟಕಮಾದಾರ ಚನ್ನಯ್ಯ ಸೇನೆ ರಾಜ್ಯ ಅಧ್ಯಕ್ಷಕೆ.ಎಂ. ಜಯಗೋಪಾಲ್ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಸವಾದಿ ಶರಣರಲ್ಲಿಪ್ರಮುಖರಾದ ಶಿವಶರಣ ಮಾದಾರಚನ್ನಯ್ಯನವರು ಕಾಯಕ, ಲಿಂಗಪೂಜೆ, ಭಕ್ತಿಶ್ರೇಷ್ಠತೆಯ ಮೂಲಕ ಮಾದರಿಯಾಗಿದ್ದಾರೆ.ಅವರ ಜನ್ಮಸ್ಥಳವನ್ನ ಕೂಡಲಸಂಗಮದಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಸವ ತತ್ವಅನುಯಾಯಿಯಾಗಿರುವ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ500 ಕೋಟಿ ರೂ. ಅನುದಾನ ನೀಡಬೇಕುಎಂದರು.
ಕಲ್ಯಾಣ ಕ್ರಾಂತಿಯ ನಂತರ ಶರಣಸಂಕುಲ ಕಲ್ಯಾಣದಿಂದ ಉಳವಿಯವರೆಗೆಪ್ರಾಣ ರಕ್ಷಣೆಗಾಗಿ ಪಲಾಯನ ಮಾಡಿದಸಂದರ್ಭದಲ್ಲಿ ಅನೇಕ ವಚನಗಳುನಾಶವಾಗಿವೆ. ರಾಜ್ಯ ಸರ್ಕಾರ ಸಮಸ್ತ ವಚನಸಾಹಿತ್ಯವನ್ನ ತಲುಪಿ ಸಲು ಅಗತ್ಯ ಕ್ರಮತೆಗೆದುಕೊಳ್ಳಬೇಕು. ರಾಜ್ಯದ ಯಾವುದಾದರೂಒಂದು ವಿಶ್ವವಿದ್ಯಾಲಯಕ್ಕೆ ಶರಣ ಮಾದಾರಚನ್ನಯ್ಯನವರ ಹೆಸರಿಡಬೇಕು. ಅಧ್ಯಯನಪೀಠ ಪ್ರಾರಂಭಿಸಬೇಕು ಎಂದು ಮನವಿಮಾಡಿದರು.
ಇತೀ¤ಚಿಗೆ ಕೆಲವರು ಜಾತಿ ಆಧಾರಿತಅಭಿವೃದ್ಧಿ ನಿಗಮ, ಮಂಡಳಿಗಳ ರದ್ದತಿ ಕೋರಿನ್ಯಾಯಾಲಯದ ಮೊರೆ ಹೋಗಿದ್ದಾರೆ.ರಾಜ್ಯ ಸರ್ಕಾರ ನಿಗಮ-ಮಂಡಳಿಗಳನ್ನುರದ್ದುಪಡಿಸದೆ ಜನಸಂಖ್ಯಾವಾರು ಅಗತ್ಯಅನುದಾನ ಬಿಡುಗಡೆ ಮಾಡಬೇಕು.ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವನ್ಯಾಯಮೂರ್ತಿ ಎ.ಜೆ. ಸದಾಶಿವಆಯೋಗದ ವರದಿ ಬಗ್ಗೆ ಚರ್ಚಿಸಿ ಕೇಂದ್ರಕ್ಕೆಶಿಫಾರಸು ಮಾಡುವ ಮೂಲಕ ಜನಸಂಖ್ಯೆಹೆಚ್ಚಿರುವ ಸಮಾಜಕ್ಕೆ ಒಳಮೀಸಲಾತಿ ಸೌಲಭ್ಯಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಂಗಳೂರಿನ ಕುದ್ರೋಳಿಯಲ್ಲಿರುವಅಲ್ಲಮಪ್ರಭುಗಳ ಅನುಭವ ಮಂಟಪಸರ್ಕಾರದ ಅನಾದಾರದ ಕಾರಣಶಿಥಿಲಾವಸ್ಥೆಯಲ್ಲಿದೆ. ಸರ್ಕಾರ ಹೆಚ್ಚಿನಅನುದಾನ ನೀಡುವ ಮೂಲಕ ಅನುಭವಮಂಟಪಕ್ಕೆ ಶಕ್ತಿ ತುಂಬಬೇಕು. ದಾವಣಗೆರೆವಿಶ್ವವಿದ್ಯಾಲಯದಲ್ಲಿ 5 ವರ್ಷಗಳಿಂದ ಗುತ್ತಿಗೆಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆಸಮಾನ ಕೆಲಸಕ್ಕೆ ಸಮಾನ ವೇತನ ನೀಡಿಉದ್ಯೋಗ ಭದ್ರತೆ ಒದಗಿಸಬೇಕು ಎಂದರು.ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಎನ್. ಮಲ್ಲೇಶ್ ಕುಕ್ಕುವಾಡ, ಬೆಂಗಳೂರುವಿಭಾಗದ ಅಧ್ಯಕ್ಷ ಜಿ.ಎಸ್. ಶಂಭುಲಿಂಗಪ್ಪಸುದ್ದಿಗೋಷ್ಠಿಯಲ್ಲಿದ್ದರು.