Advertisement

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಸಾರಥಿ?

02:59 PM Feb 04, 2022 | Team Udayavani |

ಚಿತ್ರದುರ್ಗ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುದ್ದಿಯಬೆನ್ನಲ್ಲೆ ವಿವಿಧ ಪ್ರಾ ಧಿಕಾರಗಳು, ನಿಗಮ ಮಂಡಳಿಗಳ ಅಧ್ಯಕ್ಷರಬದಲಾವಣೆಗೂ ರಾಜ್ಯ ಸರಕಾರ ಮುಂದಾಗಿದೆ.ಇದಕ್ಕೆ ಪುಷ್ಠಿ ನೀಡುವಂತೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿ ಕಾರದಅಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು. ಮೂರ್‍ನಾಲ್ಕುದಿನಗಳಲ್ಲಿ ಹೊಸ ಅಧ್ಯಕ್ಷರ ನೇಮಕವಾಗಲಿದೆ.

Advertisement

2021 ಸೆಪ್ಟಂಬರ್‌ 4 ರಂದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಳೆದ ಒಂದು ವರ್ಷ ಐದು ತಿಂಗಳ ಕಾಲಜವಾಬ್ದಾರಿ ನಿರ್ವಹಿಸಿದ್ದ ಟಿ.ಬದರೀನಾಥ್‌ ಮೂರ್‍ನಾಲ್ಕು ದಿನಗಳಲ್ಲಿಹೊಸ ಅಧ್ಯಕ್ಷರಿಗೆ ಅ ಧಿಕಾರ ಹಸ್ತಾಂತರ ಮಾಡಲಿದ್ದಾರೆ.ಮೂರು ವರ್ಷ ಅವ ಧಿಯ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷಸ್ಥಾನವನ್ನು ಈ ಹಿಂದಿನಿಂದಲೂ ಪಕ್ಷ ನಿಷ್ಠರು ಹಾಗೂ ಕಾರ್ಯಕರ್ತರಿಗೆಅಧಿ ಕಾರ ನೀಡಲು ಎರಡು ಅಥವಾ ಮೂರು ಅವ ಧಿಗಳಾಗಿ ವಿಂಗಡಿಸಿಹಂಚಿಕೆ ಮಾಡುವುದು ವಾಡಿಕೆಯಾಗಿದೆ. ಈ ನಿಟ್ಟಿನಲ್ಲಿ 2021 ಸೆ.4ರಂದು ಕುಡಾ ಅಧ್ಯಕ್ಷರಾಗಿ ಅಧಿ ಕಾರ ವಹಿಸಿಕೊಂಡಿದ್ದ ಬದರೀನಾಥ್‌ಈಗ ಮತ್ತೂಬ್ಬರಿಗೆ ಅವಕಾಶ ಮಾಡಿಕೊಡಬೇಕಾಗಿದೆ.

ಪಾರ್ಕ್‌ ಅಭಿವೃದ್ಧಿಗೆ ಒತ್ತು ನೀಡಿದ ಬದರೀನಾಥ್‌: ಒಂದು ವರ್ಷಐದು ತಿಂಗಳ ಕಾಲ ಪ್ರಾ ಧಿಕಾರದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದಟಿ.ಬದರೀನಾಥ್‌ ಪಾರ್ಕ್‌ಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ.ತಮ್ಮ ಅ ಧಿಕಾರಾವ ಧಿಯಲ್ಲಿ ದಫೇದಾರ್‌ ನಾರಾಯಣಪ್ಪಬಡಾವಣೆಯಲ್ಲಿ ಸೈನಿಕ ಪಾರ್ಕ್‌ ಹಾಗೂ ತುರುವನೂರು ರಸ್ತೆಯಲ್ಲಿಒಂದು ಸೇರಿ ಎರಡು ಹೊಸ ಪಾರ್ಕ್‌ ನಿರ್ಮಿಸಿ ಉದ್ಘಾಟಿಸಿದ್ದಾರೆ.

ಇದರೊಟ್ಟಿಗೆ 8 ಉದ್ಯಾನವನಗಳ ಸಮಗ್ರ ಅಭಿವೃದ್ಧಿ, ಒತ್ತುವರಿತಡೆಯಲು ತಡೆಗೋಡೆ ನಿರ್ಮಾಣ, ಆಸ್ಪತ್ರೆ ಮುಂಭಾಗದವಿವೇಕಾನಂದ ಪಾರ್ಕ್‌, ವಿದ್ಯಾನಗರ ಸೇರಿದಂತೆ 4 ಪಾರ್ಕ್‌ಗಳಅಭಿವೃದ್ಧಿಗೂ ಅನುಮೋದನೆ ನೀಡಿದ್ದಾರೆ.ಇದೇ ವೇಳೆ ದಾವಣಗೆರೆ ರಸ್ತೆಯ ಮುರುಘಾ ಮಠದ ಮುಂದಿರುವಅರಸನ ಕೆರೆಯನ್ನು ಉತ್ತಮ ಪ್ರವಾಸಿ ತಾಣವಾಗಿ ರೂಪಿಸಲು ಮೊದಲಹಂತದಲ್ಲಿ 4.80 ಕೋಟಿ ರೂ.ಮೊತ್ತದ ಯೋಜನೆ ರೂಪಿಸಿದ್ದಾರೆ.ಭೂಮಿ ಪೂಜೆ ಮಾಡುವುದು ಮಾತ್ರ ಬಾಕಿಯಿದೆ.

ಎರಡನೇ ಹಂತದಕಾಮಗಾರಿಗೂ ಸಿದ್ಧತೆಗಳು ನಡೆದಿವೆ.ಧವಳಗಿರಿ ಬಡಾವಣೆಯಲ್ಲಿದ್ದ ಪ್ರಾ ಧಿಕಾರದ ದೊಡ್ಡ ನಿವೇಶನದಅರ್ಧದಷ್ಟನ್ನು ಇ-ಹರಾಜು ಮಾಡಿದ್ದು, ಇದರಲ್ಲಿ 4 ಕೋಟಿ ರೂ.ಗಳಷ್ಟು ಲಾಭವಾಗಿದೆ. ಇದರಿಂದ ಇದೇ ಬಡಾವಣೆಯಲ್ಲಿ 16 ಸಾವಿರಚದರ ಅಡಿಯ ನಿವೇಶನದಲ್ಲಿ ಹೈಟೆಕ್‌ ಕನ್ವೆನ್‌ಷನ್‌ ಹಾಲ್‌, ನ್ಪೋರ್ಟ್ಸ್ಕ್ಲಬ್‌ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು.ಇದರೊಟ್ಟಿಗೆ ನಗರದ ವಿವಿಧ ಉದ್ಯಾನಗಳು, ದೇವಸ್ಥಾನ,ಮಠ, ಮುಕ್ತಿಧಾಮಗಳಿಗೆ ನಗರಾಭಿವೃದ್ಧಿ ಪ್ರಾ ಧಿಕಾರದಿಂದ 400ಸಿಮೆಂಟ್‌ ಬೆಂಚ್‌ಗಳನ್ನು ನೀಡುವುದು ಸೇರಿದಂತೆ ಹಲವು ಅಭಿವೃದ್ಧಿಕಾಮಗಾರಿಗಳನ್ನು ಮಾಡಿದ್ದಾರೆ.

Advertisement

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next