Advertisement

ಚಿರತೆ ಸೆರೆ ಹಿಡಿಯಲು ಜಂಟಿ ಕಾರ್ಯಾಚರಣೆ

03:23 PM Sep 29, 2021 | Team Udayavani |

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳವಿವಿಧ ಗ್ರಾಮಗಳಲ್ಲಿ ಚಿರತೆ ಹಾಗೂ ಎರಡು ಮರಿಗಳು ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದಾರೆ ಚಿರತೆ ಹಾಗೂ ಎರಡು ಮರಿಗಳನ್ನು ಸೆರೆ ಹಿಡಿದು ಕಾಡಿಗೆ ಕಳುಹಿಸಲು ಜಂಟಿ ಕಾರ್ಯಾಚರಣೆ ಪಡೆಯನ್ನು ರಚಿಸಲು ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆದ ತುರ್ತುಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ತಹಶೀಲ್ದಾರ್‌ ಬಸನಗೌಡ ಕೊಟೂರು ಅವರ ಅಧ್ಯಕ್ಷತೆಯಲ್ಲಿಈ ಸಭೆ ನಡೆಯಿತು. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನದಾನಿಹಳ್ಳಿ, ಬಸವನಹಳ್ಳಿ, ಅರಬಗಟ್ಟೆ, ಕಡದಕಟ್ಟೆ, ಸೊರಟೂರು, ಮಾದನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ಚಿರತೆ ಹಾಗೂ ಎರಡು ಮರಿಗಳನ್ನು ಕೇಜ್‌ ಮೂಲಕ ಸೆರೆ ಹಿಡಿದುಕಾಡಿಗೆ ಮರಳಿಸಲು ತಂಡಗಳನ್ನು ರಚನೆ ಮಾಡಲಾಯಿತು.ತಂಡದ ಮೇಲುಸ್ತುವಾರಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಯಿತು.

ಜಂಟಿ ಕಾರ್ಯಾಚರಣೆ ಪಡೆಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಹಶೀಲ್ದಾರರು, ತಾಪಂ ಇಒಗಳು, ಚನ್ನಗಿರಿ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರು, ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸ್‌ ವೃತ್ತದ ಇನ್ಸ್‌ಪೆಕ್ಟರ್‌ ಹಾಗೂ ಪಿಎಸ್‌ಐಗಳು, ಅಗ್ನಿಶಾಮಕದಳದ ಅಧಿಕಾರಿ, ಸಂಬಂಧಪಟ್ಟ ಗ್ರಾಮಗಳಪಂಚಾಯಿತಿ ಅಭಿವೃದ್ಧಿ ಅ ಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಮೇಲುಸ್ತುವಾರಿ ಅಧಿ ಕಾರಿಗಳಾಗಿದ್ದಾರೆ. ನ್ಯಾಮತಿತಹಶೀಲ್ದಾರ್‌ ತನುಜಾ, ಅರಣ್ಯಾಧಿ ಕಾರಿ ದೇವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next