Advertisement

ಸಮಗ್ರ ನೀರಾವರಿಗೆ ಅನುದಾನ ಮೀಸಲಿಡಿ

02:17 PM Feb 15, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಸಮಗ್ರನೀರಾವರಿಗೆ ಅಗತ್ಯ ಅನುದಾನ ಮೀಸಲಿಡಬೇಕುಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಸೋಮವಾರ ಅಖೀಲ ಭಾರತ ಕಿಸಾನ್‌ ಸಭಾಮುಖಂಡರು, ಪದಾಧಿಕಾರಿಗಳು ತಹಶೀಲ್ದಾರ್‌ ಕಚೇರಿಎದುರು ಪ್ರತಿಭಟನೆ ನಡೆಸಿದರು.ಅಖೀಲ ಭಾರತ ಕಿಸಾನ್‌ ಸಭಾದ ಜಿಲ್ಲಾ ಮಂಡಳಿಅಧ್ಯಕ್ಷ ಎಚ್‌. ಜಿ. ಉಮೇಶ್‌ ಅವರಗೆರೆ ಮಾತನಾಡಿ, ಸರ್ಕಾರಗಳು, ಜನಪ್ರತಿನಿ ಧಿಗಳು ರೈತರು ಈ ದೇಶದಬೆನ್ನೆಲುಬು ಎಂದು ಹೇಳುತ್ತಾರೆ.

Advertisement

ಆದರೆ ದೇಶದಬೆನ್ನಲುಬಾದ ರೈತಾಪಿ ವರ್ಗದವರ ನರನಾಡಿಗಳನ್ನೇತುಂಡು ಮಾಡುವಂತಹ ಕೆಲಸ ಮಾಡಲಾಗುತ್ತಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದಿನ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆಸ್ವಾತಂತ್ರÂ ಪೂರ್ವದಲ್ಲಿ ಮಹನೀಯರು ಕಟ್ಟಿದಕನಸುಗಳು ಹಾಗೆಯೇ ಉಳಿಯುವಂತಾಗಿವೆ.

ಆಡಳಿತ ವ್ಯವಸ್ಥೆ ರೈತರಿಗೆ ಮತ್ತು ನಾಗರಿಕರಿಗೆಮಾರಕವಾಗಿ ಪರಿಣಮಿಸಿದೆ. ನ್ಯಾಯಯುತ ಬೇಡಿಕೆಗೆಒತ್ತಾಯಿಸಿ ಹೋರಾಟ ಮಾಡುವ ರೈತರು ಮತ್ತುಕಾರ್ಮಿಕರನ್ನು ಭಯೋತ್ಪಾದಕರು ಎಂದು ಬಿಂಬಿಸಿಹಲ್ಲೆ ನಡೆಸಿರುವುದಲ್ಲದೆ ಮಾರಣಾಂತಿಕವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next