Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

07:46 PM Feb 24, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಕಾರ್ಮಿಕರಿಗೆಆಗಿರುವ ಭವಿಷ್ಯನಿಧಿ ವಂಚನೆಗಳಕುರಿತು ಸಮಗ್ರ ತನಿಖೆ, ಇಎಸ್‌ಐಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಒದಗಿಸಬೇಕು ಎಂದು ಒತ್ತಾಯಿಸಿಬುಧವಾರ ಆಲ್‌ ಇಂಡಿಯಾಯುನೈಟೆಡ್‌ ಟ್ರೇಡ್‌ ಯೂನಿಯನ್‌ಸೆಂಟರ್‌ (ಎಐಯುಟಿಯುಸಿ)ನೇತೃತ್ವದಲ್ಲಿ ಕಾರ್ಮಿಕರು ಪಿಎಫ್‌,ಇಎಸ್‌ಐ ಕಚೇರಿ ಎದುರು ಪ್ರತಿಭಟನೆನಡೆಸಿದರು.

Advertisement

ಜಿಲ್ಲೆಯ ಸರ್ಕಾರಿ ಇಲಾಖೆ,ಶಾಲಾ-ಕಾಲೇಜು, ಔಷಧ ಸರಬರಾಜುಸಂಸ್ಥೆ, ಹೋಟೆಲ್‌, ರೆಸ್ಟೋರೆಂಟ್‌,ನೂಲು ತಯಾರಿಕಾ ಸಂಸ್ಥೆ, ಖಾಸಗಿಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿಸಹಸ್ರಾರು ಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಉದ್ಯೋಗದಾತರುಅಥವಾ ಏಜೆನ್ಸಿಯವರು ಕಾರ್ಮಿಕರಭವಿಷ್ಯನಿಧಿ ಹಣ ತುಂಬುವಲ್ಲಿ ಬಹಳಷ್ಟುವಂಚನೆ ಮಾಡುತ್ತಿದ್ದಾರೆ. ಸಂಘಟನೆಈ ರೀತಿಯ ಹಲವಾರು ವಂಚನೆಪ್ರಕರಣಗಳನ್ನು ಪತ್ತೆ ಹಚ್ಚಿ ಇμಎಫ್‌ಅಧಿಕಾರಿಗಳಿಗೆ ದೂರು ನೀಡಿದೆ.

ಆದರೆಈ ಕ್ಷಣಕ್ಕೂ ದೂರಿನ ವಿಚಾರಣೆಯನ್ನುಸಕಾಲದಲ್ಲಿ ಆರಂಭಿಸಿಲ್ಲ ಮತ್ತು ಕೆಲವುದೂರುಗಳನ್ನು ಇತ್ಯರ್ಥಪಡಿಸಿಲ್ಲ .ಕಾರ್ಮಿಕರು ಅಲೆದಾಡುವಂತಾಗಿದೆ.ಸಂಬಂಧಿತ ಅಧಿಕಾರಿಗಳು ಕೂಡಲೇದೂರುಗಳ ತನಿಖೆ ನಡೆಸಿ ವಂಚನೆಗೆಒಳಗಾದ ಕಾರ್ಮಿಕರಿಗೆ ನ್ಯಾಯಒದಗಿಸ ಬೇಕು. ದಾವಣಗೆರೆಕಚೇರಿಗೆ ಸಹಾಯಕ ಆಯುಕ್ತರನ್ನುನೇಮಕ ಮಾಡಬೇಕು ಎಂದುಪ್ರತಿಭಟನಾಕಾರರು ಒತ್ತಾಯಿಸಿದರು.ದಾವಣಗೆರೆಯ ಇಎಸ್‌ಐಆಸ್ಪತ್ರೆಯಲ್ಲಿ ಅತಿ ಅಗತ್ಯ ಮೂಲಸೌಲಭ್ಯಗಳೇ ಇಲ್ಲ.

ಸ್ಕಾÂನಿಂಗ್‌ ವ್ಯವಸ್ಥೆಇಲ್ಲದ ಕಾರಣಕ್ಕೆ ಖಾಸಗಿಯಾಗಿಸ್ಕಾÂನಿಂಗ್‌ಗೆ ಕಳಿಸುವುದರಿಂದಕಾರ್ಮಿಕರಿಗೆ ಸಾಕಷ್ಟು ತೊಂದರೆಆಗುತ್ತಿದೆ. ಕಾರ್ಮಿಕರು ತಮ್ಮ ಪಾಲಿನವಂತಿಗೆ ಪಾವತಿಸಿಯೂ ಖಾಸಗಿಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿಇದೆ. ಅನೇಕ ವರ್ಷಗಳಿಂದ ವೈದ್ಯರಕೊರತೆ ಇದೆ.

ನೇಮಕಾತಿಯೇ ಆಗಿಲ್ಲ.ಆರೋಗ್ಯ ವಿಮಾ ಸೌಲಭ್ಯವಿದ್ದರೂಚಿಕಿತ್ಸೆಗೆ ಪರದಾಡುವಂತಾಗಿದೆ.ಸರ್ಕಾರ ಕೂಡಲೇ ಅಗತ್ಯ ಮೂಲಸೌಲಭ್ಯ, ಯಂತ್ರೋಪಕರಣ,ವೈದ್ಯಕೀಯ ಮತ್ತು ವೈದ್ಯಕಿಯೇತರಸಿಬ್ಬಂದಿ ನೇಮಿಸಬೇಕು ಎಂದರು. ಜಿಲ್ಲಾಧ್ಯಕ್ಷ ಮಂಜುನಾಥ್‌ ಕೈದಾಳೆ,ಅಣಬೇರು ತಿಪ್ಪೇಸ್ವಾಮಿ, ಶಿವಾಜಿರಾವ್‌,ಜಿ. ಮಂಜುನಾಥ್‌, ಡಿ. ಕವಿತಾ, ಎಂ.ಜ್ಯೋತಿ, ಕೊಟ್ರಮ್ಮ, ಗೌರಮ್ಮ, ಸಿದ್ದಮ್ಮ,ಮರುಳಸಿದ್ದಪ್ಪ, ಮನೋಹರರಾವ್‌,ರಂಗಪ್ಪ, ಹರೀಶ್‌, ಡಿ. ರವಿಕುಮಾರ್‌,ರತ್ನಮ್ಮ, ಸಿದ್ದಮ್ಮ, ಜಯಲಕ್ಷ್ಮಿ,ಗಿರಿಜಮ್ಮ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next