Advertisement

ಜಿಲ್ಲಾದ್ಯಂತ ಪ್ರೌಢಶಾಲೆ ಪುನರಾರಂಭ

02:02 PM Feb 15, 2022 | Team Udayavani |

ದಾವಣಗೆರೆ: ಹಿಜಾಬ್‌- ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿಶಾಲೆಗಳ ಬಂದ್‌ ನಂತರ ಸೋಮವಾರ ಜಿಲ್ಲಾದ್ಯಂತಪ್ರೌಢಶಾಲೆಗಳು ಪುನರಾರಂಭಗೊಂಡವು.ಹಿಜಾ¸-ಕೇಸರಿ ಶಾಲು ವಿವಾದದಿಂದ ಜಿಲ್ಲೆಯ ಕೆಲಭಾಗದಲ್ಲಿ ಅಹಿತಕರ ಘಟನೆ ನಡೆದಿತ್ತು.

Advertisement

ಈ ಕಾರಣಕ್ಕೆಸುಗಮ ಹಾಗೂ ಸುವ್ಯವಸ್ಥಿತವಾಗಿ ಶಾಲೆಗಳ ಪುನಾರಂಭಿಸುವಉದ್ದೇಶದಿಂದ ಜಿಲ್ಲಾಡಳಿತ, ರಕ್ಷಣಾ ಮತ್ತು ಶಿಕ್ಷಣ ಇಲಾಖೆಅಗತ್ಯ ಪೊಲೀಸ್‌ ಭದ್ರತೆ ಒಳಗೊಂಡಂತೆ ಎಲ್ಲ ರೀತಿಯಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಎಂದಿನಂತೆ ಶಾಲೆಗಳುಪುನಾರಂಭವಾಗಿವೆ.ಕೆಲ ಶಾಲೆಗಳಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ಕೆಲವಿದ್ಯಾರ್ಥಿನಿಯರ ಮನವೊಲಿಸಿ ಸಮವಸ್ತ್ರದಲ್ಲೇ ತರಗತಿಗೆಹಾಜರಾಗುವಲ್ಲಿ ಮತ್ತು ಪರೀಕ್ಷೆ ಬರೆಸುವಲ್ಲಿ ಶಿಕ್ಷಕರುಯಶಸ್ವಿಯಾದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್‌. ತಿಪ್ಪೇಶಪ್ಪಇತರರು ಮೋತಿ ವೀರಪ್ಪ, ಸೀತಮ್ಮ ಬಾಲಕಿಯರ ಸಂಯುಕ್ತಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಾಲೆಗಳಿಗೆ ಬರುವಾಗ, ಆವರಣದಲ್ಲಿ ಯಾವುದಾದರೂರೀತಿಯಲ್ಲಿ ತೊಂದರೆ ಆಯಿತೇ, ಯಾರಾದರೂ ಏನನ್ನಾದರೂಕೇಳಿದರೇ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಪ್ರಶ್ನಿಸಿದರು. ವಿದ್ಯಾರ್ಥಿಗಳು, ಯಾವುದೇ ರೀತಿಯ ತೊಂದರೆಆಗಲಿಲ್ಲ.

ಎಂದಿನಂತೆ ಶಾಲೆಗೆ ಬಂದಿದ್ದೇವೆ ಎಂದು ತಿಳಿಸಿದರು.ಯಾವುದೇ ವಿದ್ಯಾರ್ಥಿಗಳು ಯಾವುದಕ್ಕೂ ಅಂಜದೆ,ಅಳುಕದೆ, ಧೈರ್ಯ, ಆತ್ಮವಿಶ್ವಾಸದಿಂದ ಶಾಲೆಗಳಿಗೆಬರಬೇಕು.ಯಾವುದಕ್ಕೂ ಅಂಜುವ, ಅಳಕುವ ಅವಶ್ಯಕತೆಯೇಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ನಾನು ಮತ್ತು ನನ್ನತಂಡ ಇದೆ. ಹಾಗಾಗಿ ಯಾರೂ ಸಹ ಅಂಜುವ, ಅಳುಕುವಅಗತ್ಯತೆಯೇ ಇಲ್ಲ ಎಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಲ್ಲಿಆತ್ಮಸ್ಥೈರ್ಯ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next