ದಾವಣಗೆರೆ: ಸಮಾನತೆ ಬೋಧಿ ಸುವಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಸಮವಸ್ತ್ರ ಪಾಲನೆಮಾಡಬೇಕು ಎಂದು ಒತ್ತಾಯಿಸಿ ಗುರುವಾರಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಮುಖಾಂತರಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ರಾಜ್ಯದ ಕೆಲ ಭಾಗದಲ್ಲಿ ಶಾಲೆ,ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವುದಾಗಿ ಹಠಮಾಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಚರ್ಚೆಯ ವಿಷಯವಾಗಿದೆ . ಸರ್ಕಾರಿ ಶಾಲೆಎಂಬುದು ಸಮಾಜದಲ್ಲಿ ವಿದ್ಯಾದಾನದ ಕೇಂದ್ರವಾಗಿದೆ.ಮಕ್ಕಳು ಜಾತಿ, ಮತ, ಪಂಥ, ವರ್ಗಭೇದವಿಲ್ಲದೆಸಾಮರಸ್ಯದಿಂದ ಜ್ಞಾನಾರ್ಜನೆ ಮಾಡಲಿ ಎಂದುಸಮವಸ್ತ್ರದ ಶಿಸ್ತನ್ನು ತರಲಾಗಿದೆ ಎಂದು ತಿಳಿಸಿದರು.ಮೊದಲು ಭಾರತೀಯ ಸಂಸ್ಕೃತಿಯ ವಿದ್ಯಾದೇವತೆಸರಸ್ವತಿ ಪೂಜೆಯನ್ನು ಸೆಕ್ಯುಲರಿಸಂನ ಹೆಸರಿನಲ್ಲಿಈಗಾಗಲೇ ನಿಲ್ಲಿಸಲಾಗಿದೆ.
ಸಮಾಜದ ಅಸಮಾಧಾನಕ್ಕೆಕಾರಣವಾಗಿದೆ. ಈಗ ಶಾಲೆಯಲ್ಲಿ ಮಕ್ಕಳಿಗೆಮತಾಧಾರಿತ ತಾರತಮ್ಯ ಮೂಡುವಂತಹ ಉಡುಗೆತೊಡುಗೆಗಳಿಗೆ ಅವಕಾಶ ನೀಡುವುದು ಗಾಯದಮೇಲೆ ಉಪ್ಪನ್ನು ಸವರಿದಂತೆ ಆಗುತ್ತದೆ ಹಿಜಾಬ್‌ಧರಿಸುವುದು ಸಂವಿಧಾನ ನೀಡಿದ ಧಾರ್ಮಿಕಹಕ್ಕು ಎಂದು ಪ್ರತಿಪಾದನೆ ನಡೆಯುತ್ತಿದೆ ಎಂದುತಿಳಿಸಿದರು.ಇಂತಹ ವಿಚಾರಗಳಲ್ಲಿ ಸಂವಿಧಾನಭಾರತೀಯರೆಲ್ಲರಿಗೆ ಸಮಾನತೆಯನ್ನೂ ಪಾಲಿಸಲುಹೇಳಿರುವುದನ್ನು ಉದ್ದೇಶಪೂರ್ವಕವಾಗಿಮರೆಯಲಾಗುತ್ತದೆ.
ಸಂವಿಧಾನ ನೀಡಿರುವಧಾರ್ಮಿಕ ಹಕ್ಕನ್ನು ದುರುಪಯೋಗ ಮಾಡಿಕೊಂಡುಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮತೀಯಪ್ರತ್ಯೇಕತೆಯನ್ನು ಎತ್ತಿಹಿಡಿಯುವ ಪ್ರಯತ್ನದ ಹಿಂದೆಮಾನಸಿಕತೆಯ ಶಕ್ತಿಗಳಿರುವುದು ಮೇಲ್ನೋಟಕ್ಕೆಕಂಡುಬರುತ್ತಿದೆ. ಹಿಜಾಬ್ ಧರಿಸಿ ಬರುತ್ತಿರುವುದಕ್ಕೆಪ್ರತಿಯಾಗಿ ಹಿಂದು ವಿದ್ಯಾರ್ಥಿಗಳು ಕೆಲವುಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಿ ಬರುತ್ತಿರುವುದುಕಂಡು ಬರುತ್ತಿದೆ.
ಮುಂದುವರಿದು ಎಲ್ಲ ಕೋಮಿನವಿದ್ಯಾರ್ಥಿಗಳು ಅವರವರ ಸಾಂಪ್ರಧಾಯಿಕಉಡುಪು ಧರಿಸಿ ಕಾಲೇಜುಗಳಿಗೆ ಬಂದರೆ ಶೈಕ್ಷಣಿಕವಾತಾವರಣ ಸಂಪೂರ್ಣ ಹದಗೆಡುತ್ತದೆ. ಶಾಲಾಕಾಲೇಜುಗಳು ಮಕ್ಕಳ ಮನಸ್ಸಿನಲ್ಲಿ ಸಮಾನತೆಯಭಾವನೆ ಬೆಸೆಯಬೇಕೆ ಹೊರತು ಮಾನಸಿಕತೆಯನ್ನಲ್ಲ.ಆದ್ದರಿಂದ ಸಮಾಜದ ಶಾಂತಿಯ ಕಳಕಳಿಯುಳ್ಳಸರ್ಕಾರ ಗೊಂದಲಕಾರಿ ಕ್ರಮಗಳಿಗೆ ಅವಕಾಶನೀಡಬಾರದು ಎಂದು ಒತ್ತಾಯಿಸಿದರು.ವೇದಿಕೆಯ ಸತೀಶ ಪೂಜಾರಿ, ವೀರೇಶ್,ಮಂಜುನಾಥ್, ಗಣೇಶ, ಚಂದ್ರಮೌಳಿ, ಗಿರೀಶ,ಮಂಜುನಾಥ ಗಾಳಿ, ಮುನಿರಾಜ್, ಸಿದ್ದೇಶ್ ಇತರರುಇದ್ದರು.