ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಧರ್ಮದಹೆಸರಲ್ಲಿ ಜಗಳವಾಡಿ ಪ್ರಾಣ ತೆಗೆದು ಅಶಾಂತಿಸೃಷ್ಟಿಸುವ ಮನಸ್ಥಿತಿ ಕಂಡು ಬರುತ್ತಿದೆ ಎಂದುಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ನಗರದ ಎಂಸಿಸಿ ಎ ಬ್ಲಾಕ್‌ನ ಬಸವ ಮಂಟಪದಲ್ಲಿಬುಧವಾರ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಮತ್ತು ಶರಣಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳುಆಶೀರ್ವಚನ ನೀಡಿದರು.
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎನ್ನುತ್ತಾರೆ. ಈಗಿನಪರಿಸ್ಥಿತಿ ನೋಡಿದರೆ ಶಾಂತಿ ಎಂಬುದು ಇದೆಯೇಎಂದು ಪ್ರಶ್ನಿಸುವಂತಾಗಿದೆ ಎಂದರು.
ಒಬ್ಬರ ಮನಸ್ಸು ನೋಯಿಸುವ, ಘಾತ ಮಾಡುವಮನಸ್ಥಿತಿ ಹೆಚ್ಚಾಗಿ ಕಂಡು ಬರುತ್ತಿದೆ. ಬಾಹ್ಯಕ್ಕೂಅಂತರಂಗಕ್ಕೂ ಅಗಾಧ ವ್ಯತ್ಯಾಸದ ವರ್ತನೆ ಕಂಡುಬರುತ್ತಿದೆ. ನಡೆ, ನುಡಿ, ಸಿದ್ಧಾಂತ ಬದಲಾಗುತ್ತಿವೆ.ಶುದ್ಧಿ ಎನ್ನುವುದು ಕೇವಲ ಬಾಹ್ಯವಾಗಿ ಕಂಡುಬರುತ್ತಿದೆ. ಅಂತರಂಗದಲ್ಲಿ ಕೊಳಕು ತುಂಬುತ್ತಿದೆ.ಮಾನವರು ಕ್ರೂರ ಪಾಣಿಗಳಂತೆ ವರ್ತನೆಮಾಡುತ್ತಿದ್ದಾರೆ. ಒಳಗೊಂದು, ಹೊರಗೊಂದುಎಂಬುದು ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿಪೋಷಕರು, ಗುರುಗಳು, ಜನಪ್ರತಿನಿಧಿಗಳು ಸಂಸ್ಕಾರಕಲಿಸಿಕೊಡಿಸುವ ಕೆಲಸ ಮಾಡಬೇಕು ಎಂದು ಕರೆನೀಡಿದರು.