ದಾವಣಗೆರೆ: ಕೇಂದ್ರ ಸರ್ಕಾರಜಾರಿಗೊಳಿಸಿರುವ ಮೂರು ಕೃಷಿಕಾಯ್ದೆ ರದ್ದು ಸೇರಿದಂತೆ ಇತರೆ ಬೇಡಿಕೆಈಡೇರಿಕೆಗೆ ಒತ್ತಾಯಿಸಿ ಸೋಮವಾರಕಾಂಗ್ರೆಸ್ ಕಾರ್ಯಕರ್ತರು, ರೈತರುಆನಗೋಡು ಸಮೀಪ ರಸ್ತೆ ತಡೆನಡೆಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯಕೆ.ಎಸ್. ಬಸವಂತಪ್ಪ ಮಾತನಾಡಿ, ಕೇಂದ್ರಸರ್ಕಾರ ಜಾರಿಗೊಳಿಸಿರುವ ಮೂರುಕೃಷಿ ಕಾಯ್ದೆ, ವಿದ್ಯುತ್ ಮಸೂದೆರೈತರಿಗೆ ಮಾರಕವಾಗಿವೆ. ಅಡುಗೆಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ.ಸೇವಾ ವಲಯಗಳನ್ನು ಕಾರ್ಪೋರೇಟ್‌ಸಂಸ್ಥೆಗಳಿಗೆ ಮಾರಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯಪ್ರಮುಖ ಬೆಳೆಗಳಾದ ಮೆಕ್ಕೆಜೋಳ,ಭತ್ತ, ಈರುಳ್ಳಿ, ತರಕಾರಿ ಬೆಲೆಗಳು ಕುಸಿತಕಂಡಿರುವುದರಿಂದರೈತರು ವ್ಯವಸಾಯವನ್ನು ತ್ಯಜಿಸುವಪರಿಸ್ಥಿತಿ ಉಂಟಾಗಿದೆ. ವಿದ್ಯುತ್ ಇಲಾಖೆಯ ಖಾಸಗೀಕರಣ ರೈತರು ಸೇರಿದಂತೆ ಜನಸಾಮಾನ್ಯರಿಗೆ ಭಾರೀ ಹೊರೆಯಾಗುವುದರಲ್ಲಿ ಸಂಶಯವೇ ಇಲ್ಲ. ಪೆಟ್ರೋಲ್, ಡೀಸೆಲ್ ಹಾಗೂಅಡುಗೆ ಅನಿಲ ಬೆಲೆಗಳನ್ನು ಏರಿಸಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಬೆಲೆ ಏರಿಕೆಗೆ ಕಾರಣವಾಗಿರುವ ಬಿಜೆಪಿ ಸರ್ಕಾರದ ನೀತಿ ಖಂಡನೀಯ ಎಂದು ದೂರಿದರು.
ಬುಳ್ಳಾಪುರ ಹನುಮಂತಪ್ಪ,ತುರ್ಚಘಟ್ಟದ ಕರಿಬಸಪ್ಪ, ಕೊಗ್ಗನೂರುಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದಕರಿಬಸಪ್ಪ, ಬಸವರಾಜ್, ಗ್ರಾಪಂ ಅಧ್ಯಕ್ಷನಸ್ರುಲ್ಲಾ, ಸದಸ್ಯರಾದ ಮಾದಪ್ಪ, ಸುರೇಶ್‌ಇತರರು ಇದ್ದರು.