Advertisement

ಕಾಂಗ್ರೆಸ್‌ ಪಾದಯಾತ್ರೆ ಮಾಡಿದರೆ ಮೇಕೆದಾಟು ಯೋಜನೆ ಆಗಲ್ಲ

04:43 PM Feb 26, 2022 | Team Udayavani |

ದಾವಣಗೆರೆ: ಕಾಂಗ್ರೆಸ್‌ನವರು ಪಾದಯಾತ್ರೆಮಾಡುವುದರಿಂದ ಮೇಕೆದಾಟು ಯೋಜನೆ,ಅಣೆಕಟ್ಟು ಆಗುವುದಿಲ್ಲ ಎಂದುವಿಧಾನ ಪರಿಷತ್ತು ಸದಸ್ಯೆತೇಜಸ್ವಿನಿ ಗೌಡ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರೆಮೇಕೆದಾಟು ಯೋಜನೆ ಆಗುವುದಿಲ್ಲ.

Advertisement

ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಬಿಜೆಪಿಸರ್ಕಾರದಿಂದಲೇ ಯೋಜನೆಯೂ ಆಗುತ್ತದೆ.ಅಣೆಕಟ್ಟು ನಿರ್ಮಾಣವೂ ಆಗುತ್ತದೆ ಎಂದರು.ಮೇಕೆದಾಟು ಯೋಜನೆಗಾಗಿ ಮತ್ತೆ ಬಂಡೆ(ಡಿ.ಕೆ. ಶಿವಕುಮಾರ್‌) ಅವರು ಪಾದಯಾತ್ರೆಮಾಡುತ್ತಿದ್ದಾರೆ. ಅವರ ಕಾಲುಗಳಿಗೆ ಯಾಕೆತೊಂದರೆ ಕೊಡಬೇಕು. ಅವರು ಆರೋಗ್ಯದಕಡೆ ಗಮನ ನೀಡಬೇಕು ಎಂದು ಸಲಹೆನೀಡಿದರು.

ಸಚಿವ ಕೆ.ಎಸ್‌. ಈಶ್ವರಪ್ಪಅವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜಹಾರಿಸಲಾಗುವುದು ಎಂಬ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್‌ನವರು ಅಹೋರಾತ್ರಿಧರಣಿ ಮಾಡುವ ಮೂಲಕ ಸದನದಅಮೂಲ್ಯ ಸಮಯ ಹಾಳು ಮಾಡಿದರು.ಸದನದಲ್ಲಿ ಮಾತನಾಡಿದರೆ ಸಮಸ್ಯೆಗೆಪರಿಹಾರವಾದರೂ ಸಿಗುತ್ತಿತ್ತು. ಶಾಸನವಾದರೂಆಗುತ್ತಿದ್ದವು. ಕಾಂಗ್ರೆಸ್‌ನವರು ಪ್ರಶ್ನೋತ್ತರಕಲಾಪ, ಶೂನ್ಯವೇಳೆ ಯಾವುದಕ್ಕೂ ಅವಕಾಶಕೊಡಲಿಲ್ಲ.

ಜನರಿಗೆ ದ್ರೋಹ ಮಾಡಿದರು.ಅಹೋರಾತ್ರಿ ಧರಣಿಯ ಮೂಲಕ ಇಡೀಸದನವನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿದರುಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್‌ನವರು ಸದನದಲ್ಲಿ ಹಾಸಿಗೆ, ದಿಂಬಿಟ್ಟುಕೊಂಡುಧರಣಿ ಮಾಡುವುದರಿಂದ ಏನು ಆಗೊಲ್ಲ.ರಸ್ತೆ ಬದಿ ಇತರೆಡೆಯಾದರೂ ಆ ಕೆಲಸಮಾಡಿದ್ದರೆ ನಾಲ್ಕಾರು ಜನರ ಸಮಸ್ಯೆಯಾದರೂಕೇಳಬಹುದಿತ್ತು ಎಂದರು. ಮುಂದೆ ಯಾವುದೇಕಾರಣಕ್ಕೂ ಕಲಾಪದ ಸಮಯ ಹಾಳಾಗದಂತೆಬದಲಾವಣೆಯ ಅಗತ್ಯ ಇದೆ. ಬಿಜೆಪಿ ಯವರೇಆಗಲಿ ಯಾರೇ ಆಗಲಿ ಸದನದ ಸಮಯವ್ಯರ್ಥ ಆಗದಂತೆ ಬದಲಾವಣೆ ಆಗಬೇಕು. ಆನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದುಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next