Advertisement

ಮತ್ತೆ ಭುಗಿಲೆದ್ದ ಹಿಜಾಬ್‌ ವಿವಾದ

03:03 PM Feb 22, 2022 | Team Udayavani |

ದಾವಣಗೆರೆ: ದಾವಣಗೆರೆಯಲ್ಲಿ ಶುಕ್ರವಾರಮತ್ತು ಶನಿವಾರ ತಣ್ಣಗಾಗಿರುವಂತೆ ಕಂಡುಬಂದಿದ್ದ ಹಿಜಾಬ್‌ ವಿವಾದ ಸೋಮವಾರಮತ್ತೆ ಭುಗಿಲೆದ್ದಿದೆ.ದಾವಣಗೆರೆಯ ಎ.ವಿ. ಕಮಲಮ್ಮಮಹಿಳಾ ಕಾಲೇಜು, ಸೀತಮ್ಮ ಸಂಯುಕ್ತಪದವಿ ಪೂರ್ವ ಕಾಲೇಜು, ಸರ್ಕಾರಿಪದವಿ ಕಾಲೇಜಿಗೆ ಹಿಜಾಬ್‌ ಧರಿಸಿಬಂದಿದ್ದ ಕೆಲ ವಿದ್ಯಾರ್ಥಿನಿಯರಿಗೆಅವಕಾಶ ನೀಡಲಿಲ್ಲ.

Advertisement

ವಿದ್ಯಾರ್ಥಿನಿಯರುತಮಗೆ ಹಿಜಾಬ್‌ನೊಂದಿಗೆ ತರಗತಿಗಳಿಗೆಹಾಜರಾಗಲು ಅನುಮತಿ ನೀಡಬೇಕುಎಂದು ಪಟ್ಟು ಹಿಡಿದರು. ಹೈಕೋಟ್‌ìನ ಮಧ್ಯಂತರ ಆದೇಶ ಪಾಲನೆಯಹಿನ್ನೆಲೆಯಲ್ಲಿ ಹಿಜಾಬ್‌ನೊಂದಿಗೆ ತರಗತಿಗಳಿಗೆ ಅನುಮತಿ ನೀಡಲಾಗದು. ಹಿಜಾಬ್‌ತೆಗೆದಿರಿಸಿ, ತರಗತಿಗಳಿಗೆ ಹಾಜರಾಗುವಂತೆಪ್ರಾಚಾರ್ಯರು, ಉಪನ್ಯಾಸಕರು ಸಾಕಷ್ಟುಬಾರಿ ಮನವರಿಕೆ ಮಾಡಿಕೊಟ್ಟರೂವಿದ್ಯಾರ್ಥಿನಿಯರು ಮಾತು ಕೇಳಲಿಲ್ಲ.ಕೊನೆಗೆ ಅನೇಕ ವಿದ್ಯಾರ್ಥಿನಿಯರುಕಾಲೇಜುನಿಂದ ಹೊರ ನಡೆದರು.

ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ70ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಹಿಜಾಬ್‌ನೊಂದಿಗೆ ತರಗತಿಗಳಿಗೆಅನುಮತಿ ನೀಡಬೇಕು ಎಂದುಒತ್ತಾಯಿಸಿದರು. ಪ್ರಾಚಾರ್ಯರು,ಉಪನ್ಯಾಸಕರು ಉತ್ಛ ನ್ಯಾಯಾಲಯಮತ್ತು ಸರ್ಕಾರದ ಆದೇಶ ಪಾಲನೆಮಾಡಿ, ಹಿಜಾಬ್‌ ಧರಿಸಿ ತರಗತಿಗೆಹಾಜರಾಗುವಂತೆ ತಿಳಿಸಿದರು.

ಆದರೆ,ವಿದ್ಯಾರ್ಥಿನಿಯರು ಪಟ್ಟು ಹಿಡಿದರು.ಪ್ರತಿಯೊಬ್ಬರೂ ನ್ಯಾಯಾಲಯದಆದೇಶ ಪಾಲನೆ ಮಾಡಬೇಕು. ನೀವು ಸಹನ್ಯಾಯಾಲಯದ ಆದೇಶದ ಅನ್ವಯಹಿಜಾಬ್‌ ತೆಗೆದಿರಿಸಿ ತರಗತಿಗಳಿಗೆಹಾಜರಾಗಲು ಉಪನ್ಯಾಸಕರು ಮನವಿಮಾಡಿದರು. ಆದರೆ, ವಿದ್ಯಾರ್ಥಿನಿಯರುಒಪ್ಪಲಿಲ್ಲ. ಹಿಜಾಬ್‌ನೊಂದಿಗೆ ತರಗತಿಗಳಿಗೆಹಾಜರಾಗಲು ಅನುಮತಿ ನೀಡಬೇಕುಎಂದು ಒತ್ತಾಯಿಸಿ ಕಾಲೇಜು ಮುಂದೆಕುಳಿತು ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next